ಚನ್ನಮ್ಮಳ ಜೀವನ ಎಲ್ಲರಿಗೂ ಮಾದರಿ
ಮುಂಡರಗಿ: ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ ಚನ್ನಮ್ಮಳ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಶನಿವಾರ ಮುಂಡರಗಿ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಪಂಚಮಸಾಲಿ ಘಟಕ ಮತ್ತು ಶಹರ ಘಟಕ ಹಾಗೂ ತಾಲೂಕು ಪಂಚಮಸಾಲಿ ನೌಕರರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ವೀರರಾಣಿ ಕಿತ್ತೂರು ಚನ್ನಮ್ಮನ 190ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ದೇಶದ ಬೆನ್ನೆಲುಬು ರೈತನಾದರೆ, ಕನ್ನಡ ನಾಡಿನ ಬೆನ್ನೆಲುಬು ಪಂಚಮಸಾಲಿ ಸಮಾಜವಾಗಿದೆ. ಆಡುಮುಟ್ಟದ ಸೊಪ್ಪಿಲ್ಲ, ಪಂಚಮಸಾಲಿ ಜನಾಂಗವಿಲ್ಲದ ಊರಿಲ್ಲ. ಧಾರ್ಮಿಕ ಸಂಸ್ಕಾರವನ್ನು ಹೊಂದಿದ ವೀರಶೈವರ ಮೂಲ ಪುರುಷರು ಪಂಚಮಸಾಲಿಗಳು. ಜಗತ್ತಿನ ಹಿರಿಯಣ್ಣ ಎಂದು ಅಮೆರಿಕವನ್ನು ಕರೆದರೆ ಲಿಂಗಾಯತರ ಹಿರಿಯಣ್ಣ ಎಂದು ಪಂಚಮಸಾಲಿ ಸಮಾಜವನ್ನು ಕರೆಯುತ್ತಾರೆ. ಎಲ್ಲ ಸಮಮಾಜವನ್ನು ಕರೆದುಕೊಂಡು, ಅಪ್ಪಿಕೊಂಡು ಕಾರ್ಯನಿರ್ವಸುತ್ತಿರುವ ಸಮಾಜ ಇದಾಗಿದೆ ಎಂದರು. ಪಂಚಮಸಾಲಿ ಸಮಾಜದ ರೈತಮಹಿಳೆ ರಾಜೇಶ್ವರಿ ಪಾಟೀಲ ಮಾತನಾಡಿದರು. ನಾಡೋಜ.ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸಾಮೀಜಿ ಉಪಸ್ಥಿತರಿದ್ದರು. ಪ್ರೊ. ಎ.ವೈ. ನವಲಗುಂದ, ಪ್ರೊ. ಆರ್.ಎಲ್.ಪೊಲೀಸ್ ಪಾಟೀಲ ಉಪನ್ಯಾಸ ನೀಡಿದರು. ತಾಲೂಕು ಅಧ್ಯಕ್ಷ ಕೊಟ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ನಿಂಗು ಸೊಲಗಿ, ಎಂ.ಎಸ್. ಹೊಟ್ಟಿನ, ಎಸ್.ವಿ. ಅರಿಷಿಣದ ಹಾಗೂ ವಿಜಯೋತ್ಸವದ ಸಂಚಾಲಕರಾದ ಬಸವರಾಜ ದೇಸಾಯಿ, ಬಸವರಾಜ ನವಲಗುಂದ ಹಾಗೂ ಪುರಸಭೆ 23 ಸದಸ್ಯರನ್ನು, ಭೂದಾನಿ ಶೇಖಪ್ಪ ಅಳವಂಡಿ ಇವರನ್ನು ಸನ್ಮಾನಿಸಲಾಯಿತು. ಶಿವಪ್ಪ ಅಂಕದ, ಧ್ರುವಕುಮಾರ ಹೊಸಮನಿ, ಶಶಿಧರ ದಿಂಡೂರ, ಎಂ.ಬಸಪ್ಪ, ಸಿದ್ದನಗೌಡ ಪಾಟೀಲ, ಮಹಾದೇವಿ ಲಿಂಗಶೆಟ್ಟರ, ಶೋಭಾ ಹೊಟ್ಟಿನ, ಬಿ.ಕೆ. ಪಾಟೀಲ, ರಜನೀಕಾಂತ ದೇಸಾಯಿ, ನಾನಾಸಾಹೇಬ ದೇಸಾಯಿ, ಮಂಜುನಾಥ ಇಟಗಿ, ಯಲ್ಲಪ್ಪ ಹೊಂಬಳಗಟ್ಟಿ, ಎಸ್.ವಿ. ಪಾಟೀಲ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ವೀರಣ್ಣ ತುಪ್ಪದ, ಪಾಲಾಕ್ಷಿ ಗಣದಿನ್ನಿ, ಅಶೋಕ ಹಂದ್ರಾಳ, ಬಸವರಾಜ ಬನ್ನಿಕೊಪ್ಪ, ಮಂಜುನಾಥ ಗೋಡಿ, ಸಿ.ಎಂ. ಗದಗ, ಸಿ.ವಿ. ಪಾಟೀಲ, ಮದ್ಲಿಂಗಪ್ಪ ಕೊರ್ಲಹಳ್ಳಿ, ಸುರೇಶ ಮಾಳೇಕೊಪ್ಪ, ಬಿ.ಎ. ಹಳ್ಳಿಕೇರಿ, ಜಿ.ಟಿ. ಭಾವಿಕಟ್ಟಿ, ಬಸವಂತಪ್ಪ ಮುದ್ದಿ, ಅಂದಪ್ಪ ಉಳ್ಳಾಗಡ್ಡಿ ಇದ್ದರು. ಸಿ.ಎಸ್. ಅರಸನಾಳ ನಿರೂಪಿಸಿ, ಎಸ್.ಎಸ್. ಇನಾಮತಿ ಸ್ವಾಗತಿಸಿ, ವಿಶ್ವನಾಥ ಉಳ್ಳಾಗಡ್ಡಿ ವಂದಿಸಿರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

