ಬಲಿಷ್ಠ ರಾಷ್ಟ್ರ ನಿರ್ಮಾಣ ಯುವಕರಿಂದ ಸಾಧ್ಯ
ಮುಂಡರಗಿ: ಬಲಿಷ್ಠ ರಾಷ್ಟ್ರಕಟ್ಟಲು ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ ಎಂದು ಕೇಂದ್ರ ನೆಹರು ಯುವ ಕೇಂದ್ರ ಮಹಾ ನಿರ್ದೇಶಕ ಸಲೀಂಅಹ್ಮದ್ ಹೇಳಿದರು.
ಅವರು ಭಾನುವಾರ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ನೆಹರು ಯುವಕೇಂದ್ರ, ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ನಡೆದ ಜಿಲ್ಲಾಯುವ ಸಮಾವೇಶ ಹಾಗೂ ಜಿಲ್ಲಾ ಜನಪದ ಕಲಾಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ತೊಡೆದು ಹಾಕಲು ಯುವಕರಿಂದ ಮಾತ್ರ ಸಾಧ್ಯ. ಶೌಚಾಲಯ ಹಾಗೂ ಗ್ರಾಮಗಳ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಯುವಕರು ಮಾಡಬೇಕು. 1972ರಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಅನುಕೂಲವಾಗುವಂತೆ ಸೋನಿಯಾ ಗಾಂಧಿಯವರು ಯುವ ಸಂಘಟನೆಗೆ ಚಾಲನೆ ನೀಡಿದರು. ದೇಶದ 673 ಜಿಲ್ಲೆಗಳಲ್ಲಿ 2.65 ಲಕ್ಷ ಯುವ ಸಂಘಟನೆಗಳಿವೆ. ಪ್ರತಿ ವರ್ಷಕ್ಕೆ ರು. 200 ಕೋಟಿ ಅನುದಾನ ನೀಡುವ ಮೂಲಕ ಗ್ರಾಮೀಣ ಭಾಗದವರಿಗೆ ಶಕ್ತಿ ಸಿಗುವಂತೆ ಮಾಡಲಾಗಿದೆ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಈ ಕಾರ್ಯಕ್ರಮ ಯುವಕರನ್ನು ಬಡಿದೆಬ್ಬಿಸುವಂತದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅದರಲ್ಲಿ ಯುವಕರ ಪಾತ್ರ ಪ್ರಮುಖವಾಗಿತ್ತು. ಭಾರತ ಶೌಚಾಲಯ ಅಭಿಯಾನ ಕಾರ್ಯಕ್ರಮದಡಿ ಪ್ರತಿ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡುವ ಕಾರ್ಯವನ್ನು ಭಾರತ ಸರ್ಕಾರ ನೆಹರು ಯುವ ಕೇಂದ್ರ ಮಾಡುತ್ತಿದೆ. ಇಂತಹ ಅಭಿಯಾನ, ಕಾರ್ಯಕ್ರಮಗಳನ್ನು, ಹಾಕಿಕೊಂಡಿರುವ ಸಲೀಂಅಹ್ಮದ್ ಅವರ ಕಾರ್ಯ ಶ್ಲಾಘನೀಯ ಎಂದರು. ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು.
ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಚೆಗೆ ತಾಲೂಕಿನ ಮುಕ್ತುಂಪುರ ಗ್ರಾಮದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದ ಅಂದಪ್ಪ ಮುದಿಯಪ್ಪ ತಿಪ್ಪನವರ ಕುಟುಂಬಕ್ಕೆ ಸರ್ಕಾದಿಂದ ನೀಡುವ ರು. 1.50 ಲಕ್ಷ ಪರಿಹಾರ ಚೆಕ್ನ್ನು ತಹಸೀಲ್ದಾರ್ ಎಸ್. ಆರ್. ಶಿರಕೋಳ, ಸಲೀಂ ಅಹ್ಮದ್, ಶಾಸಕ ರಾಮಕೃಷ್ಣ ದೊಡ್ಡಮನಿ ನೀಡಿದರು.
ಜಿಲ್ಲೆಯ ವಿವಿಧ ಕಲಾತಂಡಗಳಿಂದ, ಹುಬ್ಬಳ್ಳಿಯ ಜ್ಯೂ. ಸೋನು ನಿಗಮ ಹಾಗೂ ಅವರ ತಂಡದಿಂದ ರಸ ಮಂಜರಿ ಕಾರ್ಯಕ್ರಮಗಳು ಜರುಗಿದವು.
ಮುಂಡರಗಿ ತಹಸೀಲ್ದಾರ್ ಎಸ್.ಆರ್. ಶಿರಕೋಳ, ಧ್ರುವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಹೇಮಂತಗೌಡ ಪಾಟೀಲ, ಚಂದ್ರಹಾಸ ಉಳ್ಳಾಗಡ್ಡಿ, ಶಿವಕುಮಾರಗೌಡ ಪಾಟೀಲ, ಮಾತೇಶ ಹಟ್ಟಿ, ಬಸವರಾಜ ಕಕ್ಕೂರ, ಎಸ್.ಡಿ. ಮಕಾಂದರ, ರಾಮು ಕಲಾಲ, ಎ.ಪಿ. ದಂಡಿನ, ಸೋಲಬಣ್ಣ ಜೋಬಾಳಿ, ಪಾಲಾಕ್ಷಿ ಗಣದಿನ್ನಿ, ಟಿ.ಬಿ. ಮೇಟಿ, ಪುರಸಭೆ ಸದಸ್ಯರಾದ ರಾಘವೇಂದ್ರ ಕುರಿ, ಪಕ್ರುಸಾಬ್ ಹಾರೋಗೇರಿ, ಮುದಿಯಪ್ಪ ಕುಂಬಾರ, ಲಿಂಗರಾಜಗೌಡ ಪಾಟೀಲ, ಸುರೇಶ ಮಾಳಗಿಮನಿ, ಶೇಖರಾಜ ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹೇಮಂತಗೌಡ ಪಾಟೀಲ ಸ್ವಾಗತಿಸಿ, ನಾರಾಯಣಗೌಡ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

