ಗಟ್ಟಿ ಮನಸ್ಸಿನಿಂದ ತೊಂದರೆ ಎದುರಿಸಿ
ಕನ್ನಡಪ್ರಭ ವಾರ್ತೆ, ಗದಗ, ಏ. 30
ಮನುಷ್ಯ ಜನ್ಮದಲ್ಲಿ ಬರುವ ನಾನಾ ತೊಂದರೆಗಳನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ಅರಿಷಡ್ವರ್ಗಗಳನ್ನು ಗೆದ್ದು ನಿರ್ಮಲ ಭಾವದಿಂದ ನಾವು ಬಾಳಿ ಬದುಕಬೇಕು ಎಂದು ಬಾಲಬ್ರಹ್ಮಚಾರಿ ಸೋಮದೇವ ಭಯ್ಯಾಜಿ ಹೇಳಿದರು.
ಅವರು ಸೋಮವಾರ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ತ್ರಿಮೂರ್ತಿ ಜಿನಮಂದಿರದ ದ್ವಿತೀಯ ವಾರ್ಷಿಕೋತ್ಸವದ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾನು ಎಂಬುದನ್ನು ನಾವು ಬಿಡಬೇಕು, ಸತ್ಕರ್ಮ, ಸದೃಶ್ಯ, ತ್ಯಾಗ ತಪಗಳಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು. ಪಿ.ಎಸ್. ಧರಣೆಪ್ಪನವರ ಮಾತನಾಡಿ, ಮಹಾತ್ಮರ ನುಡಿಗಳನ್ನು ತತ್ವ ಸಂದೇಶಗಳನ್ನು ನಾವು ಕೇಳಿ ತಿಳಿದು ಪಾಲಿಸಬೇಕು ಎಂದರು.
ಅತಿಥಿ ಉಪನ್ಯಾಸ ನೀಡಿದ ಶಿಕ್ಷಕ ಪಿ.ಎಸ್. ಅಲ್ಲಯ್ಯನವರ ಮಾತನಾಡಿ, ಧರ್ಮ ತತ್ವಗಳ ಸಾರದ ನಿಜ, ಆಳ, ಅರಿವು ತಿಳಿದು ನಡೆದಾಗ ಬದುಕಿಗೊಂದು ಅರ್ಥವಿದೆ ಎಂದರು. ಉತ್ತರ ಕರ್ನಾಟಕದ ಜೈನ ಸಂಘದ ಉಪಾಧ್ಯಕ್ಷ ಎನ್.ಡಿ. ಪಾಟೀಲ ಮಾತನಾಡಿ, ಜೈನ ಧರ್ಮದಲ್ಲಿರುವ ಪ್ರತಿ ತತ್ವಗಳು, ನುಡಿಸಂದೇಶಗಳು ಅರ್ಥಪೂರ್ಣವಾಗಿದ್ದು, ಅವುಗಳನ್ನರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಡಿ. ಪಾಟೀಲ ಮಾತನಾಡಿ, ಅಹಿಂಸಾ ಪರಮೋಧರ್ಮ ಹಾಗೂ ಮನವತೆಯ ನಿಜ ಅರ್ಥಗಳು ಜೈನ ಧರ್ಮದ ಸಾರಗಳನ್ನು ಅರಿತು ಅನುಸರಿಸಬೇಕು ಎಂದರು. ಉತ್ತರ ಕರ್ನಾಟಕ ಜೈನ ಮಹಾಸಂಘದ ಅಧ್ಯಕ್ಷ ಪಿ.ಎಸ್. ಧರಣೆಪ್ಪನವರ, ಉಪಾದ್ಯಕ್ಷ ಎನ್.ಡಿ. ಪಾಟೀಲ, ಬನ್ನಿಕೊಪ್ಪದ ಜೈನ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಹಂಸಿ, ಅಣ್ಣಿಗೇರಿಯ ಪುರಸಭೆ ಅಧ್ಯಕ್ಷೆ ನಾಗರತ್ನಾ ನಾವಳ್ಳಿ, ಡಾ. ಕೆ.ಡಿ. ಪಾಟೀಲ, ವಿಜಯ ಕಲಗೌಡ್ರ ಮುಂತಾದವರನ್ನು ಸನ್ಮಾನಿಸಲಾಯಿತು.
ಬಿ.ಎಸ್. ನಾವಳ್ಳಿ, ಜಯಪಾಲ ಕಬಾಡರ, ವೈ.ಬಿ. ಹೊಸೂರ, ವಿಜಯಕುಮಾರ ಅಣ್ಣಿಗೇರಿ, ಅಜಿತ ಪಿಡ್ಡಿ, ರಾಮಚಂದ್ರ ಜೈನರ, ಸಕ್ರಪ್ಪ ಹೊಸೂರ, ರವಿ ಹೊಸೂರ, ಗಂಗನಗೌಡ ಪಾಟೀಲ, ಪ್ರಕಾಶ ಮುತ್ತಿನ, ಮಂಜುನಾಥ ಕಬ್ಬಿಣ, ಭೋಜರಾಜ ನಾವಳ್ಳಿ, ಆನಂದ ಬಸ್ತಿ, ನಾಗರಾಜ ತುಕೋಳ, ಶ್ಯಾಮ ಜೈನ, ಸರೋಜಾ ನಾವಳ್ಳಿ, ಹನುಮಂತಗೌಡ ಪಾಟೀಲ, ಪ್ರಶಾಂತ ಪಾಟೀಲ, ಚಂದ್ರಗೌಡ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಕವಿತಾ ಹಾಗೂ ಸಾಗರಿಕ ಪ್ರಾರ್ಥಿಸಿದರು. ಅಶೋಕ ಮುತ್ತಿನ ಸ್ವಾಗತಿಸಿದರು. ಶಿಕ್ಷಕ ಪಿ.ಎ. ಕುಲಕರ್ಣಿ ನಿರೂಪಿಸಿದರು. ಶಿಥಲ್ ದೇಸಾಯಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

