ಅಕ್ರಮ ಮದ್ಯ ಮಾರಾಟ ನಿಷೇಧಿಸಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 7
ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಈ ಕೂಡಲೇ ಈ ಅಕ್ರಮ ಮದ್ಯ ಮಾರಾಟ ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಇತ್ತೀಚಿಗೆ ವಿಶೇಷ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಪ್ರಶಾಂತ ಕಲಾಲ ಮಾತನಾಡಿ, ರೋಣ ತಾಲೂಕಿನ ಹೊಸಳ್ಳಿ, ಹೊಳೆಆಲೂರು, ನಿಡಗುಂಡಿ, ಅಬ್ಬಿಗೇರಿ, ಮಾರನಬಸರಿ, ಹಾಲಕೇರಿ, ಜಕ್ಕಲಿ, ಹಿರೇಹಾಳ, ಸೂಡಿ ರಾಜೂರ, ಇಟಗಿ, ಮುಶಿಗೇರಿ, ಲಕ್ಕಲಕಟ್ಟಿ, ಜಿಗೇರಿ, ಗೊಗೇರಿ, ರಾಮಾಪುರ, ಮಾಟರಂಗಿ ಹಿರೇಅಳಗುಂಡಿ, ಬೇವಿನಕಟ್ಟಿ, ದಿಂಡೂರ, ನಾಗೇಂದ್ರಗಡ, ಕಲ್ಲಿಗನೂರ ಗ್ರಾಮಗಳಲ್ಲಿ ಹಾಗೂ ಗಜೇಂದ್ರಗಡ ಪಟ್ಟಣದ ಡಬ್ಬಾ ಅಂಗಡಿಗಳಲ್ಲಿ, ಜತೆಗೆ ದಿನಸಿ, ಕೋಲ್ಡ್ಡ್ರಿಂಕ್ಸ್ ಶಾಪ್ಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಮದ್ಯ ಸಾಗಾಟ ಜತೆಗೆ ಇದರ ವ್ಯಸನಿಗಳಿಂದಾಗಿ ಸಮಾಜದ ಸ್ವಾಸ್ಥ್ಯ ಕದಡುತ್ತಿದೆ. ಸಮಾಜಕ್ಕೆ ಕಂಟಕಪ್ರಾಯವಾಗಿರುವ ಇಂತಹ ವ್ಯವಸ್ಥೆಯಿಂದ ಹಳ್ಳಿಗಾಡಿನ ಬಡ ಹಾಗೂ ಶ್ರಮಿಕ ಕುಟುಂಬಗಳ ಬದುಕು ಬೀದಿ ಪಾಲಾಗುತ್ತಿದೆ ಎಂದು ಆಡಳಿತ ವ್ಯವಸ್ಥೆಯ ವಿರುದ್ಧ ಹರಿಹಾಯ್ದ ಅವರು ಕೂಡಲೇ ಅಬಕಾರಿ ಇಲಾಖೆ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಮಾಡುವ ದುಷ್ಕರ್ಮಿಗಳ ವಿರುದ್ಧ ಉಗ್ರ ಕ್ರಮಕ್ಕೆ ಮುಂದಾಗದಿದ್ದಲ್ಲಿ ಕರವೇ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘಟಕರಿಂದ ವಿಶೇಷ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ವೈ.ಕೆ. ನದಾಫ್ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ನಗರ ಘಟಕ ಅಧ್ಯಕ್ಷ ರವಿ ಭಜಂತ್ರಿ, ಶಂಕರ ಚನ್ನಿ, ರಂಜಾನಸಾಬ್ ಸಂಕನೂರ, ಮಾರುತಿ ಸಂದಿಮನಿ, ಅಕ್ಷಯ ವನ್ನಾಲ, ರಾಜು ಲಕ್ಕಲಕಟ್ಟಿ, ವಿನಾಯಕ ಪಾಟೀಲ, ಪ್ರಶಾಂತ ಚಳಗೇರಿ, ಗೋವಿಂದ ಮನ್ನೇರಾಳ, ಶರಣಪ್ಪ ಗೋಡಿ, ಶಂಕರ ಹುಬ್ಬಳ್ಳಿ, ಅಂಬರೇಶ ಹುಣಸಗಿ, ದೇವಪ್ಪ ಬಂಕದ, ರಾಘು ನಿಡಗುಂದಿ ಮುಂತಾದವರು ಪಾಲ್ಗೊಂಡಿದ್ದರು.
--
ಪರೋಪಕಾರದಿಂದ ಮನುಷ್ಯನಿಗೆ ನೆಮ್ಮದಿ
ಮುಂಡರಗಿ: ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರಲಿ, ಅದರಲ್ಲಿ ಪರೋಪಕಾರ ಜೀವನ ಇದ್ದರೆ ನೆಮ್ಮದಿ ಖಂಡಿತ ಸಿಗುತ್ತದೆ ಎಂದು ಪೇಠಾಲೂರು ಹಾಲೇಶ್ವರ ಶರಣರು ಹೇಳಿದರು.
ಅವರು ಈಚೆಗೆ ತಾಲೂಕಿನ ಮೇವುಂಡಿ ಗ್ರಾಮದ ಲವ್ ಸ್ಟಾರ್ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವಕ ಸಂಘ, ಮೈತ್ರಿ ಸಾಂಸ್ಕೃತಿಕ ಯುವತಿ ಸಂಘ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಗ್ರಾಪಂ ಮೇವುಂಡಿ, ಪಿಎಚ್ಸಿ ಡಂಬಳ, ಹುಬ್ಬಳ್ಳಿ ಜಯಪ್ರಿಯ ಆಸ್ಪತ್ರೆ ಆಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸರ್ಕಾರ ಎಲ್ಲರಿಗೂ ಉತ್ತಮ ಆರೋಗ್ಯ ದೊರೆಯಬೇಕೆನ್ನುವ ಉದ್ದೇಶದಿಂದ ಹಲವಾರು ಯೋಜನೆ ಜಾರಿಗೊಳಿಸುತ್ತಿದೆ. ಜತೆಗೆ ಸಂಘ ಸಂಸ್ಥೆಗಳು ಯುವಸಂಘಟನೆಗಳು ವೃದ್ಧರಿಗೆ ಉಚಿತ ನೇತ್ರ ತಪಾಸಣೆ, ಅವಶ್ಯವಿದ್ದರೆ ಶಸ್ತ್ರಚಿಕಿತ್ಸೆ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. ಇದರಿಂದ ಬಡವರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಹೊರಗಣ್ಣಿನ ಆರೋಗ್ಯದ ಜೊತೆಗೆ ತಮ್ಮ ಅಂತರಕಣ್ಣಿನಿಂದ ಸಮಾಜದಲ್ಲಿ ಒಳ್ಳೆಯದನ್ನು ಮಾಡುತ್ತ ಸಮಾಮುಖಿಯಾಗಿ ಕೆಲಸ ಮಾಡಬೇಕು ಎಂದರು.
ಡಾ.ಇಂದ್ರೀಶ ಹಾಗೂ ಆರೋಗ್ಯ ಸಹಾಯಕ ಬಿ.ಬಿ. ನಿಡಗುಂದಿ ನೇತ್ರ ಶಿಬಿರ ಉದ್ದೇಶ ಮತ್ತು ನೇತ್ರ ಚಿಕಿತ್ಸೆ ಜತೆಗೆ ಗ್ರಾಮ ನೈರ್ಮಲ್ಯದ ಕುರಿತು ಮಾತನಾಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ದಲಭಂಜನ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಚನ್ನಪ್ಪ ಕವಲೂರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯರಾದ ಶಕುಂತಲಾ ಬಣಕಾರ, ಶ್ರೀಶೈಲಪ್ಪ ಕೊರ್ಲಹಳ್ಳಿ, ಶೇಖವ್ವ ಮುದಿಯಜ್ಜನವರ, ಕನಕವ್ವ ತಳವಾರ ಹಾಗೂ ನೇತ್ರ ವೈದ್ಯರಾದ ಗಿರೀಶ, ಡಾ.ಸಿ.ಎಚ್. ರೋಣದ, ಮಲ್ಲಪ್ಪ ಕೋವಿ, ಡಿ.ಎನ್. ರಾಟಿ, ಸಂಘದ ಮಹಾಂತೇಶ ಕೊರ್ಲಹಳ್ಳಿ, ಬಸವರಾಜ ಬಣಕಾರ ಪಾಲ್ಗೊಂಡಿದ್ದರು. ಲವ್ ಸ್ಟಾರ್ ಸಾಂಸ್ಕೃತಿಕ, ಕ್ರೀಡಾ ಯುವಕ ಸಂಘದ ಅಧ್ಯಕ್ಷ ಅಂದಪ್ಪ ಹಾರೋಗೇರಿ ಪ್ರಾಸ್ತಾವಿಕ ಮಾತನಾಡಿದರು. ಮೈತ್ರಿ ಯುವತಿ ಸಂಘದ ಸದಸ್ಯರು ಪ್ರಾರ್ಥಿಸಿದರು. ಪ್ರಭು ಕೊರ್ಲಹಳ್ಳಿ ಸ್ವಾಗತಿಸಿದರು. ಯಲ್ಲಪ್ಪ ಹಂದ್ರಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

