ಹೊಸ ಮಾರ್ಗ ರಚನೆ, ಗದಗ ರೇಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿ
ಗದಗ: ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಗದಗ ರೇಲ್ವೆ ನಿಲ್ದಾಣ ಮೇಲ್ದರ್ಜೆಗೆ ಹಾಗೂ ಹೊಸ ರೈಲು ಮಾರ್ಗದ ರಚನೆ ಕುರಿತು ಈಚೆಗೆ ಗದಗ ನಗರದ ರೇಲ್ವೆ ನಿಲ್ದಾಣದ ಪರಿವೀಕ್ಷಣೆಗೆ ಆಗಮಿಸಿದ ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಪಿ.ಕೆ. ಸಕ್ಸೆನಾ ಅವರಿಗೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲು ಯೋಜನೆಗಳ ರಚನೆ ಹಾಗೂ ಇರುವ ಅಡತಡೆಗಳನ್ನು ನಿವಾರಿಸಿ ಬರುವ ದಿನಗಳಲ್ಲಿ ನಮ್ಮ ಸರ್ಕಾರಿ ಪಾಲಿನ ಹಣ ಹಾಗೂ ಕೇಂದ್ರ ಸರ್ಕಾರದ ಹಣ ಪಡೆದು ಬಾಕಿ ಇರುವ ಜೋಡಿ ಮಾರ್ಗಗಳಾದ ತುಮಕೂರು-ಅರಸಿಕೇರಿ ಹಾಗೂ ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ ಮಾರ್ಗ ರಚನೆ ಗದಗ ಸೊಲ್ಲಾಪುರ ಜೋಡಿ ಮಾರ್ಗ 330 ಕಿಮೀ ಈ ಜೋಡಿ ಮಾರ್ಗ ರಚನೆ ಪ್ರಾರಂಭಿಸುವುದು, ರೈಲು ಮಾರ್ಗಗಳ ವಿದ್ಯುತ್ತೀಕರಣಗೊಳಿಸುವುದು, ಬಳ್ಳಾರಿ-ವಾಸ್ಕೋ, ಗದಗ-ಸೋಲ್ಲಾಪುರ, ಹುಬ್ಬಳ್ಳಿ-ಬೆಂಗಳೂರು, ಬಳ್ಳಾರಿ-ಹೊಸಪೇಟೆ ನಡುವಿನ ಮಾರ್ಗದ ವಿದ್ಯುತ್ತೀಕರಣ ಮಾಡಲು ಕ್ರಮ ಕೈಗೊಳ್ಳುವುದು. ಗದಗ-ಸೊಲ್ಲಾಪುರ ಜೋಡಿ ಮಾರ್ಗ ಪ್ರಸ್ತಾವನೆ ಚಾಲನೆಯಲ್ಲಿ ಇರುವುದೆಂದು ಇಲಾಖೆಯಿಂದ ತಿಳಿದು ಬಂದಿದ್ದು ಬೇಗನೆ ಮಂಜೂರು ಮಾಡುವುದು, ಹೊಸ ವಿಭಾಗಗಳನ್ನು ರಚಿಸುವುದು, ಉ.ಕ. ಮುಖ್ಯ ರೇಲ್ವೆ ನಿಲ್ದಾಣಗಳ ಮೂಲ ಸೌಕರ್ಯ ಹೆಚ್ಚಿಸುವುದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ರಚನೆ, ಕೊಪ್ಪಳ-ಆಲಮಟ್ಟಿ ಸರ್ವೇ ಕಾರ್ಯದ ವರದಿಯನ್ನು ರೇಲ್ವೆ ಬೋರ್ಡಿಗೆ ಮಂಜೂರಾತಿಗಾಗಿ ಇಲಾಖೆಯವರು ತಿಳಿಸಿರುವ ಬಗ್ಗೆ ತಿಳಿದು ಬಂದಿದ್ದು ಬೇಗನೆ ಮಂಜೂರಾತಿ ದೊರಕಿಸುವುದು, ಗದಗ-ಯಲವಗಿ, ರೇಲ್ವೆ ಮಾರ್ಗದ ರಚನೆ ಕೈಕೊಳ್ಳಬೇಕಾಗುವುದು, ಗದಗ-ವಾಡಿ ಲೈನ್ ನಿರ್ಮಾಣ ಪ್ರಾರಂಭಿಸುವುದು, ಹೊಸದಾಗಿ ಮೈಸೂರು-ವಾರಣಾಸಿ ಈ ರೈಲನ್ನು ಹೊಸದಾಗಿ ಬೆಂಗಳೂರು-ಹುಬ್ಬಳ್ಳಿ-ಗದಗ-ಸೋಲ್ಲಾಪುರ-ಇಟಾರಸಿ ಮೂಲಕ ರೈಲನ್ನು ಪ್ರಾರಂಭಿಸುವುದು.
ಹುಬ್ಬಳ್ಳಿ-ಹೈದರಾಬಾದ್ ಹೊಸ ರೈಲನ್ನು ಗದಗ-ಸೊಲ್ಲಾಪುರ-ಗುಲಬುರ್ಗಾ ಮೂಲಕ ಪ್ರಾರಂಭಿಸುವುದು. ಹುಬ್ಬಳ್ಳಿ-ಮುಂಬೈ ನಡುವೆ ಹೊಸ ರೈಲನ್ನು ಗದಗ-ಸೊಲ್ಲಾಪುರ ಮೂಲಕ ಪ್ರಾರಂಭಿಸುವುದು. ಹುಬ್ಬಳ್ಳಿಯಿಂದ ಚೆನ್ನೈ-ವಾಯಾ ಗದಗ-ಗುಂತಕಲ್ ರೇಣಿಗುಂಟ ಮೂಲಕ ಹೊಸ ರೈಲನ್ನು ಪ್ರಾರಂಭಿಸುವುದು, ಗದಗ-ಕೊಟ್ಟೂರು ಹೊಸ ರೈಲು ಮಾರ್ಗವನ್ನು ಗದಗ, ಮುಂಡರಗಿ, ಹಡಗಲಿ, ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ತಲುಪಿಸುವಂತೆ ಹಾಗೂ ಗದಗ ರೇಲ್ವೆ ನಿಲ್ದಾಣವನ್ನು ಎ ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವುದರ ಜತೆಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಮನವಿಯ ಮೂಲಕ ಒತ್ತಾಯಿಸಲಾಯಿತು. ಜನರಲ್ ಮ್ಯಾನೇಜರ ಪಿ.ಕೆ. ಸಕ್ಸೆನಾ ಮನವಿಗೆ ಸ್ಪಂದಿಸಿ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಗದಗ ರೇಲ್ವೆ ನಿಲ್ದಾಣದ ಸ್ಥಳೀಯ ರೇಲ್ವೆ ಸಲಹಾ ಸಮಿತಿ ಸದಸ್ಯ ವೀರಣ್ಣ ಬೇವಿನಮರದ, ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್ಮನ್ ಹಾಗೂ ಜಡ್.ಆರ್.ಯು.ಸಿ.ಸಿ ಸದಸ್ಯ ಜಿ.ಕೆ. ಆದಪ್ಪಗೌಡ್ರ, ಉಪಾಧ್ಯಕ್ಷ ತೋಂಟೇಶ ಕುರಡಗಿ, ಪ್ರೇಮನಾಥ ಬಣ್ಣದ, ರಾಜಶೇಖರ ಶಿರೂರ, ಸಂಗಮೇಶ ದುಂದೂರ, ಆರ್.ಬಿ. ದಾನಪ್ಪಗೌಡ್ರ, ಬಾಬಣ್ಣ ಶಾಬಾದಿಮಠ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

