ಚನ್ನಮ್ಮಳ ವಿಜಯೋತ್ಸವ ಸರ್ಕಾರ ಆಚರಿಸಲಿ
ಗದಗ: ದೇಶದ ಮೊದಲ ಸ್ವಾತಂತ್ರ್ಯ ಸೇನಾನಿ ವೀರರಾಣಿ ಕಿತ್ತೂರ ಚನ್ನಮ್ಮಳ ವಿಜಯೋತ್ಸವವನ್ನು ಪ್ರತಿ ವರ್ಷ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ಸರ್ಕಾರವೇ ಆಚರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಮಸಾಲಿ ಸಮಾಜ ಬಾಂಧವರು ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಮಾಜದ ಮುಖಂಡರು ಮಾತನಾಡಿ, ಪ್ರಥಮ ಸ್ವಾತಂತ್ರ್ಯ ಮಹಿಳಾ ಹೋರಾಟಗಾರ್ತಿ ಚನ್ನಮ್ಮಳ ಹೋರಾಟದ ಚರಿತ್ರೆ ನಮ್ಮ ನಾಡಿನ ಜನರಲ್ಲಿ ಸ್ಫೂರ್ತಿ ತುಂಬುವಂತಾಗಲು ಸರ್ಕಾರ ಪ್ರತಿವರ್ಷ ಮಹಿಳಾ ದಿನವನ್ನು ಅ. 23ರಂದು ಆಚರಿಸಬೇಕು. ಪ್ರತಿವರ್ಷ ಸರ್ಕಾರದಿಂದಲೇ ಕಿತ್ತೂರು ಚನ್ನಮ್ಮನ ವಿಜಯೋತ್ಸವವನ್ನು ಆಚರಿಸಬೇಕು. ಅಂದು ಸರ್ಕಾರಿ ರಜೆ ಘೋಷಿಸಬಾರದು ಎಂದು ಆಗ್ರಹಿಸಿದ್ದಾರೆ. ಎಫ್.ವಿ. ಮರಿಗೌಡ್ರ, ನಿಂಗಪ್ಪ ಪಡಗದ, ಬಸವರಾಜ ಅಪ್ಪಣ್ಣವರ, ವೀರಣ್ಣ ಕರಭಿಷ್ಠಿ, ಶಿವಣ್ಣ ನಾಗರಾಳ, ಜಗದೀಶ ಚೆನ್ನಪ್ಪಗೌಡ್ರ, ಮುತ್ತು ರೋಣದ, ಎಸ್.ಎಂ. ಪಾಟೀಲ, ಎಂ.ಎಸ್. ಪರ್ವತಗೌಡ್ರ, ಕಲ್ಲಪ್ಪ ಅಂಗಡಿ, ವಸಂತ ಪಡಗದ, ಶೇಖಣ್ಣ ಕನ್ಯಾಳ, ಅಮರೇಶ ಬೂದಿಹಾಳ, ಸದು ಕರಿಗೌಡ್ರ, ಎಸ್.ವಿ. ನೀಗಲಿ, ಪಾರ್ವತಿದೇವಿ ಮರಿಗೌಡ್ರ, ಸಾವಿತ್ರಿದೇವಿ ಪಾಟೀಲ, ನೀಲಮ್ಮ ಬುಳ್ಳಾನವರ, ಮೀನಾಕ್ಷಿ ಬೆನಕಣ್ಣವರ, ಜಾನಕಿಬಾಯಿ ಮಲ್ಲಾಪುರ, ಎಂ.ಬಿ. ದೇಸಾಯಿ, ಮಹಾಲಿಂಗಪ್ಪ. ಪಡಗದ, ಶಶಿಧರ ದಿಂಡೂರ, ಮುಳ್ಯಾಳ, ಬಿಳೆಯಲಿ, ಎಂ.ಕೆ. ಮಟ್ಟಿ, ರಾಚಪ್ಪ. ಕಮತರ, ಉಳವಪ್ಪ ಹೊಂಬಳ, ಇದ್ದರು.
ವಿಜಯೋತ್ಸವ: ಬೈಕ್-ಆಟೋ ರ್ಯಾಲಿ, ಕುಂಭಮೇಳ
ಗದಗ: ಗದುಗಿನಲ್ಲಿ ಅ. 27 ರಂದು ನಡೆವ ವೀರರಾಣಿ ಕಿತ್ತೂರ ಚನ್ನಮ್ಮಳ 190 ವಿಜಯೋತ್ಸವದಂದು ಬೃಹತ್ ಬೈಕ್ ಹಾಗೂ ಆಟೋ ರ್ಯಾಲಿ ಕೈಗೊಳ್ಳಲು ಯುವಕ ಮಂಡಳವು ಉತ್ಸಾಹದೊಂದಿಗೆ ಮುಂದೆ ಬಂದಿದೆ ಎಂದು ಅಖಿಲ ಕರ್ನಾಟಕ ವೀರರಾಣಿ ಕಿತ್ತೂರ ಚನ್ನಮ್ಮ ಸರ್ವಧರ್ಮ ಸಮಾಜ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಬಸವರಾಜ ದೇಸಾಯಿ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾನುವಾರ ಬೆಳಗ್ಗೆ 8.30ಕ್ಕೆ ಯುವಕ ಮಂಡಳದವರು ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಕಂಚಿನ ಪುತ್ಥಳಿ (ಭೂಮರಡ್ಡಿ ಸರ್ಕಲ್ ಬಳಿ) ಬೈಕ್ ಹಾಗೂ ಆಟೋದೊಂದಿಗೆ ಹಾಜರಿರಬೇಕು. ರ್ಯಾಲಿಯು ಜನರಲ್ ಕಾರ್ಯಪ್ಪ ಸರ್ಕಲ್ ಮಾರ್ಗವಾಗಿ ವೀರರಾಣಿ ಕಿತ್ತೂರ ಚನ್ನಮ್ಮ ಕಂಚಿನ ಪುತ್ಥಳಿಗೆ ಮುಕ್ತಾಯಗೊಂಡು, ನಂತರ ಸಾಮೂಹಿಕ ಮೆರವಣಿಗೆ ನಡೆಯುವುದು. ಕುಂಭ ಮೇಳದೊಂದಿಗೆ ಪಾಲ್ಗೊಳ್ಳುವ ಮುತ್ತೈದೆಯರಿಗೆ ಕುಂಭಕ್ಕೆ ಬೇಕಾಗುವ ಪೂಜಾ ಸಾಮಗ್ರಿಗಳನ್ನು ಮುಂಚಿತವಾಗಿ ನೀಡಲಾಗುವುದು. ಅದಕ್ಕಾಗಿ ಗದಗ ಕಾಶೀ ವಿಶ್ವನಾಥ ನಗರದ ಅಯ್ಯಪ್ಪ ಅಂಗಡಿ 9008325216 ಹಾಗೂ ಶಾಂತಪ್ಪ ಮುಳವಾಡ 9880851022 ಅವರನ್ನು ಸಂಪರ್ಕಿಸಬೇಕು.
ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ಧಾರವಾಡ ಸಮೀಪದ ಸುಳ್ಳದ ಜಗ್ಗಲಗಿ ಮೇಳ, ಹೆಗ್ಗೂಡಿನ ಮಹಿಳಾ ಡೊಳ್ಳು ಮೇಳ, ಶಿವಮೊಗ್ಗದ ಡೊಳ್ಳು ಮೇಳ, ಗದುಗಿನ ದುರಗಮರಗಿ ಮೇಳ, ಯಳವತ್ತಿಯ ನ್ಯೂ ಗಜಾನನ ಮ್ಯೂಜಿಕಲ್ ಬ್ರಾಸ್ ಬ್ಯಾಂಡ್ ಆರ್ಕೇಸ್ಟ್ರಾ ಕಂಪನಿಯ ಕಲಾ ತಂಡ, ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಹಾಗೂ ಕಲಾತಂಡದವರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

