ಸುದ್ದಿ ಸಂಕ್ಷೇಪ
ಗದಗ: ಇಂದು ಬ್ಲಾಕ್ ಮಟ್ಟದ ಕಲಿಕೋತ್ಸವ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 9ರಂದು ಬೆಳಗ್ಗೆ 10 ಗಂಟೆಗೆ ಗದಗ ಗ್ರಾಮೀಣ ವಲಯದ ಬ್ಲಾಕ್ ಮಟ್ಟದ ಕಲಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಕ್ಲಸ್ಟರ್ ಹಂತದಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಹೂಗಾರ ಹಾಗೂ ಸಮನ್ವಯಾಧಿಕಾರಿ ತಿಳಿಸಿದ್ದಾರೆ.
ಶುಲ್ಕ ಏರಿಕೆ: ಖಂಡನೆ
ಗದಗ: ರಾಜ್ಯದ ಖಾಸಗಿ ಅನುದಾನಿತ ಪಪೂ ಕಾಲೇಜುಗಳ ಶುಲ್ಕ ಶೇ. 20ರಷ್ಟು ಏರಿಸಿ ಆದೇಶ ಹೊರಡಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಗದಗ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಪಪೂ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕ ಏರಿಕೆ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಶಿಕ್ಷಣದ ವ್ಯಾಪರೀಕರಣದ ಮುಖವಾಡ ಬಹಿರಂಗ ಪಡಿಸಿದೆ. ಹಿಂದೆ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ) 2006 ಕಾಯ್ದೆ ಜಾರಿಮಾಡಲು ಹೊರಟಾಗ ರಾಜ್ಯಾದ್ಯಂತ ಎಸ್ಎಫ್ಐ ಪ್ರತಿಭಟನೆಯಿಂದ ಅದನ್ನು ತಡೆಹಿಡಿದಿತ್ತು. ಆದರೆ ಈ ಕಾಯ್ದೆ ಜಾರಿಗೆ ಬಾರದ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ಹಣದ ಆಸೆಗಾಗಿ ಈಗ ಪಪೂ ವಿದ್ಯಾರ್ಥಿಗಳಿಂದ ಶುಲ್ಕದ ಮೂಲಕ ಹಣ ವಸೂಲಿಗೆ ಮುಂದಾಗಿದೆ. ಇದರಿಂದಾಗಿ ಬಡ, ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವ ಅಪಾಯಗಳಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಈ ಶುಲ್ಕ ಏರಿಕೆಯಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯಾರ್ಥಿಗಳ ದಾಖಲಾತಿ, ನೋಂದಣಿ, ಬೋಧನೆ, ಪ್ರಯೋಗಶಾಲೆ, ವಿಳಂಬ ದಾಖಲಾತಿ ದಂಡ ಶುಲ್ಕ, ವಿಶೇಷ ವಿಳಂಬ ದಾಖಲಾತಿ ದಂಡ ಶುಲ್ಕ, ಕ್ರೀಡಾಶುಲ್ಕ, ಪಠ್ಯೇತರ ಚಟುವಟಿಕೆ ಶುಲ್ಕ, ಗ್ರಂಥಾಲಯ ಶುಲ್ಕ, ವಿದ್ಯಾರ್ಥಿಗಳ ಕಲ್ಯಾಣ ನಿಧಿ, ಶಿಕ್ಷಕರ ಕಲ್ಯಾಣ ನಿಧಿ, ಶೌಚಾಲಯ, ನೀರಿನ ಶುಲ್ಕ ಸೇರಿ ರು. 3732 ಇರುವ ಶುಲ್ಕವನ್ನು ರು. 4485ಕ್ಕೆ ಹೆಚ್ಚಿಸಲಾಗಿದ್ದು, ಪ್ರಥಮ ಪಿಯು ಪ್ರಾಯೋಗಿಕ ಪ್ರತಿ ವಿಷಯಕ್ಕೆ ರು. 8, ಪರೀಕ್ಷಾ ಶುಲ್ಕ ರು. 28, ಮತ್ತು ದ್ವಿತೀಯ ಪಿಯು ಪ್ರಾಯೋಗಿಕ ಪ್ರತಿ ವಿಷಯಕ್ಕೆ ರು. 14, ಪರೀಕ್ಷಾ ಶುಲ್ಕ ರು. 17, ವಿಶೇಷ ದಂಡ ಶುಲ್ಕ ದಿನಕ್ಕೆ ರು. 50 ನಂತೆ ಗರಿಷ್ಠ 20 ದಿನಕ್ಕೆ ರು. 1000 ದಂಡ ಶುಲ್ಕ ಪಾವತಿಸಬೇಕಿದೆ. ಸರ್ಕಾರ ಹೊರಡಿಸಿರುವ ಶುಲ್ಕ ಏರಿಕ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟಿಸಲಾಗುವುದೆಂದು ಎಂದು ಪೀರು ರಾಠೋಡ, ಶಿವಾನಂದ ಬೋಸ್ಲೆ, ಮಾನವ್ವ ರಾಠೋಡ, ಶಿವಾಜಿ ಗಡ್ಡದ, ಬಾಲಕೃಷ್ಣ, ಶರಣಯ್ಯ ಸೂಗಿರಯಗಯನಮಠ, ರಾಮು ರಾಠೋಡ, ಬಾಲಕೃಷ್ಣ, ಸಾವಿತ್ರಿ ಲಮಾಣಿ, ಪರಶುರಾಮ, ಚಂದ್ರು, ರಫೀಕ, ಪ್ರಶಾಂತ, ಪ್ರೇಮಾ, ಸುಜಾತಾ, ಶಿವರಾಜ ಕಮ್ಮಾರ, ಶಿವಾಜಿ ಗಡ್ಡದ, ಪ್ರಕಾಶ ಹೆಳವರ, ಆಫ್ರೀನ, ಗಂಗಮ್ಮ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

