ಶಾಸಕರಿಂದ ಪ್ರಜಾಪ್ರಭುತ್ವಕ್ಕೆ ಅಗೌರವ
ನರಗುಂದ: ನರಗುಂದ ಶಾಸಕ ಬಿ.ಆರ್. ಯಾವಗಲ್ ಅವರು ಪ್ರಜಾಪ್ರಭುತ್ವಕ್ಕೆ ಅಗೌರವ ತೋರುತ್ತಿದ್ದು, ಅಧಿಕಾರಿಗಳ ಸಭೆ ನಡೆಸಲು ಅವರಿಗೆ ಸಂವಿಧಾನ ಹಕ್ಕನ್ನು ನೀಡಿದೆ, ಅವರ ಸಂಬಂಧಿಕರಿಗಲ್ಲ. ಶಾಸಕರ ಹೆಸರಿನಲ್ಲಿ ಇನ್ನಾರೋ ಸಭೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಗೌರವ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಅವರು ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗೆ ಮಾತ್ರ ಸರ್ಕಾರಿ ಕಚೇರಿ ಅಧಿಕಾರಿಗಳ ಸಭೆ ನಡೆಸಬೇಕು. ಆದರೆ, ಅವರ ಹೆಸರಿನಲ್ಲಿ ಬೇರೆಯವರು ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ನರಗುಂದ ವಿಧಾನಸಭಾ ಮತಕ್ಷೇತ್ರವನ್ನು 3 ಭಾಗವಾಗಿ ಮಾಡಿ ಯಾವಗಲ್ ಸಂಬಂಧಿಕರು ಆಳ್ವಿಕೆ ನಡೆಸುತ್ತಿದ್ದಾರೆ. ಈ ಕುರಿತು ಡಿಸಿ ಕ್ರಮ ಕೈಗೊಳ್ಳದೇ ಇರುವುದು ಖಂಡನಾರ್ಹವಾಗಿದೆ. ಈ ಹಿಂದೆ ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ಇನ್ನೂ ಕಾರ್ಯರೂಪದಲ್ಲಿವೆ. ಆದರೆ, ಈಗಿನ ಶಾಸಕರು ನನ್ನ ಅಧಿಕಾರಾವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗೆ ತಡೆಯನ್ನೊಡ್ಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇದು ಸರಿಯಲ್ಲ.
ಸದಸ್ಯ ಅಪಹರಣ ಖಂಡನೀಯ: ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಚುನಾಯಿತರಾಗಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರು ಅವರ ಬೆಂಬಲಿಗರು ಬಿಜೆಪಿ ಸದಸ್ಯೆ ಶಾಂತವ್ವ ಭಜಂತ್ರಿ ಎನ್ನುವರನ್ನು ಅಪಹರಣ ಮಾಡಿ ಹಾವೇರಿ ಜಿಲ್ಲೆ ಪೊಲೀಸ್ ಅಧಿಕಾರಿಯ ತೋಟದಲ್ಲಿ ಕೂಡಿಹಾಕಿದ್ದಾರೆ. ನಮ್ಮ ಪಕ್ಷದ ಹಿಂದುಳಿದ ವರ್ಗದ ಮಹಿಳೆಯನ್ನು ಇನ್ನು 2 ದಿನದಲ್ಲಿ ಕರೆದುಕೊಂಡು ಬರದೇ ಇದ್ದಲ್ಲಿ ಪಟ್ಟಣದ ಸಾರ್ವಜನಿಕರೊಂದಿಗೆ ನರಗುಂದ ಬಂದ್ ಮಾಡುವ ಮೂಲಕ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನರಗುಂದ ಪಪಂ ಬಿಜೆಪಿ ಮಡಿಲಿಗೆ: ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ಕೀಳುಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ಪುರಸಭೆಯ ಯಾವುದೇ ಸದಸ್ಯರನ್ನು ಅಪಹರಣ ಮಾಡಿಕೊಂಡು ಹೋದರೂ ನರಗುಂದ ಪುರಸಭೆಯ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿಯೇ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಪುರಸಭೆ ಸದಸ್ಯೆ ಶಾಂತವ್ವ ಭಜಂತ್ರಿ ಅವರನ್ನು ಅಪರಹರಣಗೊಳಿಸಿಕೊಂಡು ಹೋಗಿರುವ ಕುರಿತು ಶಾಂತವ್ವ ಭಜಂತ್ರಿ ಅವರ ಪತಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಕುರಿತು ಕಾನೂನು ಹೋರಾಟವೂ ನಡೆಯಲಿದೆ ಎಂದರು. ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಸದಸ್ಯ ಬಿ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ರಾಜುಗೌಡ ಪಾಟೀಲ, ಮುತ್ತನಗೌಡ ಪರ್ವತಗೌಡ್ರ, ಶಿವಾನಂದ ಮುತ್ತವಾಡ, ವಾಸು ಜೋಗಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರಶೇಖರ ಕೋಟಿ, ಕಿರಣ ಮುಧೋಳ, ಚಂದ್ರು ಪವಾರ, ಉಮೇಶ, ಬಸಣ್ಣೆವ್ವ ಪಿಡನಾಯ್ಕರ, ಸಾವಿತ್ರಿ ಹಟ್ಟಿ, ಸಾವಿತ್ರಿ ಪೂಜಾರ, ಶಾಂತವ್ವ ಕೋರಿ, ಮಹೇಶ ಹಟ್ಟಿ, ಅಜ್ಜು ಪಾಟೀಲ, ಉಮೇಶ ಯಳ್ಳೂರ ಸುದ್ದಿಗೋಷ್ಠಿಯಲ್ಲಿದ್ದರು.
ದೂರು ದಾಖಲು
ನರಗುಂದ: ನನ್ನ ಪತ್ನಿ ಬಿಜೆಪಿಯಿಂದ ಪುರಸಭೆಯ ಸದಸ್ಯಳಾಗಿ ಕಳೆದ ಮಾರ್ಚ್ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಸದ್ಯ ಅವಳು ಕಾಣೆಯಾಗಿದ್ದಾಳೆ. ನನ್ನ ಪತ್ನಿ ಶಾಂತವ್ವ ಭಜಂತ್ರಿ ಅವರನ್ನು ತಕ್ಷಣವೇ ಹುಡುಕಿ ಕೊಡುವಂತೆ ಪತಿ ಶಿವಪ್ಪ ಭಜಂತ್ರಿ ಸೆ. 8ರಂದು ನರಗುಂದ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

