ಗದಗ

ಸ್ಲಂ ನಿವಾಸಿಗಳ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 29
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯದ ಸ್ಲಂ ನಿವಾಸಿಗಳ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯಿಂದ ನೂರಾರು ಸ್ಲಂ ನಿವಾಸಿಗಳು ಸೇರಿ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ರ್ಯಾಲಿ ಪ್ರಾರಂಭಿಸಿ ಎಪಿಎಂಸಿಯ ವಿವೇಕಾನಂದ ಸಬಾಭವನಕ್ಕೆ ತೆರಳಿ ನಗರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಬೇಡಿಕೆ ಪತ್ರ ಸಲ್ಲಿಕೆ: ಬಡಜನರ ವಿರೋಧಿ ಆಧಾರ್ ಕಾರ್ಡ್ ಹಿಂಪಡೆಯಬೇಕು, ಸ್ಥಳೀಯ ಸಂಸ್ಥೆಗಳ ಬಜೆಟ್‌ನಲ್ಲಿ ಸ್ಲಂಗಳ ಭೂಸ್ವಾಧೀನಕ್ಕೆ ಹಣ ಮೀಸಲಿಡಬೇಕು, ಸ್ಲಂ ನಿವಾಸಿಗಳಿಗೆ ಸಮರ್ಪಕವಾದ ವಸತಿಯನ್ನು ಸರ್ಕಾರವೇ ನೀಡಬೇಕು, ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಜಾರಿಗೆ ತರುವುದು ಸೇರಿದಂತೆ ಹಲವಾರು ಬೇಡಿಕೆಗಳ ಪತ್ರವನ್ನು ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಅಶೋಕ ಮ್ಯಾಗೇರಿ,ಅಶೋಕ ಕುಡತಿನ್ನಿ, ಇಮ್ತಿಯಾಜ ಮಾನ್ವಿ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಆರತಿ, ಶರೀಫ ಬಿಳೆಯಲಿ, ಯಲಪ್ಪ ರಾಮಗಿರಿ, ಕಮಲವ್ವ ಬಿದರೂರ, ಶಹಜಾನಬಿ ಕರ್ನಾಚಿ, ದ್ಯಾಮಣ್ಣ ಡೋಣಿ, ತಾಹೇರಾಬೇಗಂ ಗುಳಗುಂದಿ, ಅನೀಲ ಕಾಳೆ, ಗೌರಮ್ಮ ಶಿರಗುಪ್ಪಿ, ರಾಜು ಕಣಗಿನಹಾಳ, ಅಶೋಕ ಕುಸಬಿ, ಬಸವರಾಜ ಬಿಳೆಯಲಿ, ನವೀನ ಬಣಕಾರ, ಸಂತೋಷ ಬಣಕಾರ, ನಾಗರಾಜ ಮುಟಗಾರ, ಮಹ್ಮದರಫೀಕ ಶೇಖ, ಜಂದಿಸಾಬ ಮಜ್ಜಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.