ತಂಪೆರೆದ ಮಳೆ: ಕೃಷಿ ಚಟುವಟಿಕೆ ಜೋರು
ವಿಶೇಷ ವರದಿ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಚೆಗೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು, ಶನಿವಾರ ರೈತರು ಮುಂಗಾರಿ ಹಂಗಾಮಿನ ಬೆಳೆಗಳ ಬೀಜ ಬಿತ್ತನೆಗಾಗಿ ಹೊಲಗಳನ್ನು ಹರಗಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದೊಂದು ವಾರದಿಂದ ಎರಡು ಸಲ ಸುರಿದ ಮಳೆಯಿಂದ ರೈತರು ಹೊಲಗಳತ್ತ ಮುಖ ಮಾಡಿದ್ದಾರೆ. ಚಕ್ಕಡಿ, ಜೋಡೆತ್ತಿನ ಸಹಿತ ರಂಟೆ, ಕುಂಟಿ, ನೇಗಿಲು ಸಹಿತ ಹರಗಿ ಹದಗೊಳಿಸುವ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಆದರೆ, ಇನ್ನೊಂದು ಉತ್ತಮ ಮಳೆ ಸುರಿದರೆ ಬಿತ್ತನೆಗೆ ಅನುಕೂಲವಾಗಲಿದೆ ಎಂದು ರೈತರು ನಿರೀಕ್ಷೆಯಿಂದ ಕಾತರರಾಗಿದ್ದಾರೆ. ಸದಾ ಬರಗಾಲ ಬವಣೆಗೆ ತುತ್ತಾಗಿ ಕಡುಕಷ್ಟ ಅನುಭವಿಸಿದ ರೈತರು ಕಂಗೆಟ್ಟು ಗೋವಾ, ಕಾರವಾರ ಮತ್ತಿತರ ಕಡೆ ಉದ್ಯೋಗ ಅರಿಸಿ ಗುಳೆ ಹೊಗಿದ್ದರು. ಈಗ ಸುರಿದ ಉತ್ತಮ ಮುಂಗಾರು ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರೆತಿದೆ.
ಗುಳೆ ಹೋದವರೆಲ್ಲ ಸ್ವ ಗ್ರಾಮದತ್ತ ಮರಳುತ್ತಿದ್ದಾರೆ. ಇನ್ನೊಂದೆಡೆ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಸಜ್ಜೆ, ಹೈಬ್ರೀಡ್ಜೋಳ, ಗುರೆಳ್ಳು, ಎಳ್ಳು, ತೊಗರಿ ಇತ್ಯಾದಿ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಗಜೇಂದ್ರಗಡ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಗೊಗೇರಿ, ಮಾಟರಂಗಿ, ರಾಮಾಪುರ, ಪುರ್ತಗೇರಿ, ಕೊಡಗಾನೂರು, ವೀರಾಪುರ, ಚಿಲ್ಝರಿ, ಕಾಲಕಾಲೇಶ್ವರ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರು, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ ಗ್ರಾಮಗಳಲ್ಲಿ ರೈತರು ತಮ್ಮ ಹೊಲದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ. ನಿಡಗುಂದಿ, ಸೂಡಿ, ಮತ್ತಿತರ ಗ್ರಾಮಗಳ ಕಪ್ಪು ಮಿಶ್ರತ ಎರೆ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಕಾರ್ಯಕ್ಕೆ ಮತ್ತೊಂದು ಮಳೆ ಆಗಮಿಸುವುದನ್ನು ಕಾಯ್ದು ಕುಳಿತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

