ಗದಗ

ಕರ್ತವ್ಯದತ್ತಲೂ ಗಮನ ಹರಿಸಿ: ಪ್ರೊ. ಬೇಲೂರ

Published On :

ಗದಗ: ನಮ್ಮ ಹಕ್ಕುಗಳ ಬಗ್ಗೆ ಹೋರಾಡಿದಷ್ಟು ನಮ್ಮ ಕರ್ತವ್ಯಕ್ಕಾಗಿ ನಾವು ಹೋರಾಡುವುದೇ ಇಲ್ಲ ಎಂದು ಪ್ರೊ. ಕೆ.ಎಚ್. ಬೇಲೂರ ಹೇಳಿದರು. ಅವರು ಈಚೆಗೆ ನಗರದ ರೋಟರಿ ಕ್ಲಬ್ನಲ್ಲಿ ಜರುಗಿದ ಸಭೆಯಲಿ  ಪಾಲ್ಗೊಂಡು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥಿತವಾಗಿದೆಯೇ ಎಂಬ ವಿಷಯದ ಕುರಿತು ಮಾತನಾಡಿದರು. ಮತದಾನ ಪ್ರಕ್ರಿಯೆಯು ಪವಿತ್ರವಾದ ಕಾರ್ಯವಾಗಿದ್ದು, ಅನೇಕ ಒತ್ತಡಗಳಿಗೆ ಸಿಲುಕಿದ ಹಿನ್ನೆಲೆಯಲ್ಲಿ ಮತಗಳು ಮಾರಾಟವಾಗುತ್ತಿರುವುದು ನೋವಿನ ಸಂಗತಿ. ಇದೇ ಸ್ಥಿತಿ ಮುಂದುವರೆದರೆ ದೇಶಕ್ಕೆ ಭವಿಷ್ಯವೇ ಇಲ್ಲ ಎಂದರು. ರೋಟರಿ ಸಂಸ್ಥೆ ಅಧ್ಯಕ್ಷ ಡಾ. ಪ್ರದೀಪ ಉಗಲಾಟದ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಸಾರ್ವಭೌಮ. ಅವನು ಜಾಗರೂಕನಾದರೆ ವ್ಯವಸ್ಥೆ ಪರಿಣಾಮಕಾರಿಯಾಗಬಲ್ಲದು ಎಂದರು. ರೋಟರಿ ಕಾರ್ಯದರ್ಶಿ ಎಂ.ಬಿ. ಬಾತಕಾನಿ, ಎ.ಎಂ. ಗೌಡರ, ಎಂ.ಎಂ. ಹೊಳ್ಳಿಯವರ, ಜ್ಯೋತಿಶ್ರೀ ಕಮತ, ಎಸ್.ಎಲ್. ಹಕ್ಕಾಪಕ್ಕಿ, ಎಸ್.ಕೆ. ನಾಲತ್ವಾಡ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಫ್. ಬೆಣಕಣ್ಣನವರ ಪರಿಚಯಿಸಿದರು. ಚನ್ನವೀರ ಹುಣಸಿಕಟ್ಟಿ ಕಾಲರ್ ಧಾರಣೆ ಮಾಡಿದರು. ಎಸ್.ಎಫ್. ಬೆನಕಣ್ಣನವರ ವಂದಿಸಿದರು.
ಪಾಷಾಗೆ ಶಿಕ್ಷಣ ರತ್ನ ಪ್ರಶಸ್ತಿ
ಮುಂಡರಗಿ: ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಕೊಡುವ ಶಿಕ್ಷಣ ರತ್ನ ಪ್ರಶಸ್ತಿಗೆ ಸ್ಥಳೀಯ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಿಯಾಜ ಪಾಷಾ ಆಯ್ಕೆಯಾಗಿದ್ದಾರೆ. ರಿಯಾಜ್ ಪಾಷಾ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಮುಂಡರಗಿಯಲ್ಲಿ ಕಳೆದ 4 ವರ್ಷದಿಂದ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಏ. 28 ರಂದು ಬೆಂಗಳೂರಿನ ಯುವಜನ ಸೇವಾ ಕ್ರೀಡಾ ಇಲಾಖೆಯ ಸಭಾಂಗಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಚನ ಕಮ್ಮಟ ಸ್ಪರ್ಧೆ
ಗಜೇಂದ್ರಗಡ: ಚಿತ್ರದುರ್ಗ ಮುರುಘಾಮಠ ವತಿಯಿಂದ ನಡೆಯುವ ಜಿಲ್ಲಾ ಮಟ್ಟದ ವಚನ ಕಮ್ಮಟ ಸ್ಪರ್ಧೆಯಲ್ಲಿ ಸ್ಥಳೀಯ ಜಗದಂಬಾ ವಿದ್ಯಾಪೀಠದ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಅಕ್ಷತಾ ಪೊಲೀಸಪಾಟೀಲ್ ಹಾಗೂ ದೀಪ್ತಿ ದಾನಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.