ಅಕ್ಷರದಿಂದ ಮನುಷ್ಯನ ಜೀವನ ಬದಲು
ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 30
ಅಕ್ಷರ ಮನುಷ್ಯನ ಜೀವನವನ್ನು ಬದಲಿಸುತ್ತದೆ. ವಿಜ್ಞಾನ ನಮ್ಮ ಬದುಕಿಗೆ ಬಲ ನೀಡುತ್ತದೆ. ಆದ್ದರಿಂದ ಅನಕ್ಷರಸ್ಥ ಗ್ರಾಮಸ್ಥರು ಮೊದಲು ಸಾಕ್ಷರರಾಗಬೇಕು ಮತ್ತು ಮಕ್ಕಳು ವಿಜ್ಞಾನವನ್ನು ಹೆಚ್ಚು ಓದುವಂತಾಗಬೇಕು ಎಂದು ಸುವರ್ಣ ಲೇಡೀಸ್ ಕ್ಲಬ್ ಹಾಗೂ ಅಖಿಲ ಕರ್ನಾಟಕ ಮಹಿಳಾ ಜಾಗೃತ ವೇದಿಕೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಬಿಳಿಮಗ್ಗದ ಹೇಳಿದರು.
ತಾಲೂಕಿನ ಕಕ್ಕೂರತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಂಗಳೂರಿನ ಅಕ್ಷರ ಪ್ರತಿಷ್ಠಾನ ಏರ್ಪಡಿಸಿದ್ದ ನಮ್ಮ ಮಕ್ಕಳು ನಮ್ಮ ಅಭಿಮಾನ ಎಂಬ 3 ದಿನಗಳ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿರುವ ಅಜ್ಞಾನ ಮೂಢ ನಂಬಿಕೆಯನ್ನು ಪ್ರೇರೇಪಿಸುತ್ತದೆ. ಅನಕ್ಷರತೆ ನಮ್ಮ ಬದುಕನ್ನು ಕತ್ತಲಿಗೆ ತಳ್ಳುತ್ತದೆ. ಅವೆರಡೂ ಆಧುನಿಕ ಜಗತ್ತಿನ ದೊಡ್ಡ ಶತ್ರುಗಳಾಗಿದ್ದು, ಅವುಗಳನ್ನು ಬೇರು ಸಹಿತ ಕಿತ್ತೊಗೆಯಬೇಕಾಗಿದೆ. ಅಕ್ಷರ ಕಲಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿದಂತೆ ಅಕ್ಷರ ಪ್ರತಿಷ್ಠಾನದಂತಹ ವಿವಿಧ ಸಂಘ ಸಂಸ್ಥೆಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲಿವೆ. ಅವುಗಳ ನೆರವಿನಿಂದ ಎಲ್ಲರೂ ಸಾಕ್ಷರರಾಗಬೇಕು ಎಂದರು.
ಅಕ್ಷರ ಪ್ರತಿಷ್ಠಾನದ ಜಿಲ್ಲಾ ಸಂಯೋಜಕಿ ವಿಜಯಲಕ್ಷ್ಮೀ ಮಾತನಾಡಿ, ಪ್ರತಿಯೊಂದು ಮಗುವಿಗೂ ನಿಸರ್ಗದತ್ತವಾಗಿ ಒಂದು ಪ್ರತಿಭೆ ಪ್ರಾಪ್ತವಾಗಿರುತ್ತದೆ. ಅದನ್ನು ಹೊರಹಾಕಲು ಶಾಲಾ ಶಿಕ್ಷಕರು, ಪಾಲಕರು ಮತ್ತು ಸಂಘ ಸಂಸ್ಥೆಗಳು ಪ್ರಯತ್ನಿಸಬೇಕು. ಮಕ್ಕಳು ಕಲಿಕೆಯ ಜವಾಬ್ದಾರಿಯನ್ನು ಕೇವಲ ಶಾಲಾ ಶಿಕ್ಷಕರ ಹೆಗಲಿಗೆ ಹಾಕಿ ಪಾಲಕರು, ಎಸ್‌ಡಿಎಂಸಿಯವರು, ನೆರೆ ಹೊರೆಯವರು ಸುಮ್ಮನೆ ಕುಳಿತುಕೊಳ್ಳಬಾರದು. ಮಕ್ಕಳ ಕಲಿಕೆಯಲ್ಲಿ ಎಲ್ಲರ ಪಾತ್ರವೂ ಮುಖ್ಯವಾಗಿರುತ್ತದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಮುರುಡಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಗುಡಿಮನಿ, ಗ್ರಾಮದ ಮುಖಂಡ ದೇವಪ್ಪ ನಾಯಕ, ನಾಗರಾಜ ಗುಡಿಮನಿ, ಶಂಕ್ರಪ್ಪ ಗುಡಿಮನಿ, ಕಾಶೀನಾಥ ಬಿಳಿಮಗ್ಗದ ಮುಂತಾದವರು ಮಾತನಾಡಿದರು. ಅಕ್ಷರ ಪ್ರತಿಷ್ಠಾನದ ತಾಲೂಕು ಸಂಚಾಲಕ ದೇವೇಂದ್ರ, ಹನುಮಂತ ಮಸಾಲಿ, ದಿಲ್ಲಪ್ಪ ದೇವರಮನಿ, ದೇವಪ್ಪ ಗುಡಿಮನಿ, ಶಶಿಕಲಾ ಕಾರಬಾರಿ, ಕಮಲವ್ವ ಲಮಾಣಿ, ಕೇಮವ್ವ ಮುರುಡಿ, ಚಂದ್ರಪ್ಪ ನಾಯಕ, ಮಾನಪ್ಪ ದೇವರಮನಿ, ಅಂಬರೀಷ ನಾಯಕ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಹನುಮಂತ ಮಸಾಲಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

