ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ
ಮುಳಗುಂದ: ಕ್ರೀಡೆ ಯಾವುದಾದರೂ ಇರಲಿ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹಜರತ್ ದಾವಲಮಲ್ಲಿಕ್ ಕ್ರಿಕೆಟ್ ಕ್ಲಬ್ನ ಅಧ್ಯಕ್ಷ ಜಗದೀಶ ಬಟ್ಟೂರ ಹೇಳಿದರು.
ಅವರು ಪಟ್ಟಣದ ದಾವಲಮಲ್ಲಿಕ್ ಪಹಾಡನಲ್ಲಿ ಹಜರತ್ ದಾವಲಮಲ್ಲಿಕ್ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ನ ಅಂತಿಮ ಪಂದ್ಯದಲ್ಲಿ ಜಯಗಳಿಸಿದ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಪ್ರಾಥಮಿಕ ಹಂತದಲ್ಲೇ ಪಾಲಕರು ಬೆಳೆಸಬೇಕು. ಜತೆಗೆ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು ಎಂದರು.
ಮಾದೇಶ್ವರ ಲಿಂಗದಾಳ ಮಾತನಾಡಿ, ಯುವಕರು ಗುಟ್ಕಾ, ತಂಬಾಕು, ಅಡಕೆ ಸೇವನೆಯಂತಹ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ದೇಹ ಸದೃಢ, ಉತ್ತಮವಾಗಿರಲು ಸಾಧ್ಯ ಎಂದರು. ಟೂರ್ನಿಯಲ್ಲಿ 30ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಡಿಎಂಪಿ ಮುಳಗುಂದ ತಂಡ ಹಾಗೂ ಕೆಎನ್ಸಿಸಿ ಹೀರೆಕೊಪ್ಪ ತಂಡದ ನಡುವೆ ಅಂತಿಮ ಪಂದ್ಯ ಏರ್ಪಟ್ಟಿತು. ಇದರಲ್ಲಿ ಕೆಎನ್ಸಿಸಿ ಹೀರೆಕೊಪ್ಪ ವಿಜಯಗಳಿಸಿ ಪ್ರಥಮ ಬಹುಮಾನ ಬಾಚಿಕೊಂಡರೆ, ದ್ವಿತೀಯ ಸ್ಥಾನದಲ್ಲಿ ಡಿಎಂಪಿ ಮುಳಗುಂದ ತಂಡ, ತೃತೀಯ ಸ್ಥಾನದಲ್ಲಿ ಬೆಸ್ಟ್ ಇಂಡಿಸ್ ಹಾಗೂ ಕೆಜಿಎನ್ ತಂಡಗಳು ಬಹುಮಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಎ.ಡಿ. ಮುಜಾವರ, ಡಿ.ಡಿ. ಮುಜಾವರ, ಅಬ್ದುಲ್ಹಮೀದ ಮುಜಾವರ, ಖಲಂದರ ಮುಲ್ಲಾ, ದಾವಲಸಾಬ್ ಮುಜಾವರ, ನೂರಹಮ್ಮದ ಮುಜಾವರ, ಇಮಾಮಹುಸೇನ ಮುಜಾವರ ಮುಂತಾದವರು ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

