ಗದಗ

ಅನುದಾನ ಮೀಸಲಿಡಿ: ಅಲ್ಪಸಂಖ್ಯಾತರ ಮನವಿ

Published On :

ಗದಗ: ನ್ಯಾಯಮೂರ್ತಿ ರಾಜೇಂದ್ರ ಸಚಾರ ವರದಿ ಆಧರಿಸಿ ಗದಗ-ಬೆಟಗೇರಿ ನಗರಸಭೆಯ ಬಜೆಟ್ನಲ್ಲಿ ನಗರದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಶೇ. 15ರಷ್ಟು ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿ ಮಂಗಳವಾರ ಗದಗ ಜಿಲ್ಲಾ ಅಲ್ಪಸಂಖ್ಯಾತರ ಸೇವಾ ಸಂಘದ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿಯ ಅಲ್ಪಸಂಖ್ಯಾತರ ಜೀವನ ತುಂಬಾ ಶೋಚನೀಯವಾಗಿದೆ. ಆದ್ದರಿಂದ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವಲ್ಲಿ 15 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತರಬೇಕೆಂದು ನ್ಯಾಯಮೂರ್ತಿ ರಾಜೇಂದ್ರ ಸಚಾರ ಕಮಿಟಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಮೂಲಕ ಶಿಫಾರಸು ಮಾಡಲಾಗಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಬಜೆಟ್ಗಳಲ್ಲಿ ಶೇ. 15ರಷ್ಟು ಅನುದಾನ ಮೀಸಲಿಡಲು ಕ್ರಿಯಾಯೋಜನೆ ತಯಾರಿಸಲು ಆದೇಶಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದೆ. ನಗರಸಭೆ ಅಧ್ಯಕ್ಷೆ ರುದ್ರಮ್ಮ ಕರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪೂರ, ಸದಸ್ಯ ಎಲ್.ಡಿ. ಚಂದಾವರಿ ಮನವಿ ಸ್ವೀಕರಿಸಿದರು. ಅಲ್ಪಸಂಖ್ಯಾತರ ಸೇವಾ ಸಂಘದ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ, ಜಾವೇದ ನೂರಬಾಷಾ, ಜಾನಿಸಾಬ್ ಹಣಗಿ, ಇಬ್ರಾಹಿಂ ಹಳ್ಳಿಕೇರಿ, ಶೌಕತಲ್ಲಿ ಢಾಲಾಯತ, ಮುನ್ನಾ ರೇಶ್ಮಿ, ಬಾಬಾಜಾನ ಬಳಗಾನೂರ, ಅಬುಬಕ್ಕರ ಮಕಾಂದಾರ, ಜಾಕೀರ್ ಇಡ್ಲಿಕಾರ, ಯುಸೂಫ್ ಮಜ್ಜಗಿ, ಮಹ್ಮದ್ ರಫೀಕ್ ಶೇಖ್, ಬಕ್ಷೀ ಪಿಂಜಾರ, ಸ್ಲಂ ಯುವ ಸಮಿತಿಯ ಶರೀಫ್ ಬಿಳೆಯಲಿ, ಪರಶುರಾಮ ಕಾಳೆ, ಜಾಕೀರ್ ಕಲಬುರ್ಗಿ, ಅಬ್ಬಾಸ ತಾಡಪತ್ರಿ, ಬಾಬುಸಾಬ್ ಡಂಬಳ(ಹಂಡಿ), ಹಜರತ್ ಮನಿಯಾರ್, ಇರ್ಫಾನ್ ಬಂಗಡಿ, ಸಲೀಂ ಬಳ್ಳಾರಿ, ಅನಿಲ ಕಾಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.