ಭ್ರಷ್ಟಾಚಾರ ತೊಲಗಲು ನ್ಯಾಯಾಂಗ ಪಾತ್ರ ಪ್ರಮುಖ
ಗದಗ: ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದಲ್ಲಿ ದೌರ್ಜನ್ಯ ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಬಹುದೆಂದು ಪತ್ರಕರ್ತ ಆರ್.ಕೆ. ಜಮಾದಾರ ಅಭಿಪ್ರಾಯಪಟ್ಟರು.
ಅವರು ಬೆಟಗೇರಿಯ ಹುಯಿಲಗೋಳ ರಸ್ತೆಯ ಅರ್ಜುನಸಾ ಮೇರವಾಡೆ ನಿವಾಸದಲ್ಲಿ ನ್ಯಾಯಾಧೀಶರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವೀರಶೈವ ಸಮುದಾಯದ ಶಂಕರ ಮಾಳಶೆಟ್ಟಿ ಅವರಿಗೆ ಬೆಟಗೇರಿಯ ಸಮಾನ ಮನಸ್ಕರ ಒಕ್ಕೂಟ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಾಧನೆಗೆ ಬಡತನ ಅಡ್ಡಿ ಬರದು. ಅತಿಯಾದ ಆತ್ಮವಿಶ್ವಾಸ, ಸತತ ಪ್ರಯತ್ನ ಹಾಗೂ ಕಾಯಕ ಶ್ರದ್ಧೆ ಮೆರೆದರೆ ಉನ್ನತ ಗುರಿ ತಲುಪಲು ಸಾಧ್ಯ. ಶಂಕರ ಮಾಳಶೆಟ್ಟಿ ಬಾಲ್ಯಾವಸ್ಥೆಯಲ್ಲಿ ಅನೇಕ ಕಾಯಕಗಳನ್ನು ನಿರ್ವಹಿಸುವುದರೊಂದಿಗೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ ಪಡೆದು, ಸತತ ಅಧ್ಯಯನಶೀಲರಾಗಿ ತಮ್ಮ ಜೀವನದ ಗುರಿ ತಲುಪಿ ಇಂದು ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಎಂ.ಟಿ. ನಾಗರಾಳ ಮಾತನಾಡಿ, ಅತಿ ಎಳೆಯ ವಯಸ್ಸಿನಲ್ಲಿ ಎಸ್.ಬಿ. ಮಾಳಶೆಟ್ಟಿಯವರು ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ಪಡೆಯುವ ಮೂಲಕ ಸಮಾಜದ ಹಾಗೂ ಜಿಲ್ಲೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಪಸರಿಸಿದ್ದಾರೆ. ಇವರ ಸಾಧನೆ ಯುವ ಸಮುದಾಯಕ್ಕೆ ಸ್ಫೂರ್ತಿ ಎಂದರು. ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರ್ಜುನಸಾ ಮೇರವಾಡೆ, ಶರಣಯ್ಯ ಶಿವಪ್ಪಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಯಣ್ಣ ಡಂಬಳ, ಮಹಾಂತೇಶ ಬೆಟಗೇರಿ, ತಿಪ್ಪಣ್ಣ ನಾಗರಾಳ, ಶಶಿ ಮ್ಯಾಗೇರಿ, ಪ್ರಸನ್ನ ಬೆಳಮಕರ, ಮಂಜುನಾಥ ಕಟ್ಟಿ, ಸುರೇಶ ಮಟ್ಟಿ, ಶರಣಪ್ಪ ಆಲೂರ, ಅರ್ಜುನಸಾ ಅರಸಿದ್ದಿ, ದೀಪಕ ರಾಯಬಾಗಿ, ರಾಘವೇಂದ್ರ ರಾಯಬಾಗ, ಕುಮಾರ ಬಳ್ಳಾರಿ, ಅನಿಲ ಡಂಬಳ, ಆನಂದಸಿಂಗ್ ದೊಡ್ಡಮನಿ, ಪ್ರಶಾಂತ ಪಾಟೀಲ, ಶ್ಯಾಮ ಬಗಾಡೆ, ಶಿವು ಪೂಜಾರ, ವಿಠ್ಠಲಸಾ ಮೇರವಾಡೆ, ನೀಲಪ್ಪ ಕೇಲೂರ ಮುಂತಾದವರು ಉಪಸ್ಥಿತರಿದ್ದರು. ಸುನೀಲಸಿಂಗ್ ಲದ್ದಿಕೇರಿ ಸ್ವಾಗತಿಸಿದರು. ವೀರೇಂದ್ರಸಿಂಗ್ ರಜಪುತ ನಿರೂಪಿಸಿದರು. ಮಹಾದೇವ ಮೇರವಾಡೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

