ಅಟೋ ಚಾಲಕರ, ಮಾಲೀಕರ ಸಂಘದಿಂದ ಜನಪರ ಕಾರ್ಯ: ಎಚ್ಕೆ
ಗದಗ: ನಗರದ ಜೈ ಭೀಮ ಅಟೋ ಚಾಲಕರ ಮತ್ತು ಮಾಲೀಕರ ಸಂಘವು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತ ಅತ್ಯುತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಜೈ ಭೀಮ ಅಟೋ ಚಾಲಕರ ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಈಚೆಗೆ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜೈ ಭೀಮ ಅಟೋ ಚಾಲಕರ ಮತ್ತು ಮಾಲೀಕರ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಹೆಮ್ಮೆ ತರುವ ವಿಷಯವಾಗಿದೆ. ಈ ಸಂಘದ ಕಾರ್ಯವು ಬೇರೆ ಸಂಘಗಳಿಗೆ ಮಾದರಿಯಾಗಿದೆ. ಅಟೋ ಚಾಲಕರಿಗೆ ಹಾಗೂ ಮಾಲೀಕರಿಗೆ ನಗರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ವಸತಿಗಳನ್ನು ನೀಡಲು ಕ್ರಮ ಜರುಗಿಸಲಾಗಿದೆ ಎಂದರು. ಸ್ವಾತಂತ್ರ್ಯ ಯೋಧರಾಗಿದ್ದ ದಿ. ಕೊಟ್ರಯ್ಯ ಉಳವಿಮಠ ಅವರ ಪತ್ನಿ ಚನ್ನಬಸಮ್ಮ ಉಳವಿಮಠ, ದಿ. ಷಣ್ಣುಖಪ್ಪ ಮ್ಯಾಗೇರಿ ಅವರ ಪತ್ನಿ ಬಸವಣ್ಣೆವ್ವ ಮ್ಯಾಗೇರಿ ಮತ್ತು ದಿ. ವೀರಭದ್ರಪ್ಪ ಜಮಲಿಂಗಪ್ಪನವರ ಅವರ ಪತ್ನಿ ಬಸಮ್ಮ ಜಮಲಿಂಗಪ್ಪನವರ ಅವರನ್ನು ಸಚಿವ ಎಚ್.ಕೆ. ಪಾಟೀಲ ಸನ್ಮಾನಿಸಿದರು. ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿದರು. ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ, ವಿ.ಬಿ. ಹುಬ್ಬಳ್ಳಿ, ಬಿ.ಎಫ್. ಪೂಜಾರ, ಆರ್.ಎಸ್. ಗುಜ್ಜಲ್, ಡಿ.ಎಸ್. ತಳವಾರ, ಅಕ್ಬರಸಾಬ್ ಬಬರ್ಚಿ, ಬಸವರಾಜ ಕಡೇಮನಿ, ಯುವರಾಜ ಬಳ್ಳಾರಿ, ಲಕ್ಷ್ಮಣ ಕಟ್ಟಿಮನಿ, ಹನುಮಂತಪ್ಪ ಕೊಡಗಾನೂರ, ಧರ್ಮಣ್ಣ ಹೊಸಮನಿ ಇದ್ದರು. ಸತೀಶ ಹೂಲಿ ನಿರೂಪಿಸಿ, ವಿನಾಯಕ ಬಳ್ಳಾರಿ ವಂದಿಸಿದರು.
ಗಾಂಧಿ ಪುಣ್ಯತಿಥಿ ಆಚರಣೆ
ಮುಂಡರಗಿ: ಸ್ಥಳೀಯ ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆಯಿಂದ ವೇದಿಕೆಯ ಕಾರ್ಯಾಲಯದಲ್ಲಿ ಈಚೆಗೆ ಗಾಂಧೀಜಿಯ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು. ಪವನ್ ಚೋಪ್ರಾ, ಮಂಜುನಾಥ ಇಟಗಿ, ಸಂತೋಷಕುಮಾರ ಮುರಡಿ, ಶರಣು ಸೊಲಗಿ, ಶಿವು ಹೊಂಬಳಗಟ್ಟಿ, ದೇವಪ್ಪ ಇಟಗಿ, ಮೋಹನ ದೇಸಾಯಿ, ಪರಶುರಾಮ ಹಟ್ಟಿ ಮಾತನಾಡಿದರು. ಮಂಜುನಾಥ ಕಟ್ಟಿಮನಿ, ನಾಗರಾಜ ಮುರಡಿ, ಹನುಮಂತ ಹದಗಾರ, ಹನುಮಂತ ಅಣ್ಣಿಗೇರಿ, ಕಮಲೇಶ ಜೈನ್, ವೀರಯ್ಯ ಗುಜಮಾಗಡಿ, ವೀರೇಶ ಚಳ್ಳಮರದ, ಮಲ್ಲನಗೌಡ ಪಾಟೀಲ, ಮಜುರೇಶ ಪೂಜಾರ, ಸಂತೋಷ ಹಿರೇಮನಿ, ಮಂಜು ಡೊಣ್ಣಿ, ಪ್ರವೀಣ ವಡ್ಡಟ್ಟಿ, ಮಲ್ಲು ಬಂಡಿವಡ್ಡರ, ಮಾರುತಿ ದೊಡ್ಡಮನಿ, ಶೇಖರ ಹ್ಯಾಡ್ಲಮಠ, ಮಲ್ಲಪ್ಪ ಪೂಜಾರ, ಪಾಂಡು ಎಂ. ಮುಂತಾದವರು ಉಪಸ್ಥಿತರಿದ್ದರು.
ಕಟುಕರಿಗೆ ಗೋವು ಕೊಡದೆ ಗೋಶಾಲೆಗೆ ನೀಡಿ: ಶಿವಕುಮಾರ ಶ್ರೀ
ಮುಂಡರಗಿ: ಕಪ್ಪತ್ತಗುಡ್ಡದ ನಂದಿವೇರಿ ಮಠದಲ್ಲಿ ಶತಮಾನಗಳಿಂದ ಗೋವುಗಳ ಸೇವೆ ಮಾಡಲಾಗುತ್ತಿದೆ. ಗೋವುಗಳ ಸೇವೆಯು ವ್ಯಕ್ತಿಗಳನ್ನು ಪುನೀತರಾಗುವಂತೆ ಮಾಡುತ್ತದೆ. ರೈತರು ತಮ್ಮ ಅನುಪಯುಕ್ತವಾದ ಗೋವುಗಳನ್ನು ಹಾಗೂ ದನಗಳನ್ನು ಮಾರದೆ ನಮ್ಮ ಮಠದ ಗೋಶಾಲೆಗೆ ದಾನವಾಗಿ ನೀಡಬೇಕು ಎಂದು ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಕಪ್ಪತ್ತಗುಡ್ಡದ ನಂದಿವೇರಿ ಮಠದಲ್ಲಿ ಈಚೆಗೆ ಏರ್ಪಡಿಸಿದ್ದ ಪರಿಸರ ಶಿವಾನುಭವ ಮತ್ತು ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸರ್ಕಾರ ರೈತರ ಪರವಾಗಿರುವಂತಹ ಯೋಜನೆಗಳನ್ನು ನೀಡಬೇಕು. ಅಂದಾಗ ದೇಶ ಅಭಿವೃದ್ಧಿಯತ್ತ ಸಾಗಲು ಅನುಕೂಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ರೈತರು ಕೃಷಿಯಿಂದ ದೂರ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಗಳು ಕೃಷಿಗೆ ಮಾರಕವಾಗಿವೆ. ಕೃತಕವಾಗಿ ಉತ್ಪಾದಿಸುವ ಹಾಲು ಮತ್ತು ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ. ವಿಷಯುಕ್ತವಾದ ಆಹಾರವನ್ನು ಸೇವಿಸಬಾರದು. ಅಂತಹ ಆಹಾರದ ಸೇವನೆಯಿಂದಾಗಿ ಇಂದು ಅನೇಕ ದೊಡ್ಡ ದೊಡ್ಡ ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಕಾಣಬಹುದಾಗಿದೆ. ಆದ್ದರಿಂದ ರೈತರು ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸದೆ ಮನೆಗಳಲ್ಲಿ, ಹೊಲಗಳಲ್ಲಿ ದನಗಳನ್ನು ಕಟ್ಟಿ ಅದರಿಂದ ಬರುವ ಸಗಣೆಯಿಂದ ತಯಾರಿಸುವ ಸಾವಯವ ಗೊಬ್ಬರ ಬಳಸಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಹಮ್ಮಿಗಿ ಕ್ಷೇತ್ರದ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೊಗುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಕಪ್ಪತ್ತಗುಡ್ಡದಲ್ಲಿರುವ ನೂರಾರು ಔಷಧೀಯ ಸಸ್ಯಗಳನ್ನು ರಕ್ಷಣೆ ಮಾಡಬೇಕಾಗಿದೆ. ತಮ್ಮ ಜಿಪಂ ಅನುದಾನದಲ್ಲಿ ನಂದಿವೇರಿಮಠದ ಕುಡಿಯುವ ನೀರಿನ ಯೋಜನೆಗಾಗಿ ರು. 2 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಹೇಶ್ಚಂದ್ರ ಕಬಾಡರು ನಂದಿವೇರಿಮಠದ ಗೋಶಾಲೆಗೆ ಗೋವುಗಳನ್ನು ದಾನವಾಗಿ ನೀಡಿದರು. ಮೋಹನ್ ಮಾಳಶೆಟ್ಟರ್, ಮಹೇಶ ಕೋಟಿ ಮಾತನಾಡಿದರು. ಸಂತೋಷ ಕಬಾಡರ, ಎಚ್.ಸಿ. ನೀಲಪ್ಪಗೌಡರ ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೃತ್ಯುಂಜಯ ಕೆಂಭಾವಿಮಠ ಸ್ವಾಗತಿಸಿ, ನಿರೂಪಿಸಿದರು. ಮುತ್ತಪ್ಪ ಕಿಲಾರಿ ವಂದಿಸಿದರು.
ಜೋಡು ಕಳಸದ ಮೆರವಣಿಗೆ
ಗದಗ: ಬೆಟಗೇರಿಯ ರಂಗಾವಧೂತರ ಜೋಡು ಕಳಸದ ರಥೋತ್ಸವ ಫೆ. 9ರಂದು ನೆರವೇರಲಿದ್ದು, ಅದರ ಅಂಗವಾಗಿ ಈಚೆಗೆ ಜೋಡು ಕಳಸದ ಮೆರವಣಿಗೆಯು ನಗರದ ನಂದಿವೇರಿಮಠದಿಂದ ಪ್ರಾರಂಭಗೊಂಡು ಟೆಲಿಫೋನ ಎಕ್ಸೆಂಜ್, ಬಸವೇಶ್ವರ ವೃತ್ತ, ನಾಮಜೋಶಿ ರೋಡ್, ಸ್ಟೇಶನ ರಸ್ತೆ, ಪಿ.ಬಿ. ರಸ್ತೆ, ನರಸಾಪುರ ಮೂಲಕರಂಗಾವಧೂತರ ಮಠ ತಲುಪಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

