ಗದಗ

ಭಗತ್‌ಸಿಂಗ್‌ರ ಶೌರ್ಯ, ತ್ಯಾಗ ಅಪ್ರತಿಮ: ರಾಠೋಡ

Published On :

ಗಜೇಂದ್ರಗಡ: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ದಬ್ಬಾಳಿಕೆಗೆ ಮೆಟ್ಟಿ ನಿಂತು ದೇಶದ ಕೋಟ್ಯಾಂತರ ಯುವ ಜನತೆಯ ಸ್ಫೂರ್ತಿ ಮತ್ತು ಕೆಚ್ಚದೆಯ ಪ್ರತೀಕವಾಗಿ ಕಂಗೊಳಿಸಿದ ಭಗತ್ ಸಿಂಗರ ಶೌರ್ಯ ಸಾಹಸ ಅಪ್ರತಿಮವಾದದ್ದು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಪೀರು ರಾಠೋಡ ಹೇಳಿದರು.
ಸ್ಥಳೀಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಭಾರತ್ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ನಡೆದ ಭಗತ್ ಸಿಂಗರ 106ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಲು ರಾಠೋಡ ಮಾತನಾಡಿ, ಭಗತ್ ಸಿಂಗರು ನಮಗಾಗಿ ಬಾಳುವುದಕ್ಕಿಂತ ದೇಶಕ್ಕಾಗಿ ಬದುಕುವುದರಲ್ಲಿ ಸಾರ್ಥಕತೆ ಇದೆ ಎಂದು ನಂಬಿ ಬಾಳಿದ ಅವರ ಜೀವನ ಶೈಲಿ ಅಮರವಾದದ್ದು, ಅಂತಹ ರಾಷ್ಟ್ರ ಪ್ರೇಮಿಯ ಜನ್ಮದಿನವನ್ನು ಆಚರಿಸುವ ನಾವು ರಾಷ್ಟ್ರ ಸೇವಕರಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಸರಸ್ವತಿ ದೊಡ್ಡಮನಿ, ಶಿವು ಚವ್ಹಾಣ ಭಗತ್ ಸಿಂಗರ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಬಾಲಕೃಷ್ಣ ಜಾಡಬಂಡಿ, ಪ್ರಕಾಶ ಹೆಳವರ, ಶಿವಾಜಿ ಗಡ್ಡದ, ಶ್ರೀಧರ ಮಲಕೋಜಿ, ಮಾನು ರಾಠೋಡ, ಶಿವಾನಂದ ಭೋಸಲೆ, ಮಂಜುನಾಥ ರಾಠೋಡ  ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.