ಬಿಜೆಪಿಗೆ ಜನತೆ ಉತ್ತಮ ಸ್ಪಂದನೆ
ಮುಂಡರಗಿ: ಗದಗ ಜಿಲ್ಲೆಯಲ್ಲಿ ಪ್ರಚಾರ ಕೈಗೊಂಡಿದ್ದು, ಜನತೆ ಸ್ಪಂದನೆ ಚೆನ್ನಾಗಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಆಯ್ಕೆ ಖಚಿತ ಎಂದು ಲೋಕಸಭಾ ಚುನಾವಣೆಯ ಗದಗ ಜಿಲ್ಲೆಯ ಉಸ್ತುವಾರಿ ಎಂ.ಸ್. ಕರಿಗೌಡ್ರ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಗುರುವಾರ ಮುಂಡರಗಿಯಲ್ಲಿ ಹಾವಿನಾಳ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಡರಗಿ ತಾಲೂಕಿನಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಕಳಕಪ್ಪ ಬಂಡಿ, ಸಿ.ಸಿ. ಪಾಟೀಲ, ಮಾಜಿ ಶಾಸಕ ರಾಮಣ್ಣ ಲಮಾಣಿ, ಅಭ್ಯರ್ಥಿ ಶಿವಕುಮಾರ ಉದಾಸಿಯವರೂ ಸೇರಿದಂತೆ ಅನೇಕ ಮುಖಂಡರು ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದ್ದಾರೆ. ಏ 11ರಂದು ಅಭ್ಯರ್ಥಿ ಶಿವಕುಮಾರ ಉದಾಸಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರಂಗಪ್ಪ ಕ್ಯಾದಿಗಿಹಳ್ಳಿ, ಬೀರಪ್ಪ ಬಂಡಿ, ವಿರೂಪಾಕ್ಷಪ್ಪ ಯರಾಶಿಯವರ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ತಾಲೂಕಿನ ಡೋಣಿ ಗ್ರಾಮದ ಕೆವಿಜಿ ಎದುರಿನಲ್ಲಿ, 9-30ಕ್ಕೆ ಪೇಠಾಲೂರು ಗ್ರಾಮದಲ್ಲಿ ಕರಿಗೌಡ್ರ ಜಾಗೆಯಲ್ಲಿ, 10.30ಕ್ಕೆ ಮೇವುಂಡಿ ಗ್ರಾಮದಲ್ಲಿ, 11.30ಕ್ಕೆ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ, 12.30ಕ್ಕೆ ಹಿರೇವಡ್ಡಟ್ಟಿ ಗ್ರಾಮದ ಚಾವಡಿ ಮುಂದಿನ ಜಾಗೆಯಲ್ಲಿ, ಮಧ್ಯಾಹ್ನ ಕಲಕೇರಿ ಗ್ರಾಮಕ್ಕೆ, ನಂತರ ಮಧ್ಯಾಹ್ನ 3ಕ್ಕೆ ಬಾಗೇವಾಡಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 4ಕ್ಕೆ ಹಮ್ಮಿಗಿ ಗ್ರಾಮ, 5ಕ್ಕೆ ಕೊರ್ಲಹಳ್ಳಿ ಗ್ರಾಮದ ನಿಲ್ದಾಣದ ಹತ್ತಿರ, ಸಂಜೆ 6ಕ್ಕೆ ಮುಂಡರಗಿ ಪಟ್ಟಣದ ಗಣೇಶ ದೇವಸ್ಥಾನದಿಂದ ರೋಡ್ ಶೋ ನಡೆಸಲಿದ್ದಾರೆ ಎಂದರು. ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

