ಅರಣ್ಯ ಸಂಪತ್ತು ಉಳಿಸಿ: ಬಸವರಾಜ ಮತ್ತಿಕಟ್ಟಿ
ಗಜೇಂದ್ರಗಡ: ಮಾನವನ ದುರಾಸೆಗೆ ಅಮೂಲ್ಯ ನಿಸರ್ಗ ಪರಿಸರ ಸಂಪತ್ತು ಇಂದು ನಶಿಸುತ್ತಿದೆ. ಇದರಿಂದ ಭೂಮಿಯ ತಾಪಮಾನದಲ್ಲಿ ಏರು ಪೇರಾಗಿ ಜೀವಜಂತುಗಳಿಗೆ ಮಾರಕವಾಗುವುದು. ಈ ನಿಟ್ಟಿನಲ್ಲಿ ಮರ ಬೆಳೆಸಿ ಹಸಿರು ಸಂಪತ್ತು ಉಳಿಸಲು ಮುಂದಾಗಬೇಕು ಎಂದು ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ ಮತ್ತಿಕಟ್ಟಿ ಹೇಳಿದರು.
ಅವರು ಈಚೆಗೆ ಸ್ಥಳೀಯ ವಿಘ್ನೇಶ್ವರ ಪಪೂ ಮಹಾವಿದ್ಯಾಲಯ ಉಪನಿರ್ದೇಶಕರು, ಪಪೂ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಗದಗ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಕೋ ಕ್ಲಬ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಸಿರು ಸೃಷ್ಟಿಯ ಕೊಡುಗೆಯಾಗಿದ್ದು ಇಂತಹ ಪರಿಸರ ಉಳಿವಿಗಾಗಿ ಆಡಳಿತದ ಜತೆಗೆ ಸಮುದಾಯ ಕೈಜೋಡಿಸಿ ಪರಿಸರ, ಅರಣ್ಯ ಸಂಪತ್ತಿನ ಬಗೆಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಶಿಕ್ಷಕ ಸಮೂಹ ಮುಂದಾಗಬೇಕು. ಕೇವಲ ಸಭೆ ಸಮಾರಂಭಗಳಲ್ಲಿ ಹಸಿರು ಸಂಪತ್ತಿನ ಬಗೆಗೆ ಮಾತನಾಡಿದರೆ ಸಾಲದು, ನಮ್ಮ ನಿತ್ಯ ಜೀವನದ ಕೆಲ ಸಮಯವಾದರೂ ಪರಿಸರ ಸಂಪತ್ತು ಉಳಿಸಿ ಬೆಳೆಸುವ ಕಡೆಗೆ ಗಮನವಿದ್ದಾಗ ಮಾತ್ರ ಇಂತಹ ಕಾರ್ಯಕ್ರಮ ಸಾರ್ಥಕಗೊಳ್ಳುತ್ತವೆ. ಈ ದಿಸೆಯಲ್ಲಿ ನಾವೆಲ್ಲರೂ ಇಂದೇ ಪಣ ತೊಟ್ಟು ಪ್ರಕೃತಿ ಮಾತೆಯ ರಕ್ಷಣೆಗೆ ಮುಂದಾಗೋಣ ಎಂದರು.
ಪ್ರಾ. ಎಲ್.ಕೆ. ಹಿರೇಮಠ ಮಾತನಾಡಿ, ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು. ಪ್ರಾ. ಡಿ.ಎಸ್. ಗಾಳಿ, ಎ.ಬಿ. ಸಂಕನೂರ, ಎಸ್.ಕೆ. ಕುಂಬಾರ, ಎನ್.ಎಸ್. ಕಲಕೇರಿ, ಎಂ.ಎಲ್. ಕೋಟಿ, ಎಸ್.ಕೆ. ಹೆರಕಲ್, ನಾಗರಾಜ, ಶಿವಕುಮಾರ ಮಠದ, ಪ್ರಭು ತಾರಿಹಾಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

