ಗದಗ

ಬಲಿಷ್ಠ ದೇಶಕ್ಕೆ ಮೋದಿ ಬೆಂಬಲಿಸಿ

Published On :

ನರಗುಂದ: ಭಾರತ ಪ್ರಪಂಚದಲ್ಲಿ ದೊಡ್ಡಣ್ಣವಾಗಬೇಕಾದರೆ ಹಾಗೂ ಬಲಷ್ಠ ನಾಡನ್ನು ಕಟ್ಟಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಕೈ ಬಲಪಡಿಸಲು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಸಂಜೆ ನಮೋ ಬ್ರಿಗೇಡ್ ಸದಸ್ಯರು ನರೇಂದ್ರ ಮೋದಿ ಪ್ರಧಾನಿಯಾಗಲೆಂದು ಪೂಜೆ ಸಲ್ಲಿಸಲು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಕೈಗೊಂಡ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಎಂ.ಬಿ. ಕುಲಕರ್ಣಿ ಮಾತನಾಡಿ, ಯಲ್ಲಮ್ಮದೇವಿ ಪಾದಕ್ಕೆ ಶರಣಾಗಿ ಮೋದಿ ಪ್ರಧಾನಿಯಾಗಲೆಂದು ಪ್ರಾರ್ಥಿಸುವ ಸಲುವಾಗಿ ಈ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ಪಾದಯಾತ್ರೆಯು ಹುಣಿಸಿಕಟ್ಟಿ, ಸಿದ್ದಾಪುರ, ಜಗಾಪುರ, ಕಣಕಿಕೊಪ್ಪ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ತೆರಳಲಿದ್ದು, ಇದರಲ್ಲಿ 272 ಜನ ನಮೋ ಬ್ರಿಗೇಡ್ ಸದಸ್ಯರು ಪಾದಯಾತ್ರೆ ಮೂಲಕ ನರೇಂದ್ರ ಮೋದಿ ಬಗ್ಗೆ ಜಾಗೃತಿ ಮೂಡಸಲಿದ್ದಾರೆ ಎಂದರು.
ಎಫ್.ಆರ್. ಪಾಟೀಲ, ತಾಪಂ ಸದಸ್ಯ ಗುರಪ್ಪ ಆದಪ್ಪನವರ, ಮುತ್ತು ಜ್ಞಾನೋಪಂತ, ಬಸವರಾಜ ಪಾಟೀಲ, ನಂದೀಶ ಮಠದ, ಸಂಗು ಕಂಠಿ, ಬಸವರಾಜ ತಾವರೆ, ಯೋಗೀಶ ಗುಡಾರದ, ಸಂಗಪ್ಪ ಪೂಜಾರ, ಪ್ರಕಾಶ ಪಟ್ಟಣಶೆಟ್ಟಿ, ನಾಗಾರಜ ಚಿತ್ರಗಾರ, ಪ್ರವೀಣ ನರಗುಂದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.