ಪರಿಸರ ಸ್ನೇಹಿ ಶಾಲೆ, ಕಟ್ಟಡ ನಿರ್ಮಾಣ ಅಗತ್ಯ
ಗದಗ: ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದ್ದು ಪ್ರಾಥಮಿಕ ಹಂತವಾಗಿ ಪರಿಸರ ಸ್ನೇಹಿ ಶಾಲೆಗಳನ್ನು ಮತ್ತು ಕಟ್ಟಡಗಳನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಕಪೋತಗಿರಿಯ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅವರ ಕಾರ್ಯ ಅನುಕರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ನಗರದ ಕೆಎಲ್‌ಇಯ ಜೆ.ಟಿ. ಕಾಲೇಜಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗದಗ ಪ್ರಾದೇಶಿಕ ಕಚೇರಿ ಹಾಗೂ ಕೆಎಲ್‌ಇಯ ಜೆ.ಟಿ. ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಪರಿಸರ ಮಿತ್ರಶಾಲೆ 2013-14 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿಂದೆ ಕಟ್ಟಿದ ಕೆರೆ ಕಟ್ಟೆಗಳಿಂದು ಒತ್ತುವರಿ ಮಾಡಿ ಬಳಸಿಕೊಳ್ಳುತ್ತಿರುವುದರಿಂದಲೇ ನಾವಿಂದು ಬಹುತೇಕ ಕಡೆಗಳೆಲ್ಲೆಲ್ಲ ನೀರಿನ ತಾಪತ್ರಯ ಎದುರಿಸುತ್ತಿದ್ದೇವೆ. ಮಕ್ಕಳಿಗೆ ಸಮನಾಗಿಂದು ನಾವು ಪರಿಸರವನ್ನು ಆರೈಕೆ ಮಾಡಬೇಕಾದ ಅಗತ್ಯ ತೀವ್ರವಾಗಿದೆ. ಪರಿಸರ ಶುದ್ಧವಾಗಿದ್ದರೆ ನಮ್ಮ ಆರೋಗ್ಯ ಸರಿಯಾಗಿರುತ್ತದೆ. ಶುದ್ಧ ನೀರಿನ ಸಂಗ್ರಹಣೆ ಮತ್ತು ಬಳಕೆಯಿಂದ ಶೇ. 80ರಷ್ಟು ರೋಗಗಳನ್ನು ತಡೆಗಟ್ಟಬಹುದು ಎಂದರು. ಕಪೋತಗಿರಿಯ ನಂದಿವೇರಿಮಠದ ಶಿವಕುಮಾರ ಶ್ರೀಗಳು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಮನೆಗೊಂದು ಮರ ಬೆಳೆಸಬೇಕು. ಮಳೆ-ನೀರು ಸಂಗ್ರಹದ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದರು. ಜೆಟಿ ಕಾಲೇಜಿನ ಕಾರ್ಯನಿರ್ವಾಹಕ ಪ್ರಾಚಾರ್ಯ ಎಸ್.ಎಂ. ಬೆಂಗಳೂರ, ಜಿ.ಡಿ. ದಾಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ತಾಲೂಕಿನ ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2013-14ರ ಪರಿಸರ ಮಿತ್ರ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 10 ಶಾಲೆಗಳಿಗೆ ಹಸಿರು ಶಾಲೆಗಳು ಪ್ರಶಸ್ತಿ ಅಲ್ಲದೇ 10 ಶಾಲೆಗಳಿಗೆ ಕಿತ್ತಳೆ ಶಾಲೆಗಳು ಪ್ರಶಸ್ತಿ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಸಂಕನೂರ ಮಾತನಾಡಿದರು. ಶೋಭಾ ಗಜಕೋಶ ಸ್ವಾಗತಿಸಿದರು. ಮಂಜರಿ ಹೊಂಬಾಳಿ ಪ್ರಾರ್ಥಿಸಿದರು. ವಿ.ಎನ್. ಅಮಾತಿಗೌಡರ ನಿರೂಪಿಸಿದರು. ಎಸ್.ಜೆ. ಹಿರೇಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

