ಗದಗ

ಮೋದಿ ಭವ್ಯ ಭಾರತದ ಆಶಾಕಿರಣ: ಕಳಕಪ್ಪ ಬಂಡಿ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 13
ನರೇಂದ್ರ ಮೋದಿ ಭವ್ಯ ಭಾರತ ನಿರ್ಮಾಣದ ಆಶಾಕಿರಣವಾಗಿದ್ದು, ವಿಶ್ವಕ್ಕೆ ಸ್ಫೂರ್ತಿದಾಯಕ ನಾಯಕರಾಗಿ ಹೊರಹೊಮ್ಮಲ್ಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶುಕ್ರವಾರ ರಾತ್ರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
2020ರಲ್ಲಿ ವಿಶ್ವಕ್ಕೆ ಭಾರತ ಸುಪರ್ ನೋವಾ ಆಗಲಿದೆ ಎಂಬ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್‌ಕಲಾಂ ಅವರ ಆಶಯ ಈಡೇರಿಕೆಗೆ ಮೋದಿಯಂತಹ ಅಭಿವೃದ್ಧಿಪರ ಚಿಂತನೆಯನ್ನು ಹೊಂದಿರುವ ನಾಯಕರ ಅವಶ್ಯಕತೆ ಇದ್ದು, ಮೋದಿ ನೇತೃತ್ವದಲ್ಲಿ ದೇಶ ಉತ್ತಮ ಪ್ರಗತಿಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್. ಕರಿಗೌಡ್ರ, ಶ್ರೀಕೃಷ್ಣ ಹೊಂಬಾಳಿ, ಈಶಣ್ಣ ಮುನವಳ್ಳಿ, ಅರುಣ ಅಣ್ಣಿಗೇರಿ, ತೋಂಟೂಸಾ ಬಾಂಡಗೆ, ಪ್ರವೀಣ ಬನ್ಸಾಲಿ, ಸಿರಾಜ್ ಬಳ್ಳಾರಿ, ಲಕ್ಷ್ಮಣ ದೊಡ್ಡಮನಿ, ಪ್ರಶಾಂತ ನಾಯ್ಕರ, ಪರಶುರಾಮ ಹೆಬಸೂರ, ವಿಠ್ಠಲ ಬಾಂಡಗೆ, ರವಿ ಶಿದ್ಲಿಂಗ, ರವಿ ಬಿದರೂರ, ಜಯಶ್ರೀ ಉಗಲಾಟದ, ಅಶ್ವಿನ ಜಗತಾಪ, ಎಂ.ಎಂ. ಹಿರೇಮಠ, ಮೋಹನ ಮಾಳಶೆಟ್ಟಿ, ಎಸ್.ಎಂ. ಪಾಟೀಲ, ಸದಾನಂದ ಪಿಳ್ಳಿ, ಶ್ರೀಕಾಂತ ಖಟವಟೆ, ಛಗನ್ ರಾಜಪುರೋಹಿತ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ ಅವಳಿ ನಗರದ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.