ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ
ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ತಿಪ್ಪಣ್ಣ ಕಲಹಾಳ, ಮಲ್ಲಪ್ಪ ತೊರಗಲ್, ಅಶೋಕ ಜ್ಞಾನೋಪಂತ, ಈರಪ್ಪ ಸಾತಣ್ಣವರ, ಈರಣ್ಣ ಹೊಂಗಲ, ಮಲ್ಲಪ್ಪ ಗಾಣಿಗೇರ, ಸಂಗಪ್ಪ ಕಂಚಗಾರ, ಜಡಿಯಪ್ಪ ಚನ್ನಪ್ಪಗೌಡ್ರ, ಚಂಬವ್ವ ಆರೇಬೆಂಚಿ, ನೀಲವ್ವ ಹಂಚಿನಾಳ ಆಯ್ಕೆಯಾಗಿದ್ದಾರೆ. ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ತೋಟನಗೌಡ ಚನ್ನಪ್ಪಗೌಡ್ರ, ರುದ್ರಗೌಡ ರಾಚನಗೌಡ, ಮಡಿವಾಳಪ್ಪ ಸಾತಣ್ಣವರ, ಮಹಾದೇವಪ್ಪ ತಡಹಾಳ, ಗೂಳಪ್ಪ ಹಳೇಮನಿ, ಶಂಕ್ರಪ್ಪ ಕೋಣನ್ನವರ, ಶಂಕ್ರಪ್ಪ ಹೂಲಿ, ಸಂಗನಗೌಡ ಚನ್ನಪ್ಪಗೌಡ್ರ, ಫಕೀರಪ್ಪ ಗಾಣಿಗೇರ, ಪಡಿಯಪ್ಪ ಬಾಚಿ, ಶಿವಲಿಂಗಪ್ಪ ಹೊಸಗಾಣಿಗೇರ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.
ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ: ನೇಮಗೌಡ
ಲಕ್ಷ್ಮೇಶ್ವರ: ಪ್ರಾರಂಭಿಕ ಹಂತದಲ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಉನ್ನತ ಹುದ್ದೆಗಳು ಹಾಗೂ ಶ್ರೇಷ್ಠ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಪ್ರೊಬೇಶನರಿ ಡಿವೈಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು. ಅವರು ಬುಧವಾರ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ಕಠಿಣ ಪರಿಶ್ರಮವಹಿಸಿ ಸತತ ಅಧ್ಯಯನ ಮಾಡಬೇಕು ಎಂದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಬಿ. ಕುರಹಟ್ಟಿ ಮಾತನಾಡಿ, ಇಂದು ನಾವು ಹಾಕಿಕೊಳ್ಳುವ ಗುರಿಗಳು ನಮ್ಮ ಭವಿಷ್ಯದ ಜೀವನ ರೂಪಿಸುವ ಸಾಧನಗಳಾಗಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಇಂದಿನಿಂದಲೆ ಕಷ್ಟಪಟ್ಟು ಓದುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಸಿರಾಜುದ್ದೀನ ಪಟವೇಗಾರ, ಬಸಣ್ಣ ಮಜ್ಜಿಗುಡ್ಡ, ಪುಟ್ಟಪ್ಪ ಗೌಳಿ, ದಾವಲಸಾಬ ಟಪಾಲ, ಗಿರೀಶ ಸಜ್ಜನರ, ಮಹ್ಮದಗೌಸ ಹನಮಸಾಗರ, ನೂರಸಾಬ ಶಿಗ್ಗಾಂವ್, ರಿಯಾಜ ಲಷ್ಕರ್ ಹಾಗೂ ಪ್ರೌಢಶಾಲೆಯ ಶಿಕ್ಷಕ ವರ್ಗವು ಹಾಜರಿದ್ದರು. ಸಹ ಶಿಕ್ಷಕ ಎನ್.ಎಂ. ಮಡಿವಾಳರ ನಿರೂಪಿಸಿದರು.
ಆಕಸ್ಮಿಕ ಬೆಂಕಿ: ವ್ಯಕ್ತಿ ಸಾವು
ಗದಗ: ನಗರದ ಹನುಮನಗರಡಿ ಹತ್ತಿರದ ನಿವಾಸಿಯೋರ್ವ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ. ಖಲಂದರ ಸಂದಿಮನಿ (30) ಮೃತಪಟ್ಟ ವ್ಯಕ್ತಿ. ಅವರು ಮನೆಯಲ್ಲಿ ನೀರು ಕಾಯಿಸುವ ಸಂದರ್ಭದಲ್ಲಿ ಸ್ಟೌವ್ನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಗಂಭೀರ ಗಾಯಗೊಂಡ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

