ಹಲ್ಲುಗಳ ಸಂರಕ್ಷಣೆ ಅತ್ಯವಶ್ಯ: ಶಂಕರ್
ಗಜೇಂದ್ರಗಡ: ಮಾನವನ ಅಂಗಗಳಲ್ಲಿ ಅತ್ಯಂತ ಮಹತ್ವ ಪಡೆದ ದಂತ, ಆಹಾರ ಜೀರ್ಣಕ್ರಿಯೆ ಜೊತೆ ಮುಖದ ಸೌಂದರ್ಯಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಹಲ್ಲುಗಳನ್ನು ಸದೃಡವಾಗಿ ಮತ್ತು ಆರೋಗ್ಯಪೂರ್ಣವಾಗಿ ಸಂರಕ್ಷಿಸಿಕೊಳ್ಳುವುದು ಅವಶ್ಯ ಎಂದು ದಂತವೈದ್ಯ, ರೋಟರಿ ಅಧ್ಯಕ್ಷ ಟಿ.ಎಚ್. ಶಂಕರ್ ಹೇಳಿದರು.
ಅವರು ಸ್ಥಳೀಯ ಬನಶಂಕರಿ ನೇಕಾರರ ಸಹಕಾರಿ ಸಂಘದ ವತಿಯಿಂದ ಈಚೆಗೆ ನೇಕಾರರಿಗೆ ರೋಟರಿ ಸಂಸ್ಥೆ ವತಿಯಿಂದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಬಾಲ್ಯದಿಂದ ಯೌವ್ವನದವರೆಗೂ ನಿತ್ಯ ಎಚ್ಚರಿಕೆಯಿಂದ ಹಲ್ಲುಗಳನ್ನು ಜೋಪಾನ ಮಾಡಿಕೊಳ್ಳಬೇಕಾದುದು ಎಲ್ಲರ ಹೊಣೆ ಎಂದರು.
ಪುರಸಭೆ ಮಾಜಿ ಸದಸ್ಯ ತಿಮ್ಮಣ್ಣ ವನ್ನಾಲ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಬಾಬಣಸಾ ರಾಯಬಾಗಿ, ಕಾರ್ಯದರ್ಶಿ ಎಂ.ಎಂ. ಕುಲಕರ್ಣಿ, ಬಾಬು ಕಾತರಕಿ, ಶೇಖರ ಅಂಗಡಿ, ಮಲ್ಲಿಕಾರ್ಜುನ ಹಿರೇಮನಿ, ರಮೇಶ ಮಾರನಬಸರಿ, ಶಶಿಧರ ಕೆಂಚಿ, ಜಗದೀಶ ಕನಕೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

