ಶಿರಹಟ್ಟಿ: ಇಂದಿನಿಂದ ಯುವಜನ ಮೇಳ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಕೋಟೆ ಆವರಣದಲ್ಲಿ ತಾಲೂಕು ಮಟ್ಟದ ಯುವಜನ ಮೇಳವನ್ನು ಫೆ. 3ರಿಂದ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಉದ್ಘಾಟಿಸುವರು. ಯಳವತ್ತಿ ಗ್ರಾಪಂ ಅಧ್ಯಕ್ಷ ಬಸವರಾಜ ನೀಲಗುಂದ ಅಧ್ಯಕ್ಷತೆ ವಹಿಸುವರು. ಗದಗ ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಯುವಜನ ಮೇಳದ ಜ್ಯೋತಿ ಬೆಳಗಿಸುವರು. ಅತಿಥಿಗಳಾಗಿ ಶಿರಹಟ್ಟಿ ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಎಂ.ಎಸ್. ದೊಡ್ಡಗೌಡರ, ನಿರ್ಮಲಾ ಬರದೂರ, ಸುನೀತಾ ಹಳ್ಳೆಪ್ಪನವರ, ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಕೋಟೆಪ್ಪ ವರ್ದಿ, ತಾಪಂ ಸದಸ್ಯ ನಿಂಬಣ್ಣ ಮಡಿವಾಳರ, ಶಿವನಗೌಡ ಕಂಠಿಗೌಡರ, ಸುಶೀಲಾ ಲಮಾಣಿ, ಫಕ್ಕೀರವ್ವ ಮುಂಡವಾಡ, ಚನ್ನಪ್ಪ ಜಗಲಿ, ಅನಸವ್ವ ಕಾಳೆ, ಪಾರ್ವತೆವ್ವ ಗಾಣಿಗೇರ, ಸುಷ್ಮಾ ಸೊರಟೂರ, ಪಾರವ್ವ ಈಟಿ, ತಿಮ್ಮರೆಡ್ಡಿ ಅಳವಂಡಿ, ಗಂಗವ್ವ ಲಮಾಣಿ, ಕೆ.ಶಂಕರ, ವೈ.ಎಲ್. ಹಂಪಣ್ಣ, ಆರ್.ಎಸ್. ಬುರುಡಿ, ಎ.ಜೆ. ಮೌಲಾಸಾಬನವರ ಮುಂತಾದವರು ಉಪಸ್ಥಿತರಿರುವರು ಎಂದು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಎಂ.ಡಿ. ತಳ್ಳಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲ್ಪನಿಕ ವೇತನ: ಸ್ವಾಗತ
ಗದಗ: ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ಕಾಲ್ಪನಿಕ ವೇತನ ಮತ್ತು ನಿವೃತ್ತಿ ವೇತನ ಕುರಿತು ಮಂಡಿಸಿದ ವಿಧೇಯಕ 2014 ಕೆಲವೊಂದು ತಿದ್ದುಪಡಿಗಳೊಂದಿಗೆ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿದ್ದನ್ನು ರಾಜ್ಯ ಪಪೂ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ವಿ. ಸಂಕನೂರ ಸ್ವಾಗತಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಧೇಯಕದಲ್ಲಿ ಶಿಕ್ಷಕರಿಗೆ ಮಾರಕವಾದ ಅನುದಾನರಹಿತ ಅವಧಿಯನ್ನ ಕಾಲ್ಪನಿಕ ವೇತನ ನಿಗದಿ, ಪದೋನ್ನತಿ, ನಿವೃತ್ತಿ ಮತ್ತು ಇತರ ಯಾವುದೇ ಆರ್ಥಿಕ ಸೌಲಭ್ಯಗಳಿಗೆ ಪರಿಗಣಿಸಬಾರದು ಎಂಬ ಪ್ರಮುಖವಾದ ಅಂಶವನ್ನು ತಿದ್ದುಪಡಿಯಲ್ಲಿ ಕೈಬಿಡಲಾಗಿದೆ. ಕರ್ನಾಟಕ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಇತರ ಸಂಘಟನೆಗಳು 15 ವರ್ಷಗಳಿಂದ ಹೋರಾಟ ಮಾಡಿದಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ಇದರಿಂದ ಸುಮಾರು 25 ಸಾವಿರ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಪದಾಧಿಕಾರಿ ಶ್ರೀಕಂಠೇ ಗೌಡ, ಎಂ.ಪಿ. ಕರಬಸಪ್ಪ, ತಿಮ್ಮಯ್ಯ ಪುರ್ಲೆ, ಡಿ.ಸಿ. ಗೋಪಿನಾಥ ಮುಂತಾದವರು ಸ್ವಾಗತಿಸಿದ್ದಾರೆ.
ಇಂದು ಟಗರಿನ ಕಾಳಗ
ಗದಗ: ಬೆಟಗೇರಿ ಗೆಳೆಯರ ಬಳಗದ ವತಿಯಿಂದ ಶ್ರೀರಂಗಪ್ಪಜ್ಜನ ಮಠದ 85ನೇ ಜಾತ್ರಾ ಮಹೋತ್ಸವದ ನಿಮಿತ್ತ ಫೆ. 3ರಂದು ಬೆಳಗ್ಗೆ 10ಕ್ಕೆ ಶ್ರೀಮಠದ ಅವರಣದಲ್ಲಿ ರಾಜ್ಯ ಮಟ್ಟದ ಟಗರಿನ ಕಾಳಗ ನಡೆಯಲಿದೆ. ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸುವರು. ಬೂದಪ್ಪ ಮಜ್ಜಗಿ ಅಧ್ಯಕ್ಷತೆ ವಹಿಸುವರು. ನಗರಸಭೆ ಸದಸ್ಯ ಶ್ರೀನಿವಾಸ ಕರಿ, ರಾಘವೇಂದ್ರ ಯಳವತ್ತಿ, ಮಂಜುನಾಥ ಮುಳಗುಂದ, ನಾಗಲಿಂಗ ಐಲಿ ಸೇರಿದಂತೆ ಮುಂತಾದವರು ಅತಿಥಿಗಳಾಗಿ ಆಗಮಿಸುವರು ಎಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಮುಳಗುಂದ ರೋಡ, ಪುರದ ಲೈನ್, ಗಡ್ಡಿಯವರ ಲೈನ್, ಸೋನಾಬಾಯಿ ಲೈನ್, ಜಯಶ್ರೀ ಪವಾರ ಲೈನ್, ಡಾ. ಬಸಯ್ಯ ಲೈನ್, ಹುಡ್ಕೋ 2ನೇ ಕ್ರಾಸ್, ತಿಪ್ಪಾಪುರ ಲೈನ್, ಡಾ. ಬೂದಿಹಾಳ ಅವರ ಲೈನ್, ಬೆಲ್ಲದ ಬಾಕಳೆ ಲೈನ್, ಕೇಶವ ನಗರದ 1 ಮತ್ತು 2ನೇ ಭಾಗ, ತಾಜ್ ನಗರ, ಹುಬ್ಬಳ್ಳಿ ರೋಡ, ಮೂರಶಿಳ್ಳೀನ ಚಾಳ, ಕೊರವರ ಓಣಿ, ದಾಸರ ಗಲ್ಲಿಯ 1 ಮತ್ತು 2ನೇ ಭಾಗ, ನರಗುಂದಕರ ಲೈನ್, ಸಂಭಾಜಿ ಲೈನ್, ಹಳೇಕಚೇರಿ, ತ್ರಿಕೂಟೇಶ್ವರ ದೇವಸ್ಥಾನದ ರಸ್ತೆ, ಚಂದ್ರಶಾಲಿ ಬಿಲ್ಲಾ, ನರೇಗಡಿ ಲೈನ್, ಕುದರಿಯವರ ಲೈನ್, ಡಂಬಳವರ ಲೈನ್, ಹಸಿರುಕೆರೆ, ವಿಠ್ಠೊಬಾ ದೇವರ ಗುಡಿ ಲೈನ್, ರಂಗನವಾಡಿ, ಉಡಚಮ್ಮನ ಗುಡಿ, ಮಕಾನ್ ಗಲ್ಲಿ, ಜಮಾದಾರ ಲೈನ್, ಕುಶಿ ಲೈನ್, ಮಚಂಟ್ಸ್ ಬ್ಯಾಂಕ್ ದರ್ಗಾ ಲೈನ್, 1ನೇ ನಂ. ಶಾಲೆಯ ಹಿಂಭಾಗದಲ್ಲಿ ಸೋಮವಾರ ತುಂಗಭದ್ರಾ ನದಿನೀರು ಪೂರೈಸಲಾಗುವುದು ಎಂದು ನಗರಸಭೆ ತಿಳಿಸಿದೆ.
ಆದರ್ಶ ಶಿಕ್ಷಕ ಪುರಸ್ಕಾರ
ಲಕ್ಷ್ಮೇಶ್ವರ: ಪಟ್ಟಣದ ಡಾ. ಚಂದ್ರಕಾಂತ ಸೀಮಿಕೇರಿಯವರಿಗೆ ಮಹಾರಾಷ್ಟ್ರ ಸರ್ಕಾರ ನಾಗಪುರದಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಆದರ್ಶ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಿದೆ. ಮಹಾರಾಷ್ಟ್ರ ರಾಜ್ಯಪಾಲ ಕೆ.ಶಂಕರನಾರಾಯಣ ಹಾಗೂ ಮುಖ್ಯಮಂತ್ರಿ ಪೃಥ್ವಿರಾಜ ಚವ್ಹಾಣ ಅವರು ಆದರ್ಶ ಶಿಕ್ಷಕ ಪುರಸ್ಕಾರವನ್ನು ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ. ಡಾ ಚಂದ್ರಕಾಂತ ಸೀಮಿಕೇರಿ ಅವರು ಪ್ರಸ್ತುತ ಮಹಾರಾಷ್ಟ್ರದ ಕರಾಡ್ ಸರ್ಕಾರಿ ತಾಂತ್ರಿಕ ನಿಕೇತನದಲ್ಲಿ ಯಂತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ ಕುಲಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಶ್ರೀನಿವಾಸ ಉಡುಪಿ, ರಮೇಶ ಶೆಟ್ಟಿ, ರಾಜಣ್ಣ ಮಿಣಜಗಿ, ಬಸವರಾಜ ಬಾಳೇಶ್ವರಮಠ ಮೊದಲಾದವರು ಹಾರೈಸಿದ್ದಾರೆ. ಕನ್ನಡನಾಡಿ, ಗದಗ ಜಿಲ್ಲೆಯ ಹಾಗೂ ಲಕ್ಷ್ಮೇಶ್ವರದ ಕೀರ್ತಿಯನ್ನು ಮಹಾರಾಷ್ಟ್ರದಲ್ಲಿ ಎತ್ತಿ ಹಿಡಿದದ್ದು ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ಇಂದು ವಾರ್ಷಿಕೋತ್ಸವ
ಲಕ್ಷ್ಮೇಶ್ವರ: ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಆಂಗ್ಲ ಮಾಧ್ಯಮ ಶಾಲೆಯ ನವಮಿ 9ನೇ ವಾರ್ಷಿಕೋತ್ಸವ ಸಮಾರಂಭ ಫೆ. 3ರಂದು ಬೆಳಗ್ಗೆ 10.30ಕ್ಕೆ ಬಳಗದ ತೋಟದ್ದೇವರ ಮಠದ ಆವರಣದಲ್ಲಿ ನಡೆಯಲಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸುವರು. ಗಂಗಮ್ಮ ಮಹಾಂತಶೆಟ್ಟರ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಜಿ.ಎಂ. ಮಾಹಾಂತಶೆಟ್ಟರ್, ಜಿ.ಎಸ್. ಗಡ್ಡದೇವರಮಠ, ಬಿಇಒ ಆರ್.ಎಸ್. ಬುರಡಿ, ಅಕ್ಷರದಾಸೋಹ ಅಧಿಕಾರಿ ಪಿ.ಎಂ. ಚವ್ಹಾಣ, ಪುರಸಭೆ ಸದಸ್ಯ ರಾಜೀವ ಕುಂಬಿ ಭಾಗವಹಿಸವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

