ಗದಗ

ಇಂದು ಕರ್ನಾಟಕ ಜಾನಪದ ಪರಿಷತ್ ಉದ್ಘಾಟನೆ

Published On :

ಗದಗ:  ಕರ್ನಾಟಕ ಜಾನಪದ ಪರಿಷತ್‌ನ ಉದ್ಘಾಟನಾ ಸಮಾರಂಭವು ಅ. 26ರ ಬೆಳಗ್ಗೆ 10.30ಕ್ಕೆ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ಗೋಟಗೋಡಿಯ ಜಾನಪದ ವಿವಿಯ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ, ಡಿಸಿ ಎನ್.ಎಸ್. ಪ್ರಸನ್ನಕುಮಾರ, ಸಿಇಓ ವೀರಣ್ಣ ತುರಮರಿ, ಇಂದಿರಾ ಬಾಲಕೃಷ್ಣ, ಡಾ. ಎಚ್.ಆರ್. ರಾಜೇಗೌಡ, ಎಸ್.ಬಾಲಾಜಿ ಉಪಸ್ಥಿತರಿರುವರೆಂದು ಕಾರ್ಯದರ್ಶಿ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.

ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
 ಗದಗ: ರಕ್ಷಣಾ ಮಂತ್ರಾಲಯ ಪ್ರಥಮ ವರ್ಷದ ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರ ಕೇಂದ್ರೀಯ ಸೈನಿಕ ಮಂಡಳಿ ನವದೆಹಲಿ ಇವರು ಮಾಜಿ ಸೈನಿಕರ ಮಕ್ಕಳಿಗಾಗಿ 2013-14ನೇ ಸಾಲಿನ ಪ್ರಧಾನ ಮಂತ್ರಿಗಳ ಶಿಷ್ಯವೇತನದ ಅರ್ಜಿಯನ್ನು ಆಹ್ವಾನಿಸಿರುತ್ತಾರೆ. ಈ ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಅರ್ಜಿಯನ್ನು ಪೂರ್ಣಗೊಳಿಸಿ ನ. 20ರ ಒಳಗೆ ಸಲ್ಲಿಸಲು ಕೋರಲಾಗಿದೆ. ಅರ್ಜಿ ಮತ್ತು ಸೂಚನೆಗಳಿಗಾಗಿ ಢಿಢಿಢಿ.ಜಜಡಢಿ.್ಜ್ಟಢ.್ಝಟಿ ಸಂಪರ್ಕಿಸಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಧಾರವಾಡ ಕಾರ್ಯಾಲಯವನ್ನು ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.