ಗದಗ

ಮುಂಡರಗಿ ಕೋಮು ಸೌಹಾರ್ದತೆಗೆ ಹೆಸರುವಾಸಿ

Published On :

ಮುಂಡರಗಿ: ಶ್ರಾವಣ ಮಾಸ, ರಂಜಾನ್, ಸಂಕ್ರಾಂತಿ, ಈದ್‌ಮಿಲಾದ್ ಹಬ್ಬವೂ ಸೇರಿದಂತೆ ಎಲ್ಲ ಹಿಂದು-ಮುಸ್ಲಿಂ ಹಬ್ಬಗಳನ್ನು ಎಲ್ಲ ಜಾತಿಯವರು ಸೇರಿಕೊಂಡು ಆಚರಿಸುತ್ತಿರುವ ಮುಂಡರಗಿ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದು ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಅವರು ಗುರುವಾರ ಸ್ಥಳೀಯ ಹಜರತ್ ಜಲಾಲುದ್ದೀನ ಶಾ ಖಾದ್ರಿ ದರ್ಗಾದಲ್ಲಿ ಏರ್ಪಡಿಸಿದ್ದ ಉರೂಸ್ ಷರೀಫ್ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಾಲಘಟ್ಟದಲ್ಲಿ ಮನುಷ್ಯ ತನ್ನ ಹಿತಕ್ಕಾಗಿ ವಿವಿಧ ಧರ್ಮಗಳನ್ನು ರೂಪಿಸಿಕೊಂಡಿದ್ದು, ಎಲ್ಲ ಧರ್ಮಗಳ ಜೀವಧಾತು ಮೂಲದಲ್ಲಿ ಒಂದೇ ಆಗಿದೆ. ಸಂತರು, ಶರಣರು ಕಾಲಘಟ್ಟದಲ್ಲಿ ಬೋಧಿಸಿದ ಎಲ್ಲ ಧಾರ್ಮಿಕ ತತ್ವಾದರ್ಶಗಳು ಮಾನವನ ಉನ್ನತಿಯನ್ನೆ ಬಯಸುತ್ತವೆ ಎಂದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ ಮಾತನಾಡಿದರು. ಬೆಳಗಟ್ಟಿಯ ಹಜರತ್ ಮುಸ್ತಫಾ ಖಾದ್ರಿ ದರ್ಗಾದ ಹಜರತ್ ಮೆಬೂಬಸಾಬ್ ಖಾದ್ರಿ ಗುರುಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಶಾಸಕ ರಾಮಕೃಷ್ಣ ದೊಡ್ಡಮನಿ ಸಮಾರಂಭ ಉದ್ಘಾಟಿಸಿದರು. ಅಂಜುಮನ್ ಉರ್ದು ಪ್ರೌಢ ಶಾಲೆ ಅಧ್ಯಕ್ಷ ಎಂ.ಆರ್. ತಪ್ಪಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ಭಾವೈಕ್ಯದ ಪ್ರವಚನ ನಡೆಸಿಕೊಟ್ಟರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ಬಾಬುಲಾಲ ಜೈನ್, ವಿ.ಟಿ. ಮೇಟಿ, ರವೀಂದ್ರ ಉಪ್ಪಿನಬೆಟಗೇರಿ ಪಾಲ್ಗೊಂಡಿದ್ದರು. ಎ.ಪಿ. ದಂಡಿನ ಸ್ವಾಗತಿಸಿದರು. ಎ.ಕೆ. ಮುಲ್ಲಾನವರ ನಿರೂಪಿಸಿದರು. ಸುರೇಶ ಬಣಕಾರ ವಂದಿಸಿದರು.
--
ಕ್ರೀಡಾ ಅಭಿಯಾನಕ್ಕೆ ಚಾಲನೆ
ಗದಗ: ಭಾರತ ಸರ್ಕಾರ ದೇಶದ ಯುವ ಜನತೆ ತಮ್ಮ ಸಂಪೂರ್ಣ ಸಾಮರ್ಥ್ಯ ಸಾಧಿಸಲು ಮತ್ತು ಅವುಗಳ ಮೂಲಕ ಭಾರತವನ್ನು ದೇಶಗಳ ಸಮುದಾಯದಲ್ಲಿ ಅದರ ಸೂಕ್ತ ಸ್ಥಾನವನ್ನು ಪಡೆಯಲು ಸಕ್ರಿಯಗೊಳಿಸಲು ಯುವಕರನ್ನು ಸಬಲಗೊಳಿಸಲು ರಾಷ್ಟ್ರೀಯ ಯುವ ನೀತಿಗೆ ಚಾಲನೆ ನೀಡಿದೆ ಎಂದು ಇಲಾಖೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಇಲಾಖೆಯ ಅಧಿಕಾರಿಗಳು, ಇದಕ್ಕಾಗಿ 90 ಸಾವಿರ ಕೋಟಿಗೂ ಅಧಿಕ ಹಣವನ್ನು ಯುವಕರ ಬೆಳವಣಿಗೆಗಾಗಿ ಹೂಡಿಕೆ ಮಾಡುತ್ತದೆ. ಇದರಲ್ಲಿ ಶಿಕ್ಷಣ ಅಭಿವೃದ್ಧಿ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ಕ್ರೀಡಾ ಅಭಿವೃದ್ಧಿ ಸಮುದಾಯದ ಸೇವೆ ಪ್ರೋತ್ಸಾಹಿಸುವುದು, ಎಲ್ಲರಿಗೂ ಸಮಾನ ಅವಕಾಶವನ್ನು ನಿರ್ಮಿಸುವುದು ಮುಂತಾದ ಗುರಿ ಹೊಂದಲಾಗಿದೆ. ಇದರೊಂದಿಗೆ ರಾಜೀವ ಗಾಂದಿ ಕ್ರೀಡಾ ಅಭಿಯಾನಕ್ಕೆ ಕೂಡ ಚಾಲನೆ ನೀಡಿದೆ. ಯುವಜನರಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವುದು. ಕ್ರೀಡಾ ಸೌಲಭ್ಯಗಳಿಗೆ ಹೆಚ್ಚುವರಿ ಅವಕಾಶ ನೀಡುವುದು. ಕ್ರೀಡೆಯಲ್ಲಿ ಸಾಧಿಸಿದವರಿಗೆ ಪ್ರೋತ್ಸಾಹಿಸುವುದು. ಗ್ರಾಮೀಣ ವಲಯದಲ್ಲಿ 6.500ಕ್ಕೂ ಅಧಿಕ ಕ್ರೀಡಾ ಸಂಕೀರ್ಣಗಳ ಸ್ಥಾಪನೆ, ತರಬೇತಿದಾರರನ್ನು ಹಾಗೂ ಯುವ ಸಂಪನ್ಮೂಲಗಳನ್ನು ಒದಗಿಸಿ ಕೊಡುವುದು ಪ್ರತಿ ವರ್ಷ ವಲಯ ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟಗಳಲ್ಲಿ ಸ್ಪರ್ಧೆ ನಡೆಸಿ ಪ್ರೋತ್ಸಾಹಿಸುವುದು ಇತ್ಯಾದಿ ಗುರಿಗಳನ್ನಿಟ್ಟುಕೊಂಡು ಕ್ರೀಡಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.