ಉತ್ತಮ ಗ್ರಂಥಾಲಯ ಸ್ಥಾಪನೆಗೆ ಆದ್ಯತೆ
ಲಕ್ಷ್ಮೇಶ್ವರ: ನಗರದ ಮತ್ತು ಗ್ರಾಮಗಳ ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಸ್ಥಾಪನೆಗೆ ಉಚಿತ ಕಟ್ಟಡ ನೀಡಿದಲ್ಲಿ ಉತ್ತಮ ಗ್ರಂಥಾಲಯಗಳನ್ನು ಪ್ರಾರಂಭಿಸಲು ಇಲಾಖೆಯು ಸನ್ನದ್ಧವಾಗಿದೆ ಎಂದು ಗ್ರಂಥಾಲಯ ನಿರ್ದೇಶಕ ಎಂ.ಎಂ. ಬಡ್ನಿ ಹೇಳಿದರು. ಅವರು ಪಟ್ಟಣದ ಮಹಾಕವಿ ಪಂಪ ಸಾರ್ವಜನಿಕ ಗ್ರಂಥಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಮಾತನಾಡಿದರು. ಪಟ್ಟಣದ ಗ್ರಂಥಾಲಯ ಉತ್ತಮವಾಗಿದ್ದು, ಸ್ಥಳೀಯ ಪುರಸಭೆಯವರ ಸಹಕಾರದೊಂದಿಗೆ ಕಟ್ಟಡದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ ಗ್ರಂಥಾಲಯಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರದಿಂದ ಅನುದಾನವನ್ನು ಒದಗಿಸಲಾಗುವುದು. ಸರ್ಕಾರ ಹಳೆ ಗ್ರಂಥಾಲಯಗಳನ್ನು ನವೀಕರಿಸುವ ಯೋಜನೆ ಹಾಕಿಕೊಂಡಿದ್ದು, ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ, ಒಂದು ಗ್ರಂಥಾಲಯವನ್ನು ಇನ್ನೊಂದು ಗ್ರಂಥಾಲಯದೊಂದಿಗೆ ಅಂತರ್ಜಾಲ ಸಹಾಯದೊಂದಿಗೆ ಜೋಡಿಸಿ ಓದುಗರಿಗೆ ಎಲ್ಲ ರೀತಿಯ ಪುಸ್ತಕಗಳು ಲಭ್ಯವಾಗುವಂತೆ ಮಾಡುವ ಗುರಿ ಹಾಕಿಕೊಂಡಿದೆ ಎಂದರು. ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿದರು. ಜಿಲ್ಲಾ ಗ್ರಂಥಾಲಯದ ಅಧಿಕಾರಿ ಎಸ್.ಬಿ. ಜೀರಗಾಳ, ಬಸವರಾಜ ಬಾಳೇಶ್ವರಮಠ, ಪಟ್ಟಣದ ಗ್ರಂಥಾಲಯ ಅಧಿಕಾರಿ ವೈ.ಟಿ. ಬೊಮ್ಮಣ್ಣವರ, ಗ್ರಂಥಾಲಯ ಸಹಾಯಕ ಎಂ.ಎಸ್. ಸುಟ್ಟಮನಿ, ನಿವೃತ್ತ ಗ್ರಂಥಪಾಲಕ ಸಿದ್ದಣ್ಣ ಬೆಟಗೇರಿ, ಸಹನರಾಜ ಚೆಕ್ರಸಾಲಿ, ವಿ.ವಿ. ಬಳಿಗಾರ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

