ಗದಗ

ಪೌರಕಾರ್ಮಿಕರ ಸೇವೆಯಿಂದ ಆರೋಗ್ಯವಂತ ಸಮಾಜ: ಕವಿತಾ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 23
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಸೇವೆ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ನಾಗರಿಕರು ಪೌರ ಕಾರ್ಮಿಕರ ಕಾಯಕಕ್ಕೆ ಸಹಕರಿಸುವ ಅಗತ್ಯವಿದೆ ಎಂದು ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಹೇಳಿದರು.
ಪಟ್ಟಣದ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಸೋಮವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಅಭಿವೃದ್ಧಿಯಲ್ಲಿ ಪೌರ ಕಾರ್ಮಿಕರ ಪಾತ್ರ ಗುರುತರವಾದದ್ದು. ಸುಂದರ ಮತ್ತು ಸ್ವಚ್ಛ ನಗರವನ್ನಾಗಿಸುವಲ್ಲಿ ಶ್ರಮಿಸುವ ಪೌರ ಕಾರ್ಮಿಕರ ಹಿತ ಕಾಯುವ ಜವಾಬ್ದಾರಿಕೆ ನಮ್ಮೆಲ್ಲರದ್ದಾಗಿದೆ. ಕೊಳೆ ಬಲೆ ತೊಳೆದು ಸೌಂದರ್ಯವರ್ಧಿತ ಪಟ್ಟಣವನ್ನಾಗಿಸುವ ಪೌರ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಬೇಕಾದ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವಲ್ಲಿ ಪುರಸಭಾ ಆಡಳಿತ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಸದಸ್ಯ ಎಂ.ಎಸ್. ಹಡಪದ, ಶರಣಪ್ಪ ರೇವಡಿ, ಶಿವರಾಜ ಘೋರ್ಪಡೆ ಚಂದ್ರಶೇಖರ ಚಳಗೇರಿ, ಪುರಸಭೆ ಮಾಜಿ ಅಧ್ಯಕ್ಷ ಡಿ.ಎಚ್.ಬಳೂಟಗಿ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಬಿ. ವಂಟಿ ಮಾತನಾಡಿದರು.
ಇದೇ ಸಂದರ್ಭ ನಿವೃತ್ತಿ ಹೊಂದಿದ ಕಾರ್ಮಿಕರು ಹಾಗೂ ವರ್ಗಾವಣೆಗೊಂಡ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪೌರ ಕಾರ್ಮಿಕರಿಗೆ ಸಮುದಾಯ ಆರೋಗ್ಯ ಕೇಂದ್ರದ, ಡಾ೤ ಅಮೃತ ಹರಿದಾಸರು ಆರೋಗ್ಯ ತಪಾಸಣೆ ನಡೆಸಿದರು. ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ವಿಜಯಲಕ್ಷ್ಮೀ ಚಟ್ಟೆರ, ಸುಮಿತ್ರಾ ತೊಂಡಿಹಾಳ, ಸುಜಾತಾ ಚುಂಚಾ, ಮುಕ್ತಂಬಿ ಹಣಗಿ, ಶಾರದಾ ರಾಠೋಡ, ಶಾರವ್ವ ತಳವಾರ, ಮಂಜುನಾಥ ಬಡಿಗೇರ, ಎಸ್.ಎಸ್. ಇಟಗಿ, ಬಡ್ಡಪ್ಪ ಮೂಲಿಮನಿ, ಕಳಕಪ್ಪ ಗುಳೇದ, ವಿಜಯಕುಮಾರ ರಾಯಬಾಗಿ, ಷಣ್ಮುಕಪ್ಪ ಚಿಲಝರಿ,
ಸಿ.ವಿ. ಕುಲಕರ್ಣಿ, ಪಿ.ಎನ್. ದೊಡ್ಡಮನಿ, ಬಸವರಾಜ ಬಳಗಾನೂರ, ಎಂ.ಡಿ. ದೊಡ್ಡಮನಿ, ರಾಜು ನಿಶಾನದಾರ, ಜಿ.ಎನ್. ಕಾಳೆ, ಉಮಾ ಕುರಹಟ್ಟಿ, ಹೇಮಾ ಮಾದಗುಂಡಿ ಉಪಸ್ಥಿತರಿದ್ದರು, ಮಹೇಶ ನಿಡಶೇಶಿ, ಸ್ವಾಗತಿಸಿದರು. ಬಿ.ಕೆ. ಮಾದಿ ನಿರೂಪಿಸಿದರು. ಆರ್.ಎಚ್. ಮಂತಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.