ಮಾಧ್ಯಮಗಳ ಹಿಡಿತದಲ್ಲಿ ಸಮಾಜ
ಗದಗ: ಒಂದು ಕಾಲದಲ್ಲಿ ಮನೆಯೇ ಮೊದಲ ಪಾಠಶಾಲೆ- ತಾಯಿಯೇ ಮೊದಲ ಗುರು ಅಂತ ಹೇಳಲಾಗುತ್ತಿತ್ತು. ಆದರೆ, ಇಂದು ಪ್ರತಿಯೊಬ್ಬರೂ ಸೇವಿಸುವ ಆಹಾರ, ಜೀವಿಸುವ ಪದ್ಧತಿ ಸೇರಿ ಎಲ್ಲವುಗಳ ಬಗ್ಗೆ ಮಾಹಿತಿಯನ್ನು ಮಾಧ್ಯಮ ಹೇಳುತ್ತಿರುವುದರಿಂದ ಸಮಾಜ ಇಂದು ಮಾಧ್ಯಮಗಳ ಹಿಡಿತದಲ್ಲಿದೆ ಎಂದು ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ ಹೇಳಿದರು.
ಬುಧವಾರ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಿದ ಕುರಿತ ವಿಚಾರ ಸಂಕಿರಣದಲ್ಲಿ ಮುದ್ರಣ ಮಾಧ್ಯಮ- ಸಾಮಾಜಿಕ ಹೊಣೆಗಾರಿಕೆ ವಿಷಯ ಕುರಿತು ಉಪನ್ಯಾಸ ನೀಡಿದರು. ಈ ಹಿಂದೆ ಸೇವೆಯಂತಿದ್ದ ಮಾಧ್ಯಮ ಕ್ಷೇತ್ರ ಜಾಗತೀಕರಣ ಹಾಗೂ ಉದಾರೀಕರಣ ಪರಿಣಾಮ ಇಂದು ವಾಣಿಜ್ಯೀಕರಣ ಸ್ವರೂಪ ಪಡೆದಿದೆ. ಇದರ ನೆರಳಿನಲ್ಲಿ ಕೆಲ ಸುದ್ದಿಗಳು ಗೌಣವಾಗುತ್ತಿರುವುದು ಆತಂಕದ ಸಂಗತಿ ಎಂದರು. ಧಾರವಾಡದ ಅಂಜುಮನ್ ಡಿಗ್ರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಹಳ್ಳಿಯವರ ಮಾತನಾಡಿ, ನಮ್ಮ ಬರಹ ಅಥವಾ ವರದಿ ಸಾಮಾಜಿಕ ಚಿಂತನೆಗೆ ಒಳಪಡಿಸಬೇಕೆ ಹೊರತು ವೈಯಕ್ತಿಕ ಹಿತಾಸಕ್ತಿ ನುಸುಳಿರಬಾರದು. ಇದೇ ಪತ್ರಕರ್ತರಿಗಿರುವ ಸಾಮಾಜಿಕ ಹೊಣೆಗಾರಿಕೆ ಎಂದರು. ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಿದ ಮೈಸೂರು ವಿವಿಯ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿರ್ಮಾಪಕ ಶ್ರೀಕಂಠಾಚಾರ್, ಯಾರೊಬ್ಬರು ನೋಡಿದ ಅಶ್ಲೀಲ ಚಿತ್ರವನ್ನು ಇಡೀ ದೇಶಕ್ಕೆ ತೋರಿಸುವ ಕೆಲಸ ಟಿವಿ ಮಾಧ್ಯಮಗಳಿಂದ ನಡೆಯುತ್ತಿದೆ. ಟಿವಿ ಚಾನೆಲ್ಗಳು ಬಂದದ್ದು ವ್ಯಾಪಾರಕ್ಕಾಗಿಯೇ. ಇದು ಆತಂಕಕಾರಿ ವಿಷಯ ಎಂದು ಕಳವಳಿ ವ್ಯಕ್ತಪಡಿಸಿದರು. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು, ಬೆಂಗಳೂರು ಸರ್ಕಾರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಿ. ಮಹೇಶ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಬಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ, ರಾಜ್ಯ ಸಂವಹನ ಮತ್ತು ಪತ್ರಿಕೋದ್ಯಮ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಬಿ.ಕೆ. ರವಿ, ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ಹಾಲಸ್ವಾಮಿ, ಮಂಜುನಾಥ ಬಮ್ಮನಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

