ಗದಗ

ಗೋವಿಂದಗೌಡರಿಗೆ ಪ್ರಶಸ್ತಿ ಪ್ರದಾನ

Published On :

ಗದಗ: ನಗರದ ಯಂಗ್ ಇಂಡಿಯಾ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವಿ.ಆರ್. ಗೋವಿಂದಗೌಡ್ರ ಅವರಿಗೆ ಈಚೆಗೆ ದೆಹಲಿಯ ಸ್ಪೀಕರ್ಸ್ ಹಾಲ್ನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ನಿರ್ಮಾಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಂಗ್ ಇಂಡಿಯಾ ಪರಿವಾರ ಸಂಘಟನೆ ಸ್ಥಾಪನೆ ಮೂಲಕ ಹಲವಾರು ಸಾಮಾಜಿಕ, ಸಾರ್ವಜನಿಕ ಹಿತಾಸಕ್ತಿ ಹೋರಾಟಗಳು ಸೇರಿದಂತೆ ಯುವ ಜನಾಂಗದ ಸಂಘಟನೆ ಸೇರಿದಂತೆ ವಿಶೇಷವಾಗಿ ಯಂಗ್ ಇಂಡಿಯಾ ಕೋ ಆಪ್ ಸೊಸೈಟಿ ಸ್ಥಾಪನೆ ಮೂಲಕ ರಸ್ತೆ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರು, ಆಟೋ ಚಾಲಕರಂತಹ ಯುವ ಸಮೂಹಕ್ಕೆ, ಯುವ ಕಾರ್ಮಿಕರುಗಳಿಗೆ ಆರ್ಥಿಕ ಸ್ವಾವಲಂಬನೆಗೆ ನೆರವಾಗುವಂತೆ ಕಿರುಸಾಲದ ನ್ಯಾನೋ ಲೋನ್ ಯೋಜನೆ ಜಾರಿಗೆ ತಂದಿದ್ದರು. ಇದನ್ನೆಲ್ಲಾ ಪರಿಗಣಿಸಿ ದೆಹಲಿಯ ಎಕನಾಮಿಕ್ ಆಂಡ ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ ಅಸೋಸಿಯೇಷನ್ ವತಿಯಿಂದ ನೀಡಲಾದ ಈ ಪ್ರಶಸ್ತಿಯನ್ನು ಸಿಬಿಐನ ಮಾಜಿ ನಿರ್ದೇಶಕ ಸರದಾರ ಜೋಗಿಂದರಸಿಂಗ್ ಹಾಗೂ ವಿದೇಶಾಂಗ ಸಚಿವಾಲಯದ ನಿವೃತ್ತ ಅಧಿಕಾರಿ ಡಾ.ವಿ.ಬಿ. ಸೋನಿ ಈಚೆಗೆ ಪ್ರದಾನ ಮಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯಸಭೆ ಸದಸ್ಯ ಮಹೇಂದ್ರಸಿಂಗ ಮೆಹ್ತಾ, ಲೋಕಸಭೆ ಸದಸ್ಯ ಪ್ರದೀಪ ತಮಟಾ, ಖ್ಯಾತ ಶೂಟರ್ ಪದ್ಮಶ್ರೀ ಜಸಪಾಲ ರಾಣಾ, ಅನಿಸ್ ದೊರ್ರಾನಿ, ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ ಹರಿಪತ ರಾವತ್, ಗದಗನಿಂದ ತೆರಳಿದ್ದ ಸಚಿನ ಡಿ. ಪಾಟೀಲ, ವಿಕಾಸ ಸಾಹುಕಾರ, ಸಿದ್ದು ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.