ಪಾಟೀಲರ ಆರೋಪದಲ್ಲಿ ಹುರುಳಿಲ್ಲ: ಯಾವಗಲ್ಲ
ನರಗುಂದ: ಮಾಜಿ ಸಚಿವ ಸಿ.ಸಿ. ಪಾಟೀಲ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸೋಲಿನ ಹತಾಶೆಯಿಂದ ಹಾಗೆ ಮಾತನಾಡುತ್ತಿದ್ದಾರೆ ಎಂದು ನರಗುಂದ ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ 9 ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಪ್ರಜಾಪ್ರಭುತ್ವವನ್ನು ಯಾರು ಕಗ್ಗೂಲೆ ಮಾಡಿದ್ದಾರೆಂದು ಕ್ಷೇತ್ರದ ಜನತೆಗೆ ತಿಳಿದಿದೆ.
ಅದಕ್ಕಾಗಿಯೇ ಜನತೆ ನಿಮ್ಮನ್ನು ಸೋಲಿಸಿದ್ದಾರೆ. ನಾನು 30 ವರ್ಷಗಳ ಕಾಲ ರಾಜಕಾರಣದಲ್ಲಿದ್ದೇನೆ. ಆದರೆ, ಇವರು ತಾವು ತಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಬಂದ್ ಮಾಡಿಸಿದ್ದಾರೆಂದು ಆರೋಪಿಸಿದ್ದು ಸತ್ಯಕ್ಕೆ ದೂರವಾದದ್ದು.
ಕೊಣ್ಣೂರದಿಂದ ಹೊಳೆಆಲೂರ ರಸ್ತೆ ಕಾಮಗಾರಿ ಕಳಪೆ ಮತ್ತು ಅಗಲೀಕರಣ ಕಡಿಮೆ ಮಾಡುವುದು ತಿಳಿದು ಬಂದಿದ್ದು, ಅದಕ್ಕೆ ನಾನು ಕಾಮಗಾರಿ ಗುಣ ಮಟ್ಟದ್ದು ಆಗಬೇಕೆಂದು ನಿಲ್ಲಿಸಿದ್ದೆ. ಆದರೆ ಇವರು ಇದನ್ನೇ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಈ ರಸ್ತೆಗೆ ಹೆಚ್ಚುವರಿಯಾಗಿ ಮತ್ತೆ ರು. 4 ಕೋಟಿ ಸರ್ಕಾರದಿಂದ ಬಿಡುಗಡೆ ಮಾಡಿಸಿ, ಇದೇ 14ರಂದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಆಡಳಿತದಲ್ಲಿ ನನ್ನ ಸಂಬಂಧಿಕರ ಹಸ್ತಕ್ಷೇಪ ಮಾಡಿಸಿಲ್ಲ. ನಾನು ಬೆಂಗಳೂರನಲ್ಲಿ ಇದ್ದಾಗ ಸ್ವಾಮಿ ವಿವೇಕಾನಂದರ ರಥಯಾತ್ರೆ ಕಾರ್ಯಕ್ರಮ ನಿಮಿತ್ತ ನಮ್ಮ ಸಂಬಂಧಿಕರು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ, ಅಧಿಕಾರಿಗಳ ಸಭೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಚಂಬಣ್ಣ ವಾಳದ, ಗುರಪಾದಪ್ಪ ಕುರಹಟ್ಟಿ, ಹನುಮಂತಗೌಡ ಕಗಧಾಳ, ವಿಠ್ಠಲ ಶಿಂಧೆ, ಶಿವನಗೌಡ ಹೆಬ್ಬಳ್ಳಿ, ಎಫ್.ವೈ. ದೊಡಮನಿ, ದ್ಯಾಮಣ್ಣ ಸವದತ್ತಿ, ಮಹಾಂತೇಶ ತಳವಾರ, ದೀಪಕ ಗೊಡ್ಸ, ಸುರೇಶ ಸಾವಂತ, ವಿರೂಪಾಕ್ಷಪ್ಪ ಸವಳಭಾವಿ, ಸಂಗನಗೌಡ್ರ ಬಾಳನಗೌಡ್ರ, ಫಕೀರಪ್ಪ ಜೋಗಣ್ಣವರ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

