ಗದಗ

ಗದಗ: ಗಂಜೀ ಬಸವೇಶ್ವರ ಜಾತ್ರಾ ಮಹೋತ್ಸವ

Published On :

ಗದಗ: ಗದುಗಿನ ಉಸಗಿನಗಟ್ಟಿಯ ಗಂಜೀ ಬಸವೇಶ್ವರ 52ನೇ ಜಾತ್ರಾ ಮಹೋತ್ಸವ, ಜಗಜ್ಯೋತಿ ಬಸವೇಶ್ವರ ಹಾಗೂ ಜ. ಏಕೋರಾಮಾರಾಧ್ಯರ ಜಯಂತ್ಯುತ್ಸವ ಬಸವ ಮಂಟಪದಲ್ಲಿ ಮೇ 1ರಿಂದ 3ರ ವರೆಗೆ ನಡೆಯಲಿದೆ.
ಮೇ 1ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಸೊರಟೂರಿನ ಫಕ್ಕೀರೇಶ್ವರ ಸ್ವಾಮಿಗಳು ವಹಿಸುವರು. ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ಬ. ದಂಡಿನ ಉಪನ್ಯಾಸ ನೀಡುವರು. ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರ, ಕಮಿಟಿ ಅಧ್ಯಕ್ಷ ಉಳವಪ್ಪ ಹೊಂಬಳ, ಗೌರವ ಕಾರ್ಯದರ್ಶಿ ನಿಂಗಪ್ಪ ಪಡಗದ, ಫಕ್ಕೀರಪ್ಪ ಹೆಬಸೂರ ಆಗಮಿಸುವರು. ವಿವಿಧ ಸಾಧಕರ ಸನ್ಮಾನ ಜರುಗಲಿದೆ. ರಾತ್ರಿ 9.30ಕ್ಕೆ ಕೊತಬಾಳದ ಅರುಣೋದಯ ಕಲಾತಂಡದಿಂದ ಜನಪದ ನೃತ್ಯ, ಜನಪದ ಹಾಡು ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಮೇ 2ರಂದು ಬೆಳಗ್ಗೆ 8ಕ್ಕೆ ಜಗಜ್ಯೋತಿ ಬಸವೇಶ್ವರ ಹಾಗೂ ಜ. ಏಕೋರಾಮಾರಾಧ್ಯರ ಭಾವಚಿತ್ರ ಮತ್ತು ನೂರಾರು ಜೋಡಿ ಎತ್ತುಗಳ ಮೆರವಣಿಗೆ, ಸಂಜೆ 6.30ಕ್ಕೆ ಮಹಾರಥೋತ್ಸವ ನಡೆಯಲಿದೆ. ರಾತ್ರಿ 8ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಕುಮಾರ ಗಡ್ಡಿ ವಹಿಸುವರು. ಜಾತ್ರಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಗುರುಶಾಂತಗೌಡ ಮರಿಗೌಡ್ರ, ರೇವಯ್ಯ ಹಿರೇಮಠ, ಶಂಕರ ಕರಿಬಿಷ್ಠಿ, ಮಾರ್ತಾಂಡಪ್ಪ ಹಾದಿಮನಿ ಆಗಮಿಸುವರು. ಕೋಳಿವಾಡ ಗ್ರಾಮದ ಶಾಲಾ ಮಕ್ಕಳಿಂದ ಮಲ್ಲಕಂಬ ಹಾಗೂ ಸ್ಕೀಪಿಂಗ್ ರೋಪ್ ಪ್ರದರ್ಶನ ಜರುಗಲಿದೆ. ಮೇ 3ರಂದು ಸಂಜೆ 6.30ಕ್ಕೆ ಲಘು ರಥೋತ್ಸವ ನಡೆಯಲಿದೆ. ರಾತ್ರಿ 8ರ  ಕಾರ್ಯಕ್ರಮದ ಸಾನ್ನಿಧ್ಯ ಶಿವಕುಮಾರ ಸ್ವಾಮಿಗಳು ವಹಿಸುವರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸುವರು. ಈಶಣ್ಣ ಮುನವಳ್ಳಿ, ಅನಿಲ ಮೆಣಸಿನಕಾಯಿ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.