ಗದಗ

ಜಾತ್ರೆ: ಭಾವೈಕ್ಯ ಬಿಂಬಿಸಿದ ಮೆರವಣಿಗೆ

Published On :

ಗದಗ: ತೋಂಟದಾರ್ಯ ಮಠದ ಜಾತ್ರೆ ನಿಮಿತ್ತ ಮಂಗಳವಾರ ರಥೋತ್ಸವಕ್ಕೆ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಆಕರ್ಷಕ ಮೆರವಣಿಗೆ ಜನಮನ ಸೆಳೆಯಿತು.
ಅಲಂಕೃತ ವಾಹನದಲ್ಲಿ ಸಾಗಿ ಬಂದ ತೋಂಟದ ಶ್ರೀಗಳಿಗೆ ಮಾರ್ಗದುದ್ದಕ್ಕೂ ಭಕ್ತರು ಮಾಲಾರ್ಪಣೆ ಮಾಡಿ  ನಮಿಸಿದರು. ಜಾಮಿಯಾ ಮಸೀದಿ ಮುಂಭಾಗ ಮೆರವಣಿಗೆ ಆಗಮಿಸುತ್ತಿದ್ದಂತೆ ಮುಸ್ಲಿಂ ಧುರೀಣ ಅಬ್ದುಲ್ ರಜಾಕ್ ಡಂಕೇದ, ಶಬ್ಬಿರ ಅಹ್ಮದ್ ಅಬ್ಬಿಗೇರಿ, ಮುನಿರ್ ಬಿಜಾಪುರ ಸಂಗಡಿಗರು ಜುಮ್ಮಾ ಮಸೀದಿ ಜಮಾತಿನ ಹಿರಿಯರು ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ತೋಂಟದ ಸಿದ್ಧಲಿಂಗ ಶಿವಯೋಗಿಗಳು, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಏಸು ಕ್ರಿಸ್ತನ ರೂಪಕಗಳಲ್ಲಿ ವಿದ್ಯಾರ್ಥಿಗಳು ಜನರನ್ನು ಆಕರ್ಷಿಸಿದರು. ಮೆರವಣಿಗೆ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ಪ್ರಭು ಹಿರೇಮಠ, ಕಾರ್ಯದರ್ಶಿ ಶಿವಕುಮಾರ ತೆಗ್ಗಿನಮಠ, ಜಾತ್ರಾ ಕೇಂದ್ರ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ಉಪಾಧ್ಯಕ್ಷ ಕೆ.ಎಚ್. ಬೇಲೂರ, ಅಶೋಕ ಲಕ್ಕುಂಡಿ, ದಾನಯ್ಯ ಗಣಾಚಾರಿ, ಕಾರ್ಯದರ್ಶಿ ಎಂ.ಸಿ. ಐಲಿ, ಸಹಕಾರ್ಯದರ್ಶಿ ಶಿವಕುಮಾರ ಪಾಟೀಲ, ಶಿವಯೋಗಿ ತಡಸದ, ಕೋಶಾಧ್ಯಕ್ಷ ಪ್ರಕಾಶ ಉಗಲಾಟ, ಸಹಕೋಶಾಧ್ಯಕ್ಷ ಸಂಗಣ್ಣ ಲಕ್ಕುಂಡಿ, ವಿವಿಧ ಉಪಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಸಮಾರಂಭದಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಂಗಳೂರಿನ ನಿಡುಮಾಮುಡಿ ಮಹಾಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಶ್ರೀ, ಹರಿಹರ ಪಂಚಮಸಾಲಿ ಪೀಠದ ಸಿದ್ಧಲಿಂಗ ಶ್ರೀ, ಕಲಬುರ್ಗಿಯ ಸುಲಫಲಮಠದ ಡಾ. ಮಹಾಂತ ಶಿವಾಚಾರ್ಯರು, ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ, ಮೈಸೂರಿನ ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಶ್ರೀ, ಸೊನ್ನ ದಾಸೋಹಮಠದ ಡಾ. ಶಿವಾನಂದ ಶ್ರೀ ಮುಂತಾದವರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.