ವಿದ್ಯಾದಾನ ಸಮಿತಿ ಆವರಣದಲ್ಲಿ ವಿಮಾನಗಳ ಹಾರಾಟ!
ಗದಗ: ಸ್ಥಳೀಯ ವಿದ್ಯಾದಾನ ಸಮಿತಿ ಬಯಲಿನಲ್ಲೊಂದು ವಿಸ್ಮಯವೇ ನಡೆದಿತ್ತು. ಯಾವ ವೈಮಾನಿಕ ಪರೀಕ್ಷಾ ತಾಣಕ್ಕಿಂತ ಕಡಿಮೆ ಇಲ್ಲದಂತೆ 7 ರೀತಿಯ ಮಿನಿ ವಿಮಾನಗಳು ಬೃಹತ್ ನಾಗರಿಕ ವಿಮಾನಗಳಂತೆ ಹಾರಾಟ ನಡೆಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹೊಸದೊಂದು ಲೋಕ ಕೊಂಡೋಯ್ದವು.
ಧಾರವಾಡದ ಎಸ್‌ಡಿಎಂ ಕಾಲೇಜು ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಏರೋಟಿಮ್ ಬೆಳಗಾವಿಯ ಎರೋಸ್ಪೋರ್ಟ್ಸ್ ಹಾಬಿ ಕ್ಲಬ್ ಹಾಗೂ ವಿದ್ಯಾದಾನ ಸಮಿತಿ ಇವುಗಳ ಆಶ್ರಯದಲ್ಲಿ ವಿದ್ಯಾದಾನ ಸಮಿತಿಯ ಆವರಣದಲ್ಲಿ ವಿದ್ಯಾರ್ಥಿಗಳಲ್ಲಿ ವಿಮಾನಗಳ ರಚನೆ, ಹಾರಾಟ ಹಾಗೂ ಆ ಕ್ಷೇತ್ರದಲ್ಲಿರುವ ಉದ್ಯೋಗ ಅವಕಾಶಗಳ ಕುರಿತು ಜಾಗೃತಿ ಮೂಡಿಸಲು ಮಿನಿ ಮಾದರಿ ವಿಮಾನಗಳ ಹಾರಾಟದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
7 ರೀತಿ ವೈಮಾನಿಕ ಪ್ರಯೋಗ: ವಿದ್ಯಾದಾನ ಸಮಿತಿಯ ಹಳೆಯ ವಿದ್ಯಾರ್ಥಿ ಹಾಗೂ ಈಗ ಧಾರವಾಡದ ಎಸ್‌ಡಿಎಂ ಕಾಲೇಜು ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡುತ್ತಿರುವ ಏರೋಟಿಮ್ ಸದಸ್ಯ ಸಚಿನ ರೇವಣಕರ ಅವರ ಸಂಯೋಜನೆಯಲ್ಲಿ ಬೆಳಗಾವಿಯ ಎರೋಸ್ಪೋರ್ಟ್ಸ್ ಹಾಬಿ ಕ್ಲಬ್‌ನ ಪ್ರೊ. ಅರ್ಜುನ ಬಿಲಾವರ ಹಾಗೂ ಅವರ ಪುತ್ರ ರಾಷ್ಟ್ರೀಯ ಖ್ಯಾತಿಯ ಏರೋಮಾಡಲಿಂಗ್‌ನಲ್ಲಿ ಪರಿಣಿತಿ ಪಡೆದ ಶುಭಂ ಬಿಲಾವರ 7 ರೀತಿಯ ವೈಮಾನಿಕ ಪ್ರಯೋಗ ತೋರಿಸಿ ಜನಮನಸೊರೆಗೊಂಡರು.
ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾದಾನ ಸಮಿತಿಯ ಸದಸ್ಯೆ ಶುಭಲಕ್ಷ್ಮಿ ಹುಯಿಲಗೋಳ, ಆಡಳಿತಾಧಿಕಾರಿ ಬಿ.ಎಸ್. ಜಾಧವ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರಾದ ಎಂ.ಸಿ. ಕಟ್ಟಿಮನಿ, ಬಿ.ಎಲ್. ಚವ್ಹಾಣ, ಎಸ್.ಸಿ. ಹೆದ್ದೂರಿ, ಉಪಪ್ರಾಚಾರ್ಯ ಎನ್.ಎಸ್. ಬಟ್ಟೂರ, ಎಸ್.ಎಂ. ಮುಂಡರಗಿ, ಎಂ.ಡಿ. ವಡವಿ, ಆರ್.ಕೆ. ಕೋನೆ ಸೇರಿದಂತೆ ವಿದ್ಯಾದಾನ ಸಮಿತಿ ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

