ಜಿನ್ನಿಂಗ್ ಫ್ಯಾಕ್ಟರಿ: ತಪ್ಪಿತಸ್ಥರ ವಿರುದ್ಧ ಮೊಕದ್ದಮೆ
ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಜನರ ಬದುಕಿಗೆ ಕಂಟಕವಾದ ಜಿನ್ನಿಂಗ್ ಫ್ಯಾಕ್ಟರಿಗೆ ಶನಿವಾರ ಭೇಟಿ ನೀಡಿದ ತಹಸೀಲ್ದಾರ್ ಎ.ಜೆ. ಪಂಡಿತ ನೇತೃತ್ವದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು. ಅಲ್ಲಿರುವ ಆ್ಯಸಿಡ್ ಬ್ಯಾರೆಲ್ಗಳನ್ನು ಸೀಜ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದರು. ಎರಡೂ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಬೀಜ ಡಿಲಿಂಕ್ ಮಾಡಲು ಶೇಖರಿಸಿದ ಆ್ಯಸಿಡ್ ಬ್ಯಾರೆಲ್ಗಳ ಪಂಚನಾಮೆ ಮಾಡಲು ತಹಸೀಲ್ದಾರರು ಅಧಿಕಾರಿಗಳಿಗೆ ಸೂಚಿಸಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರವಾನಗಿ ಇಲ್ಲದಿರುವ ಬಗೆಗೆ ದೃಢ ಪಡಿಸಿಕೊಂಡರು. ರೈತರ ಅಹವಾಲು ಆಲಿಸಿದರು. ಪರಿಸರ ಸಂರಕ್ಷಣಾ ನಿಯಮಾವಳಿ ಗಾಳಿಗೆ ತೂರಿದ ಪರಿಣಾಮ ನೀರು ಹರಿದ ರೀತಿಯಲ್ಲಿ ಆ್ಯಸಿಡ್ ಹರಿಸಲಾಗಿದೆ. ಇದನ್ನು ಸೇವಿಸಿದ ಸಾಕು ಪ್ರಾಣಿಗಳು ಅಸುನೀಗಿವೆ. ಫ್ಯಾಕ್ಟರಿ ಸುತ್ತಲಿನ ಬೆಳೆಗಳು ಮತ್ತು ಮರಗಳು ಒಣಗಿವೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ತಿಳಿಸಿದರು. ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗ್ರಾಮಲೆಕ್ಕಿಗ ಪಿ.ವೈ. ತಳವಾರ, ಆರ್.ಐ. ರಾಜಕ್ಕನವರ, ಗ್ರಾಮಸ್ಥರಾದ ಸುನೀಲ ಚಿಲ್ಝರಿ, ಆನಂದ ಬಾಂಡಗೆ, ಮಂಜುನಾಥ ಭಜಂತ್ರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಮರಡಿ, ಮುತ್ತು ಕನ್ಯಾಳ, ಕಾಳಿಂಗ ಚಿಲ್ಝರಿ, ಕಳಕಪ್ಪ ಭಜಂತ್ರಿ, ಮುತ್ತು ಪಾಟೀಲ, ಪರಸಪ್ಪ ಕನ್ಯಾಳ, ಶಂಕ್ರಪ್ಪ ಹೂಗಾರ, ಕೆ.ಎಸ್. ಹೂಗಾರ, ಕರವೇಯ ಪ್ರಶಾಂತ ಕಲಾಲ, ಕುಮಾರ ಜುಂಜಾ, ಪ್ರಶಾಂತ ಬಡಿಗೇರ, ಅಕ್ಷಯ ವನ್ನಾಲ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

