ಸಹಕಾರಿ ಸಂಘ ಬೆಳವಣಿಗೆಗೆ ಶ್ರಮ ಅಗತ್ಯ
ಗದಗ: ಸಹಕಾರಿ ತತ್ವದ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯನ್ನು ಹೊಂದುವ ಅವಕಾಶಗಳಿದ್ದು, ಇಂತಹ ಸಹಕಾರಿ ಸಂಸ್ಥೆಗಳು ಬೆಳವಣಿಗೆ ಹೊಂದಲು ಶ್ರಮ ಅಗತ್ಯ ಎಂದು ಸಂಘದ ಸದಸ್ಯ ಫಕ್ಕಿರಯ್ಯ ಅಮೋಘಿಮಠ ಹೇಳಿದರು.
ಅವರು ತಾಲೂಕಿನ ಮುಳಗುಂದ ಪಟ್ಟಣದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಬೀರಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಸಹಕಾರಿ ಕ್ಷೇತ್ರ ಬೆಳವಣಿಗೆಗೆ ಉನ್ನತ ಮಾರ್ಗವಾಗಿದ್ದು ಸಮಾಜದ ಪ್ರತಿಯೊಬ್ಬರ ಏಳ್ಗೆ ಸಹಕಾರಿ ಸಂಸ್ಥೆಗಳ ಬೆಳವಣಿಗೆಯ ಮೇಲೆ ಆಧಾರಿತವಾಗಿರುವುದರಿಂದ ಸ್ವಾವಲಂಬನೆಯ ಬದುಕು ಸಹಕಾರಿ ಸಂಸ್ಥೆಗಳಿಂದ ಸಾಧ್ಯ ಎಂದರು.
ಅಢಾವೆ ಪತ್ರಿಕೆಯನ್ನು ಮಂಡಿಸಿದ ಸಂಸ್ಥೆಯ ವ್ಯವಸ್ಥಾಪಕ ಮಲ್ಲೇಶ ಕುಂದಗೋಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಪಪಂ ಸದಸ್ಯ ಮಹಾಂತೇಶ ನೀಲಗುಂದ, ಸಂಸ್ಥೆಯ ನಿರ್ದೇಶಕ ಫಕ್ಕಿರಪ್ಪ ಅಣ್ಣಿಗೇರಿ, ಗುರುಪಾದಪ್ಪ ಗೊರವರ, ಬಸವರಾಜ ಕೋಳಿವಾಡ, ಕುಬೇರಪ್ಪ ಗುಂಜಳ, ಮಲ್ಲಪ್ಪ ಕುಂದಗೋಳ, ದೇವಪ್ಪ ಬಸರಿ, ಹೊನ್ನಪ್ಪ ನೀಲಗುಂದ, ನೀಲಪ್ಪ ಜೋಗಿ, ದೇವಪ್ಪ ಲಕ್ಕುಂಡಿ, ಸೋಮಣ್ಣ ನವಲಗುಂದ, ಮಲ್ಲೇಶ ಬಸರಿಮರದ, ನೀಲಪ್ಪ ಸಾತಿ, ಫಕ್ಕಿರೇಶ ಕಂಬಳಿ ಇತರರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಈರಪ್ಪ ದೊಟಿಕಲ್ ಸ್ವಾಗತಿಸಿದರು. ಮಹೇಶ ನೀಲಗುಂದ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

