ಗದಗ: ಮಾರ್ಚ್ನಲ್ಲಿ ರಾಜ್ಯ ಮಟ್ಟದ ಅತಿಥಿ ಉಪನ್ಯಾಸಕರ ಸಮ್ಮೇಳನ
ಗದಗ: ಬರುವ ಮಾರ್ಚ್ ತಿಂಗಳ 2ನೇ ವಾರದಲ್ಲಿ ರಾಜ್ಯ ಮಟ್ಟದ ಅತಿಥಿ ಉಪನ್ಯಾಸಕರ ಸಮ್ಮೇಳನವನ್ನು ಗದಗದಲ್ಲಿ ನಡೆಸಲಾಗುವುದು ಎಂದು ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.
ಅವರು ಬುಧವಾರ ನಗರದ ಗೋಡಖಿಂಡಿ ಆಸ್ಪತ್ರೆ ಮೇಲ್ಭಾಗದಲ್ಲಿರುವ ಕುವೆಂಪು ದೂರಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರ್ಚ್ ತಿಂಗಳಲ್ಲಿ ನಗರದಲ್ಲಿ ರಾಜ್ಯ ಮಟ್ಟದ ಸಮ್ಮೇಳನವನ್ನು ಯಶಸ್ವಿಯಾಗಿ ಜರುಗಿಸಲು ಬೇಕಾದ ಸೂಕ್ತ ಸಿದ್ಧತೆ ಕುರಿತು ಚರ್ಚಿಸಲಾಯಿತು. ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆಯ ಅಧ್ಯಕ್ಷರ ಸಭೆಯನ್ನು ಮಾ. 1ರಂದು ಮಧ್ಯಾಹ್ನ 1ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಕಾರಣ ಮಾ. 1ರಂದು ಜಿಲ್ಲೆಯ ಎಲ್ಲ ಅತಿಥಿ ಉಪನ್ಯಾಸಕರು ಸಭೆಗೆ ಹಾಜರಾಗಿ ತಮ್ಮ ಮಾರ್ಗದರ್ಶನ ನೀಡಬೇಕು ಎಂದರು.
ಡಾ. ಬಿ.ಡಿ. ಗಟ್ಟೆಣ್ಣವರ, ಎಸ್.ಕೆ. ಆಲೂರ, ಎಸ್.ಎಸ್. ಹುಲ್ಲೂರ, ಭುವನೇಶ್ವರಿ ಯಡವಟ್ಟಿ, ನೂರಜಾನ ಕದಾಂಪುರ, ಸೋಮು ಲಮಾಣಿ, ಎಂ.ಐ. ಮಾಗಳದ, ಹರೀಶ ಓಲೇಕಾರ, ರಶ್ಮಿ ಹೂಗಾರ, ಪದ್ಮಾ ತಳಕಲ್, ಸಿ.ಬಿ. ಭಜಂತ್ರಿ, ಬಿ.ಪಿ. ನವಲೂರಕರ, ನಿಂಗಪ್ಪ ಒಣಕಣ್ಣವರ, ಐ.ಎಂ. ಅಣ್ಣಗೇರಿ, ಹೇಮಂತಕುಮಾರ, ಯೋಗೇಶ ಜಿ.ಕೆ ಹಾಗೂ ಅನೇಕ ಉಪನ್ಯಾಸಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

