ಗದಗ

ಪತ್ರ ಬರೆದಿಟ್ಟು ತಾಪಂ ಅಧಿಕಾರಿ ನಾಪತ್ತೆ

Published On :

ನರಗುಂದ: ತಾಪಂ ಕಚೇರಿಯಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಎಸ್.ಕೆ. ಇನಾಮದಾರ ಸೆ. 10ರಂದು ತಾಪಂ ಕಚೇರಿಯಲ್ಲಿ ತಾವು ಕುಳಿತುಕೊಳ್ಳುವ ಟೇಬಲ್ ಮೇಲೆ ಜೀವನದಲ್ಲಿ ಜಿಗುಪ್ಸೆಗೊಂಡಿರುವ ಕುರಿತು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಅಧಿಕಾರಿ ಬರೆದ ಪತ್ರದಲ್ಲಿ, ನಾನು ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ನಮ್ಮ ಕುಟುಂಬದ ಬೇಕು ಬೇಡಿಕೆ ಈಡೇರಿಸಲು ಸಾಧ್ಯವಾಗದ ಕಾರಣ ನೆಮ್ಮದಿ, ಸುಖ, ಸಂತೋಷ ಇಲ್ಲದ್ದರಿಂದ ನಾನು ಸುಖ, ಶಾಂತಿ ಸಿಗುವ ಜಾಗಕ್ಕೆ ಹೋಗುತ್ತೇನೆ. ಆದ್ದರಿಂದ ನನ್ನನು ಯಾರೂ ಹುಡುಕುವ ಪ್ರಯತ್ನ ಮಾಡಬಾರದು. ನನಗೆ ಈ ಜಾಗ ಸಿಗದಿದ್ದರೆ ಬೇರೆ ಲೋಕಕ್ಕೆ ಹೋಗುತ್ತೇನೆಂದು ಅವರ ಬರೆದಿರುವ ಪತ್ರ ಪತ್ತೆಯಾಗಿದೆ. ಪತ್ರ ಬರೆದಿಟ್ಟು ಹೋಗಿರುವ ಅವರ ಬಗ್ಗೆ ಇಲ್ಲಿಯವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇವರು ಮೂಲತಃ ಮುಂಡರಗಿ ಪಟ್ಟಣದವರಾಗಿದ್ದು, ಓರ್ವ ಪುತ್ರ, ಒಂದು ಹೆಣ್ಣು ಮಗು ಇದೆ. ಈ ಮೊದಲು ಮುಂಡರಗಿ ತಾಪಂ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು. 7-7-2011ರಿಂದ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ನರಗುಂದ ತಾಪಂ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಅಧಿಕಾರಿಯಿಂದ 2 ದಿನಗಳಿಂದ ರಜೆ ಪತ್ರವೂ ಇಲ್ಲ, ಕಚೇರಿಗೂ ತಿಳಿಸಿಲ್ಲ. ಅಲ್ಲಿನ ಸಿಬ್ಬಂದಿ ಆಕಸ್ಮಿಕವಾಗಿ ಅವರ ಟೇಬಲ್ ಟ್ರೇ ಗಮನಿಸುವ ವೇಳೆ ಈ ಪತ್ರ ಸಿಕ್ಕಿದೆ. ನಂತರ ಪತ್ರ ನೋಡಿದ ತಾಪಂ ಹಿರಿಯ ಅಧಿಕಾರಿ ನಂದಕುಮಾರ, ನಾಪತ್ತೆಯಾಗಿರುವ ಅಧಿಕಾರಿ ಪೋಟೋ ಮತ್ತು ಅವರು ಬರೆದ ಪತ್ರವನ್ನು ನರಗುಂದ ಪೊಲೀಸ್ ಠಾಣೆಗೆ ನೀಡಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಧಿಕಾರಿಗೆ ಕುಟುಂಬದ ಸಮಸ್ಯೆ ಇತ್ತೋ, ಮೇಲಧಿಕಾರಿಗಳ ಕಿರುಕುಳವಿತ್ತೋ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.