ಹಣಕ್ಕಿಂತ ಆರೋಗ್ಯ ಮುಖ್ಯ
ಗದಗ: ಮನುಷ್ಯರು ಇಂದು ಹಲವಾರು ರೀತಿಯ ಕೆಟ್ಟ ದಾಸ್ಯಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಹಣದ ಸಿರಿವಂತಿಕೆಗಿಂತ ದೇಹ ಸಿರಿವಂತಿಕೆ (ಆರೋಗ್ಯ) ಮುಖ್ಯ ಎಂದು ಸೂಡಿ ಜುಕ್ತ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಈಚೆಗೆ ನಗರ ವಿದ್ಯಾದಾನ ಸಮಿತಿಯ ಬಾಲಕರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮುಷ್ಠಿ ಕರಾಟೆ ಫೌಂಡೇಶನ್ ಉದ್ಘಾಟನೆ ಹಾಗೂ ಕರಾಟೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಆಧ್ಯಾತ್ಮ, ಯೋಗ, ಕುಸ್ತಿ ಜತೆಗೆ ಕರಾಟೆಯಂತಹ ಕಲೆ ಮೈಗೂಡಿಸಿಕೊಂಡರೆ ಮಕ್ಕಳಲ್ಲಿ ಶಿಸ್ತು ತನ್ನಿಂದ ತಾನೆ ಮೂಡುವುದು. ಮಕ್ಕಳ ತಲೆಯಲ್ಲಿ ಬರಿ ವಿದ್ಯೆಯನ್ನು ತುಂಬಿದ ಮಾತ್ರಕ್ಕೆ ಸಾಲದು, ಬದುಕುವ ಕಲೆಯನ್ನು ಕಲಿಸಬೇಕು. ಮಕ್ಕಳಲ್ಲಿ ಏಕಾಗ್ರತೆಯ ಕೊರತೆಯಿಂದ ಮನಸ್ಸು ಚಂಚಲವಾಗಲು ಸಾಧ್ಯವಾಗುತ್ತದೆ. ಆಸಕ್ತಿಗೆ ತಕ್ಕಂತೆ ಮಕ್ಕಳಿಗೆ ವಿದ್ಯೆ ನೀಡಲು ಶಿಕ್ಷಕ ಬಳಗ ಮುಂದಾಗಬೇಕು ಎಂದರು.
ದೈಹಿಕ ಶಿಕ್ಷಣದ ಅಧಿಕಾರಿ ಎ.ಎಂ. ಕುಂಟೋಜಿ, ಗಂಗಣ್ಣ ಕೋಟಿ, ಮೋಹನ್ ಮಾಳಶೆಟ್ಟಿ, ಕೃಷ್ಣರಾಜ ಹೆಬಸೂರು, ಸಾಹಿತಿ ಐ.ಕೆ. ಕಮ್ಮಾರ, ಅಣ್ಣಪ್ಪ ಮಾರ್ಕಲ್ ಮುಂತಾದವರು ಮಾತನಾಡಿದರು.
ಅಧ್ಯಕ್ಷತೆಯನ್ನು ವರಲಕ್ಷ್ಮೀ ಬಸವರಾಜ ಹೊಂಬಾಳಿ ವಹಿಸಿದ್ದರು. ಜಗದೀಶ ಅಡಿಗ, ಶೇಖರ ಪಡಗದ, ಬಸವರಾಜ ಹೊಂಬಾಳಿ ಪ್ರಾಸ್ತಾವಿಕ ಮಾತನಾಡಿದರು. ಜಗದೀಶ ಬನ್ನಿಗೋಳ ಸ್ವಾಗತಿಸಿದರು. ಮಂಜುನಾಥ ಹದ್ದಣ್ಣವರ ನಿರೂಪಿಸಿದರು. ಶಿವನಗೌಡ ಹೊಂಬಾಳಿ ವಂದಿಸಿದರು.
ಕಲ್ಲು ಕ್ವಾರಿಗಳ ಮೇಲೆ ದಾಳಿ: ಇಬ್ಬರ ಬಂಧನಗದಗ: ಜಿಲ್ಲೆಯ ಗದಗ ತಾಲೂಕಿನ ಕಲ್ಲು ಕ್ವಾರಿ ಹಾಗೂ ಮನೆಯೊಂದರ ಮೇಲೆ ಬುಧವಾರ ದಾಳಿ ನಡೆಸಿದ ಪ್ರೊಬೇಷನರಿ ಡಿಎಸ್ಪಿ ಬಿ.ಎಸ್. ನೇಮಗೌಡ್ರ 18 ಕ್ವಿಂಟಾಲ್ ಅಮೋನಿಯಂ ನೈಟ್ರೇಟ್, 99 ಜಿಲಿಟನ್ ಕಡ್ಡಿ, 4300 ಡಿಟೋನೇಟರ್, 45 ಕೆಜಿ ಮದ್ದಿನ ಪುಡಿ ಸೇರಿದಂತೆ ಅಪಾರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಘಟನೆ ಜರುಗಿದೆ.
ವಿವರ: ತಾಲೂಕಿನ ಮುಳಗುಂದ ಪಟ್ಟಣದ ಹೊರವಲಯದಲ್ಲಿನ ನೀಲಗುಂದ ಎನ್ನುವವರಿಗೆ ಸೇರಿದ ಕಲ್ಲು ಕ್ವಾರಿ ಹಾಗೂ ಅದಕ್ಕೆ ಸಂಬಂಧಿಸಿದ ತಗಡಿನ ಶೆಡ್ ಮೇಲೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಅಮೋನಿಯಂ ನೈಟ್ರೇಟ್ 50 ಕೆಜಿದ ತೂಕದ 32 ಚೀಲ, 86 ಜಿಲಿಟಿನ್ ಕಡ್ಡಿಗಳು, 3950 ಡೆಟೋನೇಟರ್ಗಳು, ಕಾಟೆಕ್ಸ್ ಕೇಬಲ್ 3 ಬಂಡಲ್, ಇಲೆಕ್ರ್ಟಿಕ್ ಕೇಬಲ್ 4 ಬಂಡಲ್, 5 ಕೆಜಿ ಮದ್ದಿನ ಪುಡಿ ವಶಪಡಿಸಿಕೊಂಡಿದ್ದು ಈ ಘಟನೆಗೆ ಸಂಬಂಧಿಸಿದಂತೆ ಕ್ವಾರಿಯ ಸೂಪರ್ವೈಸರ್ ಉಡಚಪ್ಪ ಪೂಜಾರ ಎನ್ನುವವರನ್ನು ಬಂಧಿಸಲಾಗಿದೆ.
ಇದೇ ಪಟ್ಟಣದ ಮಹಿಳೆಯೊಬ್ಬರ ಮನೆ ಮೇಲೆಯೂ ದಾಳಿ ಮಾಡಿದ ಅಧಿಕಾರಿಗಳು 170 ಕೆಜಿ ಅಮೋನಿಯಂ ನೈಟ್ರೇಟ್, 13 ಜೆಲಿಟಿನ್ ಕಡ್ಡಿ, 40 ಕೆಜಿ ಮದ್ದಿನ ಪುಡಿ, 350 ಇಲೆಕ್ಟ್ರಾನಿಕ್ ಡೆನೋಟೇರ್ಗಳು, 20 ಬಂಡಲ್ ಕಾಟೆಕ್ಸ್ ಕೇಬಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎಲ್ಲ ಸ್ಫೋಟಕಗಳನ್ನು ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

