ದುರ್ನಡತೆಯ ವಿರುದ್ಧ ಧ್ವನಿ ಎತ್ತಬೇಕು: ವಿಜಯಾನಂದ ಶ್ರೀ
ನರಗುಂದ: ಸಮಾಜದಲ್ಲಿ ಇಂದು ಕಂಡು ಬರುತ್ತಿರುವ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ದೇಶದಲ್ಲಿರುವ ದುರ್ಜನರ ದುರ್ನಡತೆಯೇ ಕಾರಣ ಸಜ್ಜನರು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಶ್ರೀಗಳು ಹೇಳಿದರು.
ಪಟ್ಟಣದ ಬಾಬಾಸಾಹೇಬ ಕಲಾಭವನದಲ್ಲಿ ಈಚೆಗೆ ಪ್ರೋಜಕ್ಟ್ ವಿವೇಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಇಂದು ಕಂಡುಬರುತ್ತಿರುವ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ದೇಶದಲ್ಲಿರುವ ದುರ್ಜನರ ದುರ್ನಡತೆ. ನಮ್ಮ ದೇಶದಲ್ಲಿ ಸಜ್ಜನರೆಲ್ಲರೂ ಸುಮ್ಮನೆ ಕುಳಿತಿರುವುದು ದುರ್ಜನರ ದುರ್ನಡತೆಯ ವಿರುದ್ಧ ಧ್ವನಿ ಎತ್ತದಿರುವುದೇ ಮೂಲ ಕಾರಣ. ಈ ನಿಟ್ಟಿನಲ್ಲಿ ನಾವೆಲ್ಲರೂ ಪಾವಿತ್ರತೆ, ನಿರ್ಭಯತೆ, ನಿಸ್ವಾರ್ಥತೆ ಎಂಬ ಮೂರು ಸದ್ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾದದು ಅವಶ್ಯಕ ಎಂದರು. ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಮೈಗೂರ ಮಾತನಾಡಿದರು. ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸುರೇಶ ವಡವಟ್ಟಿ, ಎಫ್.ಎಲ್. ಜಾಧವ, ದೇವರಾಜ ಚಳ್ಳಕನವರ, ವೆಂಕಟೇಶ ಸಾಬಳೆ, ಗುರುನಾಥ ಕೆಂಗಾರಕರ ಮುಂತಾದವರು ಉಪಸ್ಥಿತರಿದ್ದರು. ಅಜಯ ಮೋರೆ ಸ್ವಾಗತಿಸಿದರು. ಮೇಘಾ ಚಿಕ್ಕರಡ್ಡಿ ನಿರೂಪಿಸಿದರು. ದೇವರಾಜ ಚಳ್ಳಕನವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

