ಇಂದು ಧರ್ಮ ಜಾಗೃತಿ ಸಭೆ
ನರಗುಂದ: ತಾಲೂಕಿನ ಸಂಕದಾಳ ಗ್ರಾಮದ ವೀರಭದ್ರೇಶ್ವರ ದೇವಸ್ಧಾನದ ಜೀರ್ಣೊದ್ಧಾರ ಸಮಿತಿಯ ಆಶ್ರಯದಲ್ಲಿ ಶ್ರೀಮಾತಾ ಭದ್ರಕಾಳಿ, ವೀರಭದ್ರಸ್ವಾಮಿಯ ಬ್ರಹ್ಮೋತ್ಸವ, 25 ಜೋಡಿ ಸಾಮೂಹಿಕ ವಿವಾಹಗಳು ಹಾಗೂ ಧರ್ಮ ಜಾಗೃತಿ ಸಭೆ ಫೆ. 26ರಂದು ಬೆಳಗ್ಗೆ 11ಕ್ಕೆ ಜರಗಲಿದೆ. ಮುಳ್ಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ಹೂಲಿ ಸಾಂಭಯ್ಯನವರ ಮಠದ ಉಮೇಶ್ವರ ಶಿವಾಚಾರ್ಯ ಶ್ರೀಗಳು, ನಾಗನೂರ, ಗದಗ, ಮನಿಹಾಳ ಗುರುದೇವಿ ಆತ್ಮಾನಂದ ಪುಣ್ಯಾಶ್ರಮದ ಗುರುದೇವಿ ಸಮರ್ಥ ಶಿವಾನಂದ ಶ್ರೀಗಳು, ಮಮಟಗೇರಿ ರಾಮಾರೂಢ ಮಠದ ಆತ್ಮಾನಂದ ಶ್ರೀಗಳು, ಹನುಮಾರೂಢ ಮಠದ ಹರ್ಷಾರೂಢ ಶ್ರೀಗಳು, ಮೈಲಾರ ಅಜ್ಜನವರು, ಶಿವಪುತ್ರಯ್ಯ ಸುರೇಬಾನ, ಬಸವರಾಜ ಬೆಂಗೇರಿ ಪಾಲ್ಗೊಳ್ಳುವರು.
ಇಂದು ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಭೆ
ಗದಗ: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಭೆಯನ್ನು ನಗರದ ಗಾಂಧಿ ವೃತ್ತದ ಬಳಿಯ ಗೋಡಖಿಂಡಿ ಆಸ್ಪತ್ರೆ ಕಟ್ಟಡದಲ್ಲಿರುವ ಕುವೆಂಪು ದೂರಶಿಕ್ಷಣ ಕೇಂದ್ರದಲ್ಲಿ ಫೆ. 26ರಂದು ಮಧ್ಯಾಹ್ನ 3ಕ್ಕೆ ಕರೆಯಲಾಗಿದೆ. ಒಕ್ಕೂಟದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಒಕ್ಕೂಟದ ಕಾರ್ಯದರ್ಶಿ ಸತೀಶ ಸರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಇಂಟರ್ನ್ಯಾಶನಲ್ ಸ್ಮಾರ್ಟ್ ಕಿಡ್ಸ್ ಶಾಲೆ ವಾರ್ಷಿಕೋತ್ಸವ
ಗದಗ: ನಗರದ ಸ್ಮಾರ್ಟ್ ಎಜ್ಯುಕೇಶನ್ ಸೊಸೈಟಿಯ ಇಂಟರ್ನ್ಯಾಶನಲ್ ಸ್ಮಾರ್ಟ್ ಕಿಡ್ಸ್ (ಐಎಸ್ಕೆ) ಶಾಲೆಯ ಮೊದಲ ವಾರ್ಷಿಕ ಸ್ನೇಹ ಸಮ್ಮೇಳನ ಫೆ. 26ರಂದು ಸಂಜೆ 5ಕ್ಕೆ ನಗರದ ಆನಂದ ಆಶ್ರಮ ರಸ್ತೆಯ ಶಾಲಾ ಆವರಣದಲ್ಲಿ ಜರುಗಲಿದೆ. ಅತಿಥಿಗಳಾಗಿ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಹಾಗೂ ತಾಜ್ ಶಮೀರ್ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಚ್.ಬೇಲೂರ ಆಗಮಿಸುವರು. ಐ.ಎಸ್. ಕಂಪಗೌಡ್ರ ಅಧ್ಯಕ್ಷತೆ ವಹಿಸುವರು. ಮಕ್ಕಳಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

