ಗದಗ

ನಟಿ ಹರ್ಷಿಕಾ ಪೂಣಚ್ಚ ರೋಡ್ ಶೋ

Published On :

ಗದಗ:  ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಭಾನುವಾರ ನಡೆದ ರೋಡ್ ಶೋಗೆ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ತಾರಾ ಮೆರಗು ನೀಡಿದ್ದರು. ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಅವರೊಂದಿಗೆ ಬೆಟಗೇರಿ ಭಾಗದ ವಾರ್ಡ್ 5, 6, 7, 8, 9ರಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರವಾಗಿ ಮತ ಯಾಚಿಸಲಾಯಿತು. ನಟಿ ಹರ್ಷಿಕಾ ಪೂಣಚ್ಚ ಸೇರಿದ್ದ ಮತದಾರರನ್ನುದ್ದೇಶಿಸಿ ಮಾತನಾಡಿ, ಹಾಲಿ ಸಂಸದ ಶಿವಕುಮಾರ ಉದಾಸಿ ಅವರ ಅಭಿವೃದ್ಧಿಪರ ಕಾರ್ಯ ಗುರುತಿಸಿ ತಾವು ಸ್ವಯಂ ಪ್ರೇರಣೆಯಿಂದ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದು ಅತ್ಯವಶ್ಯವಿದೆ. ಯುವ ಮತದಾರರು, ಸುಶಿಕ್ಷಿತರು ತಪ್ಪದೇ ಮತದಾನ ಮಾಡಿ ಬಿಜೆಪಿ ಬೆಂಬಲಿಸಬೇಕೆಂದು ಹೇಳಿದರು. ಜಿಲ್ಲಾ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿದರು. ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಶ್ರೀನಿವಾಸ ಕರಿ, ಮಾಧವ ಗಣಾಚಾರಿ, ನಾಗಲಿಂಗ ಐಲಿ, ನೂರಾರು ಕಾರ್ಯಕರ್ತರು, ಬಿಜೆಪಿ ಮುಖಂಡರು ರೋಡ್ ಶೋ ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಎಚ್.ಕೆ. ಪಾಟೀಲ ರೋಡ್ ಶೋ
ಗದಗ:  ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರವಾಗಿ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಲಾಯಿತು.  ನಗರದ ವೀರನಾರಾಯಣ ದೇವಸ್ಥಾನದಿಂದ ರೋಡ್ ಶೋ ಪ್ರಾರಂಭವಾಯಿತು. ಅಭ್ಯರ್ಥಿ ಸಲೀಂ ಅಹ್ಮದ್, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಸಾಧಿಕ ನರಗುಂದ, ಅಕ್ಬರ್‌ಸಾಬ್ ಬಬರ್ಚಿ, ಸುಜಾತಾ ದೊಡ್ಡಮನಿ, ಸುರೇಶ ಕಟ್ಟಿಮನಿ, ರಾಮಣ್ಣ ಫಲದೊಡ್ಡಿ, ಸಚಿನ್ ಪಾಟೀಲ ಮುಂತಾದವರು ಹಾಜರಿದ್ದರು. ರೋಡ್ ಶೋ ಗಂಗಾಪುರಪೇಟೆ, ಜವುಳಗಲ್ಲಿ, ಸ್ಟೇಶನ್ ರಸ್ತೆ, ಮಹೇಂದ್ರಕರ್ ಸರ್ಕಲ್, ಗಾಂಧಿ ವೃತ್ತ, ಪಾಲಾ ಬದಾಮಿ ರಸ್ತೆ, ರೋಟರಿ ಸರ್ಕಲ್, ಹಳೆ ಬಸ್ ನಿಲ್ದಾಣ, ಕೆ.ಎಚ್. ಪಾಟೀಲ ಸರ್ಕಲ್ ಮೂಲಕ ಹತ್ತಿಕಾಳ ಕೂಟ ತಲುಪಿತು. ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.