ವಸತಿ ರಹಿತರು ಹೋರಾಟಕ್ಕೆ ಸಿದ್ಧರಾಗಿ
ಗದಗ: ಗದಗ-ಬೆಟಗೇರಿ ನಗರದಲ್ಲಿ ಸಾವಿರಾರು ಕುಟುಂಬಗಳು ತಮಗೆ ವಾಸಿಸಲು ಸೂರಿಲ್ಲದೇ ತೊಂದರೆಯಲ್ಲಿದ್ದು, ವಸತಿ ರಹಿತ ಕುಟುಂಬಗಳು ತಮ್ಮ ಹಕ್ಕನ್ನು ಪಡೆಯಲು ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಹೇಳಿದರು.
ಅವರು ಈಚೆಗೆ ನಗರದಲ್ಲಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕರೆಯಲಾಗಿದ್ದ ವಸತಿ ರಹಿತ ನಿವಾಸಿಗಳ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಆಶ್ರಯ ಮನೆಗಳು, ವಾಜಪೇಯಿ ನಗರ ವಸತಿ ಯೋಜನೆ, ಐ.ಎಚ್.ಎಸ್.ಡಿ.ಪಿ, ವಸತಿ ಯೋಜನೆ ಹೀಗೆ ನೂರಾರು ಬಡ ಜನರ ವಸತಿ ಯೋಜನೆಗಳಲ್ಲಿ ಗದಗ-ಬೆಟಗೇರಿ ನಗರದ ಬಡ ಜನರಿಗಾಗಿ ಕೊಟ್ಯಂತರ ಹಣ ಬಡವರ ಹೆಸರಿನಲ್ಲಿ ಬಂದರೂ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬಡಜನರ ವಿರೋಧಿ ನೀತಿಯಿಂದ ಇಂದು ಸಾವಿರಾರು ಬಡ ಕುಟುಂಬಗಳು ವಸತಿ ಯೋಜನೆಗಳಿಂದ ವಂಚಿತವಾಗಿವೆ.
ಸರ್ಕಾರದಿಂದ ನೀಡುವ ವಸತಿ ಮನೆಗಳು ನಿಜವಾದ ಬಡವರ ಬದಲಾಗಿ ಶ್ರೀಮಂತರ ಪಾಲಾಗುವುದು ನಿಶ್ಚಿತ. ಆದ್ದರಿಂದ ವಸತಿ ರಹಿತ ಕುಟುಂಬಗಳ ದೊಡ್ಡ ಸಂಘಟನೆ ನಿರ್ಮಿಸಿ ಬಡವರಿಗೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಾಗುವುದು ಎಂದರು. ವಸತಿ ರಹಿತ ಸಮಿತಿಯ ಅಶೋಕ ಕುಸಬಿ, ಮಹಿಳಾ ಕಾರ್ಯದರ್ಶಿ ತಿಪ್ಪವ್ವ ಮುಟಗಾರ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ಲಂ ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ ಮುಂತಾದವರು ಮಾತನಾಡಿದರು. ಅಶೋಕ ಕುಡತಿನ್ನಿ, ದ್ಯಾಮಣ್ಣ ದೋಣಿ, ಆರತಿ ಎನ್, ಕಮಲವ್ವ ಬಿದರೂರ, ಅನಿಲ ಕಾಳೆ, ಗೌರಮ್ಮ ಶಿರಗುಪ್ಪಿ, ತಾಹೀರಾಬೇಗಂ ಗುಳಗುಂದಿ, ಶಹಜಹಾನಬೇಗಂ ಕರ್ನಾಚಿ, ಬಸವರಾಜ ಕಾಳೆ, ಶಂಭು, ಶರೀಫ ಬಿಳೆಯಲಿ, ಯಲ್ಲಪ್ಪ ರಾಮಗಿರಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

