ಬಟ್ಟೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆಯು ಸೋಮವಾರ ಜರುಗಿತು.
ಅಧ್ಯಕ್ಷ ಸ್ಥಾನಕ್ಕೆ ಫಕ್ಕಿರಮ್ಮ ಮಾಳಗಿಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಪಂ ಇಓ ವೈ.ಎಲ್. ಹಂಪಣ್ಣ ತಿಳಿಸಿದರು. ಗ್ರಾಪಂ ಸದಸ್ಯ ಮಾಲತೇಶ ಹೊಳಲಾಪುರ, ನಿರ್ಮಲಾ ರೋಣದ, ಪಾರಮ್ಮ ವಾಲಿಕಾರ, ಶಿವಪ್ಪ ಲಮಾಣಿ, ದ್ಯಾಮವ್ವ ತಳವಾರ, ಸಾವಕ್ಕ ಶಿಗ್ಲಿ, ನೀಲವ್ವ ಹರಿಜನ ಹಾಗೂ ಗ್ರಾಮದ ಹಿರಿಯರಾದ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಯು.ಎನ್. ಹೊಳಲಾಪುರ, ತಾಪಂ ಸದಸ್ಯ ಚೆನ್ನಪ್ಪ ಜಗಲಿ, ಕೋಟೆಪ್ಪ ವರ್ದಿ, ಜಿಪಂ ಮಾಜಿ ಸದಸ್ಯ ದೀಪಕ್ ಲಮಾಣಿ, ಶಿರಹಟ್ಟಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪರಮೇಶ ಲಮಾಣಿ. ಬಸಣ್ಣ ಮುಂಡವಾಡ, ಪರಮೇಶ ಹತ್ತಾಳ, ಮಹೇಶ ಲಮಾಣಿ, ಹೇಮಪ್ಪ ಲಮಾಣಿ, ನಾಗಪ್ಪ ಜೇಟೆಪ್ಪನವರ, ಬಸಪ್ಪ ಹಡಪದ, ಎಂ.ಎಂ. ವಡವಿ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

