ಗದಗ

ರೈತರಿಗೆ ತಾಡಪತ್ರಿ ವಿತರಣೆ

Published On :

ಲಕ್ಷ್ಮೇಶ್ವರ: ತಾಡಪತ್ರಿ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡದೇ ಚಿಕ್ಕ ಹಿಡುವಳಿದಾರರಿಗೆ ನೀಡಲಾಗುತ್ತಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಕೃಷಿ ಪಾಸ್‌ಬುಕ್‌ಗಳನ್ನು ತೆಗೆದುಕೊಂಡು ಬಂದಲ್ಲಿ ಸ್ಟಾಕ್ ಇರುವವರೆಗೆ ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ತಾರತಮ್ಯ ನಡೆದಿಲ್ಲ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕೆ.ಎ. ನದಾಫ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರ ರಿಯಾಯತಿ ದರದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಾಡಪತ್ರಿ ವಿತರಣೆ ಮಾಡಲು ರೈತ ಸಂಪರ್ಕ ಕೇಂದ್ರಗಳ ಮೂಲಕ ಪ್ರತಿ ವರ್ಷ ಹಂಚಿಕೆ ಮಾಡುತ್ತಿದ್ದು, ಆದರೆ ಈ ವರ್ಷ ಸಾಕಷ್ಟು ತಾಡಪತ್ರಿಗಳು ಬಾರದೆ ಇರುವುದರಿಂದ ಹಾಗೂ ಬಂದಿರುವ ತಾಡಪತ್ರಿಗಳನ್ನು ಯಾರಿಗೆ ಹಂಚಬೇಕು ಎಂಬ ಗೊಂದಲ ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿತ್ತು. ಇತ್ತ ತಾಡಪತ್ರಿಯ ಸಲುವಾಗಿ ರೈತರು ತಮ್ಮ ಉದ್ಯೋಗ ಬಿಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುವುದು ನಡೆದಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಸೋಮವಾರ ಮಧ್ಯಾಹ್ನ ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಬೇಕು ಎನ್ನುವ ನಿಲುವು ತೋರ್ಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗೆ ತಾಡಪತ್ರಿ ವಿತರಣೆ ಮಾಡುವ ಮೂಲಕ ಸಮಸ್ಯೆಗೆ ತೆರೆ ಎಳೆಯುವ ಕಾರ್ಯ ಮಾಡಿದರು.
ಮಂಜುನಾಥ ಮಾಗಡಿ, ತಾಪಂ ಮಾಜಿ ಸದಸ್ಯ ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ ಮೊದಲಾದವರು ರೈತರನ್ನು ಸಮಾಧಾನಗೊಳಿಸಿ ತಾಡಪತ್ರಿ ವಿತರಣೆ ಕಾರ್ಯವನ್ನು ಸುಗಮಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.