ಮುಕ್ತಾಯಕ್ಕ, ಅಜಗಣ್ಣ ಶೇಷ್ಠ ವಚನಕಾರರು
ಕನ್ನಡಪ್ರಭ ವಾರ್ತೆ, ಗದಗ, ಏ. 22
ಶರಣರ ವಚನಗಳು ಸಮಾಜದ ವಿವಿಧ ಮುಖಗಳ ಚಿತ್ರವನ್ನು ಬಿಂಬಿಸುವ ಅಮೂಲ್ಯ ರತ್ನದಂತೆ. ಅಧ್ಯಾತ್ಮಕ್ಕೆ ವಚನಗಳೆ ಬಂಡವಾಳ, ಮೌಲ್ಯಯುತ ವಚನಗಳನ್ನು ರಚಿಸಿದ ಅಜಗಣ್ಣ ಮತ್ತು ಮುಕ್ತಾಯಕ್ಕ ಶ್ರೇಷ್ಠ ವಚನಕಾರರು ಎಂದು ಬೀದರಿನ ಬಸವತತ್ವ ಚಿಂತಕರಾದ ಗಿರಿಜಕ್ಕ ಧರ್ಮರಡ್ಡಿ ಹೇಳಿದರು.
ಅವರು ನಗರದ ತಾಪಂ ಆವರಣದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮುಕ್ತಾಯಕ್ಕ ಮತ್ತು ಅಜಗಣ್ಣನವರ ವಚನ ಕುರಿತು ಮಾತನಾಡಿದರು.
ಮುಕ್ತಾಯಕ್ಕ ಹಾಗೂ ಅಜಗಣ್ಣನವರು ಮೂಲತಃ ಲಕ್ಕುಂಡಿಯವರು. ಮುಕ್ತಾಯಕ್ಕ ತನ್ನ ಅಣ್ಣನಾದ ಅಜಗಣ್ಣನನ್ನೆ ಆಧ್ಯಾತ್ಮಿಕ ಗುರುಯೆಂದು ನಂಬಿದ್ದಳು. ಇವರ ಕೆಲವೇ ವಚನಗಳು ಸಮಾಜ ಪರಿವರ್ತನೆಗೆ ದಾರಿ ದೀಪವಾಗಿವೆ. 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಇವರು ಬೇಸಾಯವನ್ನು ಮಾಡುತ್ತಾ ಅಜಗಣ್ಣ ಮಹಾಘನ ಸೋಮೇಶ್ವರ ಅಂಕಿತವಿರುವ 10 ವಚನ, ಮುಕ್ತಾಯಕ್ಕ, ಅಜಗಣ್ಣ ಅಂಕಿತವಿರುವ 37 ವಚನಗಳು ಮಾತ್ರ ರಚಿಸಿ ಕಾಯಕ ನಿಷ್ಠೆ, ಅಧ್ಯಾತ್ಮ ಚಿಂತನೆ, ಭಕ್ತಿಯ ಮೂಲ ಗುರು ಸೇವೆ, ಐಶ್ವರ್ಯ ಮೂಲ ಲಿಂಗಾರ್ಚನೆ, ಮೋಕ್ಷ ಮೂಲ ಘಟಸಂತೃಪ್ತಿ ಸಾಕು ಎನ್ನುವುದೇ ಸಿರಿತನ ಬೇಕು ಎನ್ನುವುದೇ ಬಡತನ. ಇಂತಹ ಜೀವನಕ್ಕೆ ಹತ್ತಿರವಾಗುವಂತಹ ವಚನಗಳನ್ನು ನೀಡಿದ ಮಹಾಶರಣರು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಆಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ ಶರಣರ ವಚನಗಳೇ ಸ್ಫೂರ್ತಿ. ವಚನಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳಿದ್ದಂತೆ. ವಚನಗಳ ವೈಚಾರಿಕತೆಯಿಂದ ಮಾನವನ ಬದುಕು ಸಾರ್ಥಕತೆ ಪಡೆದುಕೊಳ್ಳಲಿ ಎಂದರು. ನರಗುಂದದ ಹಿರಿಯ ಕವಿ ಮಾರುತಿ ಬೊಸಲೆ ಸ್ವರಚಿತ ಕವನ ವಾಚಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ, ಶಶಿಕಾಂತ ಕೊರ್ಲಹಳ್ಳಿ, ಪ್ರಾ. ಕೆ.ಎಚ್. ಬೇಲೂರ, ಪ್ರಕಾಶ ಅಸುಂಡಿ, ಸುರೇಶ ಅಂಗಡಿ, ಪಿ.ಕೆ. ಮೂಲಿಮಠ, ಕೆ.ವಿ. ಕುಂದಗೋಳ, ಅಂದಾನಪ್ಪ ವಿಭೂತಿ, ಮರಳಸಿದ್ದಪ್ಪ ದೊಡ್ಡಮನಿ, ಅ.ದ. ಕಟ್ಟಿಮನಿ, ಚಂದ್ರಪ್ಪ ಎಚ್.ಎಸ್., ಬಸವರಾಜ ಅಂಬಿಗೇರ, ಮುತ್ತಪ್ಪ ಬದ್ನಿಕಾಯಿ, ವಾಸು ಟಿಕಾನದಾರ, ಅಲ್ಲಮಪ್ರಭು ಬಡಿಗಣ್ಣನವರ, ನಾಗಭೂಷಣ ಬಡಿಗಣ್ಣನವರ, ಬಸವರಾಜ ವಾರಿ, ಐ.ಎಸ್. ಮಾದರ, ಜೆ.ಎ. ಪಾಟೀಲ, ವಿ.ಬಿ. ಪಠಾಣಿ, ಎಸ್.ಬಿ. ಕಣಗಿನಹಾಳ, ಬಸವಣ್ಣ ಅಂಗಡಿ, ಶಂಕ್ರಣ್ಣ ಅಂಗಡಿ, ರಾಜಶೇಖರ ಕರಡಿ, ಎಸ್.ಎಸ್. ತಳ್ಳಿಹಾಳ, ಜಯಶ್ರೀ ಅಂಗಡಿ, ಸುಚಿತ್ ಹರಿವಾಣ, ಸಚಿನ ಹರಿವಾಣ, ಶ್ರೇಯಸ್ ಗವಿಸಿದ್ದಪ್ಪ, ಆರ್.ಬಿ. ರಾಮಡಗಿ, ಆರ್.ಜಿ. ಹಾಸಲಕರ, ಎಂ.ಜಿ. ಹಾಸಲಕರ ಮುಂತಾದವರು ಪಾಲ್ಗೊಂಡಿದ್ದರು. ಗೌರಾ ಬಡಿಗಣ್ಣನವರ ಹಾಗೂ ಸರೋಜಾ ಮುಗದ ಪ್ರಾರ್ಥಿಸಿದರು. ಎಚ್.ಡಿ. ಕುರಿ ಸ್ವಾಗತಿಸಿದರು. ಜಿಲ್ಲಾ ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ನಿರೂಪಿಸಿದರು. ಮಲ್ಲಿಕಾರ್ಜುನ ಪೂಜಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

