ಇಂದಿನಿಂದ ಹಜರತ್ ಖಾದ್ರಿ ಉರೂಸ್
ಮುಂಡರಗಿ: ಗುರುವರ್ಯ ಹಜರತ್ ಜಲಾಲುದ್ದೀನ್ಶಾ ಖಾದ್ರಿ ಅವರ 405ನೇ ಗಂಧ ಮತ್ತು ಉರೂಸ್ ಕಾರ್ಯಕ್ರಮ ಫೆ. 26ರಿಂದ 28ರ ವರೆಗೆ ಮುಂಡರಗಿ ಜಲಾಲುದ್ದೀನ್ಶಾ ಖಾದ್ರಿ ದರ್ಗಾದ ಆವರಣದಲ್ಲಿ ಜರುಗಲಿದೆ.
ಫೆ. 26ರಂದು ಸಂಜೆ 6ಕ್ಕೆ ಗಂಧದ ಕಾರ್ಯಕ್ರಮ ಜರುಗಲಿದ್ದು, ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಟ್ಟಿ ದರ್ಗಾದ ಗುರುಗಳಾದ ಹಜರತ್ ಮೆಹಬೂಬ ಖಾದ್ರಿ ನೇತೃತ್ವ ವಹಿಸುವರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸುವರು. ಅಂಜುಮನ್ ಉರ್ದು ಪ್ರೌಢ ಶಾಲೆಯ ಅಧ್ಯಕ್ಷ ಆರ್.ಎಂ. ತಪ್ಪಡಿ ಅಧ್ಯಕ್ಷತೆ ವಹಿಸುವರು. ಅತಿಥಿ ಉಪನ್ಯಾಸಕರಾಗಿ ವೈ.ಎನ್. ಗೌಡರ ಮಾತನಾಡುವರು. ಕರಬಸಪ್ಪ ಹಂಚಿನಾಳ, ಎ.ಕೆ. ಬೆಲ್ಲದ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ವಿ.ಟಿ. ಮೇಟಿ, ಡಿ.ಡಿ. ಮೋರನಾಳ, ಆನಂದಗೌಡ ಪಾಟೀಲ, ಎಸ್.ಡಿ. ಮಕಾಂದಾರ ಆಗಮಿಸಲಿದ್ದಾರೆ.
ಹೇಮಂತಗೌಡ ಪಾಟೀಲ, ಹೇಮಗಿರೀಶ ಹಾವಿನಾಳ, ಅಮೀನಸಾಬ್ ಬಿಸನಳ್ಳಿ, ಬಾಬಣ್ಣ ಜೈನರ್, ಎಂ.ಎಚ್. ಬೆಟಗೇರಿ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8ಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸತಾರ ಸಂಗಡಿಗರಿಂದ ಭಾವೈಕ್ಯ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಫೆ. 27ರಂದು ಉರೂಸಿನ ಕಾರ್ಯಕ್ರಮ ಜರುಗಲಿದ್ದು, ಹಜರತ್ ಮೆಹಬೂಬ ಖಾದ್ರಿ ನೇತೃತ್ವ ವಹಿಸಲಿದ್ದು, ಆರ್.ಎಂ. ತಪ್ಪಡಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಬಾಷುಸಾಬ್ ಕೊಪ್ಪಳ, ಮಾಬೂಸಾಬ್ ಯಲಿಗಾರ, ಚಾಂದಸಾಬ್ ಬಾಗವಾನ, ಮೋದಿನಸಾಬ್ ಡಂಬಳ, ಡಿ.ಎಂ. ಕಾತರಕಿ, ಪುರಸಭೆ ಸದಸ್ಯ ಚಂದ್ರಶೇಖರ ಬಡಿಗೇರ, ರಾಮಣ್ಣ ಕರುಮುಡಿ, ಶಿವಾನಂದ ಬಾರಕೇರ, ಮಂಜುವಾಥ ಇಟಗಿ, ಸಿವಣ್ಣ ಸುಣಗಾರ, ಶರಣಪ್ಪ ಡಂಬಳ, ದುರಗಪ್ಪ ನರೇಗಲ್, ಶಂಶುದ್ದೀನ ಹಾರೋಗೇರಿ, ಎಂ.ಎಚ್. ವಡ್ನಾಳ, ಮುದಿಯಪ್ಪ ಕುಂಬಾರ ಆಗಮಿಸಲಿದ್ದಾರೆ. ರಾತ್ರಿ 10ಕ್ಕೆ ಡೋಣಿಯ ನಿಂಗಪ್ಪ ಗುಡ್ಡದ ಅವರಿಂದ ಡೊಳ್ಳಿನ ಪದಗಳು, ಪ್ರಸಿದ್ಧ ಕವಿಗಳಿಂದ ರಿವಾಯತ್ ಪದಗಳ ಜರುಗಲಿವೆ. ಫೆ. 28ರ ರಾತ್ರಿ 7ಕ್ಕೆ ಉರೂಸಿನ ಜಿಯಾರತ್, ದಾಸೋಹ ಜರುಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

