ಪುಸ್ತಕ ಓದುವ ಸಂಸ್ಕೃತಿಯಿಂದ ಬುದ್ಧಿಶಕ್ತಿ ವೃದ್ಧಿ
ಕನ್ನಡಪ್ರಭ ವಾರ್ತೆ, ಗದಗ, ಏ. 23
ಪುಸ್ತಕಗಳು ಜಗತ್ತನ್ನು ಆಳುತ್ತವೆ. ರಸ್ಕೀನ್ ಅವರ ಅನ್ಟು ದಿ ಲಾಸ್ಟ್ ಪುಸ್ತಕ ದೇಶದ ಪಿತಾಮಹ ಗಾಂಧೀಜಿ ಜೀವನ ವಿಚಾರಧಾರೆ ಬದಲಿಸಿತು. ಪುಸ್ತಕಗಳ ಓದುವ ಸಂಸ್ಕೃತಿ ಉಳಿದು ಬೆಳೆದು ಬರಬೇಕು. ಯುವಜನಾಂಗದ ಬುದ್ಧಿಮತ್ತೆ, ವಿಚಾರ ಶಕ್ತಿ ಬೆಳವಣಿಗೆ, ವ್ಯಕ್ತಿತ್ವ ವಿಕಸನ ಬೆಳವಣಿಗೆಯಲ್ಲಿ ಪುಸ್ತಕಗಳು ಸಹಕಾರಿಯಲ್ಲದೆ ಮಹತ್ವದ ಪಾತ್ರ ವಹಿಸಬಲ್ಲವು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2168ನೇ ಶಿವಾನುಭವದಲ್ಲಿ ಸೋಮವಾರ ಸಂಜೆ ನಡೆದ ಪುಸ್ತಕ ದಿನಾಚರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಒಂದು ಬೈಬಲ್ ಗ್ರಂಥ ಇಡಿ ಕ್ರೈಸ್ತರನ್ನು, ಒಂದು ಕುರಾನ್ ಗ್ರಂಥ ಎಲ್ಲ ಮುಸ್ಲಿಂರನ್ನು, ಭಗವದ್ಗೀತೆ, ರಾಮಾಯಣ ಮಹಾಭಾರತದಂತಹ ಗ್ರಂಥಗಳು ಹಿಂದೂ ಧರ್ಮೀಯರ ಮೇಲೆ ತಮ್ಮ ಪ್ರಭಾವ ಬೀರಬಲ್ಲವು ಎಂಬುದು ಪುಸ್ತಕಗಳಿಗೆ ಇರುವ ಮಹತ್ವವನ್ನು ನಿರ್ಧರಿಸುತ್ತವೆ. ಆಧುನಿಕ ಕಾಲದಲ್ಲಿ ಮನುಷ್ಯ ಯಾಂತ್ರಿಕ ಬದುಕನ್ನು ನಡೆಸುತ್ತಿದ್ದಾನೆ. ಪುಸ್ತಕಗಳ ಓದು ಕಡಿಮೆಯಾಗಿದೆ. ಯುವಜನಾಂಗದ ಬುದ್ಧಿಮತ್ತೆ ಕೇವಲ ನೌಕರಿಗಾಗಿ ಹರಸಾಹಸ ನಡೆಸುವುದೇ ವಿದ್ಯಾರ್ಥಿ ಜೀವನ ಎಂಬಂತಾಗಿದೆ. ಅಧ್ಯಯನಶೀಲತೆ ವಿದ್ಯಾರ್ಥಿ ಜೀವನ ಹಾಗೂ ಸಾಧಕರ ಜೀವನದ ಒಂದು ಅಂಶವಾಗಿರಬೇಕಾದ ಅಗತ್ಯತೆಯನ್ನು ಮರೆಮಾಚಲಾಗುತ್ತಿದೆ ಇದು ವಿಷಾದನೀಯ.
ವಿಶ್ವದ ಮಹಾನ್ ಸಾಧಕರು ಶ್ರೇಷ್ಠ ಅಧ್ಯಯನಶೀಲರಾಗಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆ ಸಿಗುತ್ತದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ದಿನಕ್ಕೆ 18 ಗಂಟೆ ಅಧ್ಯಯನಕ್ಕೆ ಮೀಸಲಿಡುತ್ತಿದ್ದರು ಎಂಬುದು ಎಷ್ಟು ಜನತೆಯ ಗಮನ ಸೆಳೆದಿದೆ. ಕನ್ನಡದಲ್ಲಿಯೇ ಸಾಕಷ್ಟು ಉತ್ಕೃಷ್ಟ ಬರಹಗಾರರು, ಸಾಹಿತಿಗಳು ಇದ್ದಾರೆ.
ಲೋಹಿಯಾದಂತ ಪ್ರಕಾಶನ ಸಂಸ್ಥೆ ವೈಚಾರಿಕ ಪುಸ್ತಕಗಳ ಪ್ರಕಾಶನಕ್ಕೆ ಹೆಸರಾಗಿದೆ. ಅಂತಹ ಪುಸ್ತಕ, ಕಾದಂಬರಿ, ಕಥೆ, ಸಾಹಿತ್ಯ ಓದುವ ಪರಿಪಾಠ ಬೇಕು. ಈಗಿನ ಯುವಕರು ಇಂತಹ ಪುಸ್ತಕಗಳನ್ನು ಹೆಚ್ಚು ಓದಲಾಗದಿದ್ದರೆ ಕನಿಷ್ಠ ಸಾಕಷ್ಟು ಹೊಸ ಹೊಸ ವಿಷಯಗಳ ಕುರಿತು ಬೆಳಕು ಚೆಲ್ಲುವ ದಿನಪತ್ರಿಕೆಗಳು, ಅವುಗಳ ವಿಶೇಷ ಪುರವಣಿಗಳನ್ನು ತಪ್ಪದೇ ಓದಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಸಿದ್ದು ಯಾಪಲಪರ್ವಿ, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಯಾಪಲಪರ್ವಿ ಅವರಿಂದ ವಚನಗಳ ಗಾಯನ ಜರುಗಿತು. ಕಾವ್ಯ ಹುಬ್ಬಳ್ಳಿ ಧರ್ಮ ಗ್ರಂಥ ಪಠಣ, ಗಂಗಾ ಹುಬ್ಬಳ್ಳಿ ಧರ್ಮ ಚಿಂತನೆ ನಡೆಸಿದರು.
ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರ, ರತ್ನಕ್ಕ ಪಾಟೀಲ, ಸಹಕಾರ್ಯದರ್ಶಿ ವೀರಣ್ಣ ಜ್ಯೋತಿ, ಕೋಶಾಧ್ಯಕ್ಷ ಚಂದ್ರಶೇಖರಪ್ಪ ಅರಳಿ ಮುಂತಾದವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಸ್ವಾಗತಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ನಿರೂಪಿಸಿದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

