ಶಿಂಗ್ಟಾಲಕೇರಿಗೆ ಶ್ರದ್ಧಾಂಜಲಿ
ನರೇಗಲ್ಲ: ಸಮೀಪದ ಕೋಟುಮಚಗಿ ಗ್ರಾಮದ ಗ್ರಾಪಂ ಸದಸ್ಯ ಹಾಗೂ ಗದಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದ ಮುಡಿಯಪ್ಪ ಶಿಂಗ್ಟಾಲಕೇರಿ ಅವರ ಅಕಾಲಿಕ ನಿಧನಕ್ಕೆ ಶುಕ್ರವಾರ ಕೋಟುಮಚಗಿಯ ಸೋಮೇಶ್ವರ ಶಿಕ್ಷಣ ಸಮಿತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ವಿ. ಕುಲಕರ್ಣಿ ಅಧ್ಯಕ್ಷತೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಕೆ.ಎ. ಹಮ್ಮಿಗಿ ಮಾತನಾಡಿ, ಶಿಂಗ್ಟಾಲಕೇರಿಯವರು ನಮ್ಮ ಪ್ರೌಢಶಾಲೆಯ ಹಿಂದಿನ ವಿದ್ಯಾರ್ಥಿಗಳಾಗಿದ್ದರು. ಅವರ ಅಗಲಿಕೆ ಎಲ್ಲರಿಗೂ ನೋವನ್ನುಂಟು ಮಾಡಿದೆ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ. ರಮಾಣಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದ ಮುಡಿಯಪ್ಪ ಅವರ ಅಗಲಿಕೆ ಗ್ರಾಮಕ್ಕಾದ ನಷ್ಟ. ಸೋಮೇಶ್ವರ ಶಿಕ್ಷಣ ಸಮಿತಿಯ ಬಗ್ಗೆಯೂ ಅಪಾರ ಒಲವು ಹೊಂದಿದ್ದ ಅವರು ಸಂಸ್ಥೆ ಮತ್ತು ಶಾಲೆಯ ಅಭಿವೃದ್ಧಿಗೆ ತಮ್ಮದೇ ಆದ ಸಹಕಾರ ನೀಡುತ್ತಿದ್ದರು ಎಂದರು. ಸಂಸ್ಥೆಯ ಉಪಾಧ್ಯಕ್ಷ ಜಿ.ಎಸ್. ಇಳಕಲ್ಲ, ಕೋಶಾಧ್ಯಕ್ಷ ಆರ್.ವಿ. ಪಟ್ಟಣದ, ಶಾಲಾ ಸುಧಾರಣಾ ಸಮಿತಿ ಚೇರ್ಮನ್ ಜೆ.ಎಫ್. ವಡಿಗೇರಿ, ಸದಸ್ಯ ಎಂ.ಆರ್. ಕಿತ್ತೂರ, ಮುಡಿಯಮ್ಮ ಜಗ್ಗಲ, ಬಿ.ಕೆ. ಗಾಣಿಗೇರ, ವೀರಮ್ಮ ಹಿರೇಮಠ, ಮುಖ್ಯೋಪಾಧ್ಯಾಯ ಎಸ್.ಎಸ್. ಶಿವಪ್ಪಯ್ಯನಮಠ ಮುಂತಾದವರು ಮಾತನಾಡಿದರು. ನಂತರ 2 ನಿಮಿಷಗಳ ಮೌನಾಚರಣೆ ಜರುಗಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

